ಉಗ್ರರ ದಾಳಿ ಸೂಚನೆ; ಪಂಜಾಬ್‌ನಲ್ಲಿ ಹೈ ಅಲರ್ಟ್
ನವದೆಹಲಿ, ಡಿಸೆಂಬರ್ 26: ವರ್ಷಾಂತ್ಯದಲ್ಲಿ ಪಂಜಾಬ್‌ನಲ್ಲಿ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ. ರಾಜ್ಯಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಲಾಗಿದ್ದು, ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಐಎಸ್ಖಲಿಸ್ತಾನ ಮೂಲದ ಸಂಘಟನೆಗೆ ಪಂಜಾಬ್‌ನಲ್ಲಿ ದಾಳಿ ನಡೆಸುವ ಹೊಣೆಯನ್ನು ನೀಡಿದೆ. ಗುಪ್ತಚರ ಇಲಾಖೆಗೆ ಈ ಬಗ್ಗೆ ಸಿಕ್ಕಿರುವ ಮಾಹಿತಿ ಡಿಕೋಡ್ ಮಾಡಲಾಗಿದ್ದು, ಭದ್ರತೆ ಹೆಚ್ಚಳ ಮಾಡಲಾಗಿದೆ.
ಪಂಜಾಬ್‌ಗೆ ಸ್ಫೋಟಕಗಳನ್ನು ಸಾಗಣೆ ಮಾಡಲು ಈಗಾಗಲೆ ಒಮ್ಮೆ ಪ್ರಯತ್ನ ಮಾಡಲಾಗಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆ ಕೈ ಸೇರಿದೆ. ಪಂಜಾಬ್‌ನ ವಿವಿಧ ನಗರಗಳು ಮತ್ತು ಗಡಿ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಖಲಿಸ್ತಾನ ಉಗ್ರರ ಕಾರ್ಯಾಚರಣೆಯ ಪ್ರಮುಖ ಸ್ಥಾನ ಕೆನಡಾದಲ್ಲಿದೆ. ಯು. ಕೆ.ಯಲ್ಲಿಯೂ ತಮ್ಮ ಕಾರ್ಯವನ್ನು ವಿಸ್ತರಣೆ ಮಾಡಲು ಖಲಿಸ್ತಾನ ಉಗ್ರರು ಪ್ರಯತ್ನ ನಡೆಸಿದ್ದರು. ಗುಪ್ತಚರ ಇಲಾಖೆಯೂ ಖಲಿಸ್ತಾನ ಉಗ್ರರ ಬಗ್ಗೆ ಮಾಹಿತಿ ಸಂಗ್ರಹ ಮಾಡುತ್ತಿತ್ತು.
2016ರಲ್ಲಿ ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಮೇಲೆ ಉಗ್ರರ ದಾಳಿ ನಡೆದಿತ್ತು. ಇದೇ ಮಾದರಿಯ ದಾಳಿಗಳು ನಡೆಯಬಹುದು ಎಂದು ಅಂದಾಜಿಸಲಾಗಿದ್ದು, ಭದ್ರತೆ ಹೆಚ್ಚಳ ಮಾಡಲಾಗಿದೆ. ಸೇನಾಪಡೆಗಳು ಸಹ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿವೆ.











Click it and Unblock the Notifications