Get Updates
Get notified of breaking news, exclusive insights, and must-see stories!

Port Blair: ಪೋರ್ಟ್ ಬ್ಲೇರ್ ಹೆಸರು ಬದಲಾವಣೆ ಮಾಡಿದ ಕೇಂದ್ರ ಸರ್ಕಾರ; ಹೊಸ ಹೆಸರೇನು ತಿಳಿಯಿರಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿಯಾಗಿದ್ದ ಪೋರ್ಟ್ ಬ್ಲೇರ್ ಹೆಸರನ್ನು ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಪೋರ್ಟ್ ಬ್ಲೇರ್ ಅನ್ನು ಶ್ರೀ ವಿಜಯ ಪುರಂ ಎಂದು ನಾಮಕರಣ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ದೇಶವನ್ನು ವಸಾಹತುಶಾಹಿ ಮುದ್ರೆಗಳಿಂದ ಮುಕ್ತಗೊಳಿಸಲು ಯೋಜನೆಯ ಭಾಗವಾಗಿ ಮರುನಾಮಕರಣ ಮಾಡಲಾಗಿದೆ ಎಂದು ಹೇಳಿದರು.

ಮರುನಾಮಕರಣದ ಬಗ್ಗೆ ಮಾಹಿತಿ ನೀಡಿದ ಗೃಹ ಸಚಿವ ಅಮಿತ್ ಶಾ, ದೇಶದಲ್ಲಿರುವ ವಸಾಹತುಶಾಹಿಗಳ ಗುರುತುಗಳನ್ನು ಮುಕ್ತಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯನ್ನು ಸಾಕಾರಗೊಳಿಸಲು, ಪೋರ್ಟ್ ಬ್ಲೇರ್ ಹೆಸರನ್ನು ಶ್ರೀ ವಿಜಯ ಪುರಂ ಎಂದು ಮರುನಾಮಕರ ಮಾಡಿರುವುದಾಗಿ ತಿಳಿಸಿದರು.

Port blair renamed sri vijaya puram

ಬ್ರಿಟಿಷ್ ಆಡಳಿತದ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ವಸಾಹತುಶಾಹಿ ನೌಕಾಪಡೆಯ ಅಧಿಕಾರಿ ಕ್ಯಾಪ್ಟನ್ ಆರ್ಚಿಬಾಲ್ಡ್ ಬ್ಲೇರ್ ಅವರ ನೆನಪಿಗಾಗಿ ಪೋರ್ಟ್ ಬ್ಲೇರ್ ಎಂದು ಹೆಸರಿಡಲಾಗಿತ್ತು.

ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಶ್ರೀ ವಿಜಯ ಪುರಕ್ಕೆ ಪ್ರಮುಖ ಸ್ಥಾನವಿದೆ ಎಂದು ಅಮಿತ್ ಶಾ ಎಕ್ಸ್ ಖಾತೆಯಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಗೆಲುವನ್ನು ಸೂಚಿಸುವ ಸಲುವಾಗಿ ಶ್ರೀ ವಿಜಯ ಪುರಂ ಎಂದು ಹೆಸರಿಟ್ಟಿರುವುದಾಗಿ ತಿಳಿಸಿದ್ದಾರೆ.

ಅಮಿತ್ ಶಾ ಹೇಳಿದ್ದೇನು?

"ಪೋರ್ಟ್ ಬ್ಲೇರು ಎನ್ನುವುದು ವಸಾಹತುಶಾಹಿ ಪರಂಪರೆಯನ್ನು ಹೊಂದಿದ್ದು, ಶ್ರೀ ವಿಜಯ ಪುರಂ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯವನ್ನು ಮತ್ತು ಹೋರಾಟದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪಾತ್ರವನ್ನು ಸಂಕೇತಿಸಲು ಈ ಹೆಸರು ಇಡಲಾಗಿದೆ" ಎಂದು ಹೇಳಿದರು.

"ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ನಮ್ಮ ತ್ರಿವರ್ಣ ಧ್ವಜವನ್ನು ಮೊದಲು ಅನಾವರಣಗೊಳಿಸಿದ ಸ್ಥಳವಾಗಿದೆ. ವೀರ್ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಹೋರಾಡಿ, ಇದೇ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು" ಎಂದು ಹೇಳಿದರು.

"ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಒಂದು ಕಾಲದಲ್ಲಿ ಚೋಳರ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿರುವ ಐತಿಹ್ಯವಿದೆ. ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿಯ ಮಹತ್ವಾಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಿದೆ" ಎಂದು ಹೇಳಿದರು.

2028ರಲ್ಲಿ ಪ್ರಧಾನಿ ಮೋದಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ಮೂರು ದ್ವೀಪಗಳಿಗೆ ಮರು ನಾಮಕರಣ ಮಾಡಿದ್ದರು. ರಾಸ್ ಐಲ್ಯಾಂಡ್ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ, ನೀಲ್ ಐಲ್ಯಾಂಡ್‌ಗೆ ಶಹೀದ್ ದ್ವೀಪ ಮತ್ತು ಹ್ಯಾವ್ಲಾಕ್ ದ್ವೀಪಕ್ಕೆ ಸ್ವರಾಜ್ ದ್ವೀಪ ಎಂದು ಮರುನಾಮಕರಣ ಮಾಡಲಾಗಿದೆ.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಹಲವು ಪ್ರಮುಖ ಸ್ಥಳಗಳ ಹೆಸರನ್ನು ಮರುನಾಮಕರಣ ಮಾಡಿದೆ. ಭಾರತದಲ್ಲಿ ಕೂಡ ಹಲವು ಜಿಲ್ಲಾ ಕೇಂದ್ರಗಳ ಹೆಸರನ್ನು ಬದಲಾವಣೆ ಮಾಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+