ಚುನಾವಣಾ ಫಲಿತಾಂಶ ಮೋದಿ ನಾಯಕತ್ವದ ಗೆಲುವು
ಅಹಮದಾಬಾದ್, ಡಿಸೆಂಬರ್ 18 : ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶದ ಬಗ್ಗೆ ಬಿಜೆಪಿ ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರು ಇಟ್ಟ ನಂಬಿಕೆಗೆ ಕೈಗನ್ನಡಿ. ಅಭಿವೃದ್ಧಿಯ ರಾಜಕೀಯಕ್ಕೆ ಜನರು ನೀಡಿದ ಬೆಂಬಲ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಸೋಮವಾರ ಸಂಸತ್ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು ವಿಕ್ಟರಿ ಸಿಂಬಲ್ ತೋರಿಸುವ ಮೂಲಕ ಪಕ್ಷದ ಗೆಲುವನ್ನು ಸಂಭ್ರಮಿಸಿದರು.

ಹಿರಿಯ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಪ್ರಕಾಶ್ ಜಾವಡೇಕರ್ ಅವರು ಸಹ ಫಲಿತಾಂಶ ಮೋದಿ ನಾಯಕತ್ವಕ್ಕೆ ಸಿಕ್ಕ ಫಲ ಎಂದು ಹೇಳಿದ್ದಾರೆ. ಸಾಕ್ಷಿ ಮಹರಾಜ್ ಈ ಫಲಿತಾಂಶ ನರೇಂದ್ರ ಮೋದಿ ಅವರ ಮ್ಯಾಜಿಕ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸಚಿವ ಗಿರಿರಾಜ್ ಸಿಂಗ್ ಅವರು, 'ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರಿಗೆ ಇದು ಮೊದಲ ಸೋಲು. ಅವರ ಚರಿಷ್ಮಾ ಪಕ್ಕಕ್ಕೆ ಬಲ ತಂದು ಕೊಡುವುದಿಲ್ಲ' ಎಂದು ಫಲಿತಾಂಶವೇ ಹೇಳಿದೆ' ಎಂದು ವ್ಯಂಗ್ಯವಾಡಿದ್ದಾರೆ.
'ಅಭಿವೃದ್ಧಿ ಇಂದಿನ ರಾಜಕಾರಣದ ಪ್ರಮುಖ ಅಂಶ. ಆದ್ದರಿಂದ, ದೇಶದ ಜನರು ನರೇಂದ್ರ ಮೋದಿ ಅವರ ಜೊತೆಗಿದ್ದಾರೆ' ಎಂದು ಸಚಿವೆ ಸ್ಮೃತಿ ಇರಾನಿ ಹೇಳಿದರು.












Click it and Unblock the Notifications