Delhi Election 2025 Exit Poll: ಪೋಲ್ ಆಫ್ ಪೋಲ್ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು
ನವದೆಹಲಿ, ಫೆಬ್ರವರಿ 05: ದೆಹಲಿ ವಿಧಾನಸಭೆ ಚುನಾವಣೆ 2025ರ ಮತದಾನ ಇಂದು (ಫೆಬ್ರವರಿ 05) ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಮತದಾನೋತ್ತರ ಸಮೀಕ್ಷೆಗಳು ಪ್ರಕಟ ಆಗಿವೆ. ಹಾಗಾದರೆ ಪೋಲ್ ಆಫ್ ಪೋಲ್ಸ್ ಎಕ್ಸಿಟ್ ಪೋಲ್ ನಡೆಸಿದ ಸಮೀಕ್ಷೆ ಪ್ರಕಾರ, ದೆಹಲಿಯಲ್ಲಿ ಯಾವ ಪಕ್ಷಕ್ಕೆ ಗೆಲುವು ಹಾಗೂ ಮತಗಳೆಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಇಂದು ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಮತದಾನ ನಡೆದಿದ್ದು, ಸಂಜೆ 6 ಗಂಟೆ ವೇಳೆಗೆ ಮತದಾನ ಮುಕ್ತಾಯ ಆಗಿದ್ದು, ಶೇಕಡ 57.70ರಷ್ಟು ಮತದಾನವಾಗಿದೆ. ಇದರ ಬೆನ್ನಲ್ಲೇ ಹಲವು ಸಂಸ್ಥೆಗಳು ಮತದಾನೋತ್ತರ ಸಮೀಕ್ಷೆಗಳು ಪ್ರಕಟ ಮಾಡಿದೆ. ಈ ಪೈಕಿ ಪೋಲ್ ಆಫ್ ಪೋಲ್ಸ್ ಎಕ್ಸಿಟ್ ಪೋಲ್ ಪ್ರಕಾರ ದೆಹಲಿಯಲ್ಲಿ ಬಿಜೆಪಿ 41-47, ಎಎಪಿ 22-29, ಕಾಂಗ್ರೆಸ್ 0-1, ಪಕ್ಷೇತರ 0.1 ಸ್ಥಾನಗಳನ್ನು ಪಡೆಯಲಿವೆ

ದೆಹಲಿಯ 70 ವಿಧಾನಸಭೆ ಕ್ಷೇತ್ರಗಳ ರಣ ಕಣದಲ್ಲಿ 699 ಅಭ್ಯರ್ಥಿಗಳಿದ್ದು, ಆಯೋಗದಿಂದ ಚುನಾವಣಾ ಫಲಿತಾಂಶ ಫೆಬ್ರವರಿ 8ರಂದು ಅಂದರೆ ಶನಿವಾರ ಪ್ರಕಟ ಆಗಲಿದೆ. ದೆಹಲಿಯಲ್ಲಿ ಸರ್ಕಾರ ರಚನೆ ಮಾಡಲು ಬೇಕಾದ ಮ್ಯಾಜಿಕ್ ನಂಬರ್ 36. ರಾಜ್ಯದ ಆಡಳಿತ ಪಕ್ಷ ಎಎಪಿ.
ಇಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆದಿದೆ. ದೆಹಲಿ ಸೆಂಟ್ರಲ್ ಶೇಕಡ 55.24, ದೆಹಲಿ ಪೂರ್ವ ಶೇಕಡ 58.98, ನವದೆಹಲಿ 57.37, ದೆಹಲಿ ಉತ್ತರ ಶೇಕಡ 57.27, ದೆಹಲಿ ಈಶಾನ್ಯ 63.83, ದೆಹಲಿ ವಾಯುವ್ಯ 58.05, ಶಹದಾರಾ ಶೇಕಡ 61.35, ದೆಹಲಿ ದಕ್ಷಿಣ ಶೇಕಡ 55.72, ದೆಹಲಿ ಆಗ್ನೇಯ ಶೇಕಡ 53.77, ದೆಹಲಿ ನೈಋತ್ಯ 58.86, ದೆಹಲಿ ಪಶ್ಚಿಮ 57.42ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ದೆಹಲಿ ವಿಧಾನಸಭೆಯ 70 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಹುಮತಕ್ಕೆ 36 ಸ್ಥಾನಗಳ ಅಗತ್ಯವಿತ್ತು. ಇನ್ನು ಚಾಣಕ್ಯ ಸ್ಟಾಟರ್ಜಿಸ್ ಪ್ರಕಾರ ಬಿಜೆಪಿ 39ರಿಂದ 44 ಸ್ಥಾನ ಗೆಲಬಹುದು ಎಂದರೆ, ಆಪ್ 25 ರಿಂದ 28 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ಇನ್ನು ಕಾಂಗ್ರೆಸ್ 2-4 ಸ್ಥಾನಗಳಲ್ಲಿ ಗೆಲವು ಸಾಧಿಸುತ್ತದೆ ಎಂದು ತಿಳಿಸಿದೆ.
ಅರವಿಂದ್ ಕೇಜ್ರಿವಾಲ್ ಅವರ ಎಎಪಿ ಸತತ 3ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳಲು ಹೋರಾಡುತ್ತಿದೆ. ಆದರೆ, ಬಿಜೆಪಿ ರಾಷ್ಟ್ರ ರಾಜಧಾನಿಯಲ್ಲಿ 27 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. 15 ವರ್ಷಗಳ ಕಾಲ ದೆಹಲಿಯನ್ನು ಆಳಿದ ಕಾಂಗ್ರೆಸ್, ದೆಹಲಿ ವಿಧಾನಸಭೆಯ ಮೇಲೆ ಕಳೆದುಹೋದ ನಿಯಂತ್ರಣವನ್ನು ಮರಳಿ ಪಡೆಯಲು ಪ್ರಯತ್ನ ಮಾಡುತ್ತಿದೆ.












Click it and Unblock the Notifications