ವಿವಾದದಲ್ಲಿ ಪ್ರಧಾನಿ ಕಚೇರಿ ಟ್ವಿಟ್ಟರ್‌ ಖಾತೆ

ನವದೆಹಲಿ, ಮೇ.21: ದೇಶದ ಪ್ರಧಾನಿ ಹೆಸರಿನಲ್ಲಿರುವ ಅಧಿಕೃತ ಟ್ವಿಟ್ಟರ್‌ ಖಾತೆಯನ್ನು ಬದಲಾಯಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ @PMOIndia ಹೆಸರಿನ ಟ್ವೀಟರ್‌ ಖಾತೆಯನ್ನು ತೆರೆಯಲಾಗಿತ್ತು. ಆದರೆ ಮಂಗಳವಾರ ಪ್ರಧಾನ ಮಂತ್ರಿ ಸಚಿವಾಲಯ(ಪಿಎಂಒ)ದಲ್ಲಿನ ಕೆಲ ಅಧಿಕಾರಿಗಳು ಅದನ್ನು @PMOIndiaArchive ಎಂದು ಬದಲಾಯಿಸಿದ್ದಾರೆ.

ಈ ಮೂಲಕ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಮಾಡಿದ ಎಲ್ಲಾ ಟ್ವೀಟ್‌ಗಳನ್ನು ಅರ್ಕೈ‌‌‌ವ್‌ (ಹಳೆ ಪುಟಗಳ ಸಂಗ್ರಹ) ಆಗಿ ಬದಲಾಯಿಸಿದ್ದು ಮಾತ್ರವಲ್ಲದೇ @PMOIndia ಹೆಸರಿನ ಮತ್ತೊಂದು ಟ್ವಿಟ್ಟರ್‌ ಅಕೌಂಟ್‌ನ್ನು ಕ್ರಿಯೇಟ್‌ ಮಾಡಿದ್ದಾರೆ.[ರಮ್ಯಾ ಅಭಿಮಾನಿಗಳಿಗೆ ಜಗ್ಗೇಶ್ ಟ್ವೀಟ್ ಏಟು]

ಈ ರೀತಿ ಟ್ವಿಟ್ಟರ್‌ ಖಾತೆಯನ್ನು ಬದಲಾಯಿಸಿದ್ದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯುಪಿಎ ಈ ಕ್ರಮ ಡಿಜಿಟಲ್‌ ಆಸ್ತಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ರೂಪಿತವಾಗಿರುವ ಕಾನೂನಿಗೆ ವಿರೋಧಿಯಾಗಿದೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಟೀಕಿಸಿದ್ದಾರೆ.

@PMOIndia ಟ್ವಿಟ್ಟರ್‌ ಖಾತೆ ದೇಶದ ಆಸ್ತಿ. ಪ್ರಧಾನಿ ಬದಲಾದಂತೆ ಟ್ವಿಟ್ಟರ್‌ ಖಾತೆಯನ್ನು ಬದಲಾಯಿಸುವುದು ಸರಿಯಲ್ಲ ಎಂದು ಸೋಷಿಯಲ್‌ ಮೀಡಿಯಾ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಪುಟದಲ್ಲಿ ಹಳೆಯ ಟ್ವಿಟ್ಟರ್‌ ಖಾತೆ ಹೇಗಿತ್ತು. ಹೊಸದಾಗಿ ಹೇಗೆ ಬದಲಾಯಿಸಿದ್ದಾರೆ ಎನ್ನುವ ಚಿತ್ರವನ್ನು ನೀಡಲಾಗಿದೆ.

 ಹಳೇ ಖಾತೆ

ಹಳೇ ಖಾತೆ

ಟ್ವಿಟ್ಟರ್‌ನಲ್ಲಿ @PMOIndia ಹೆಸರಿನಲ್ಲಿದ್ದ ಹಳೇ ಖಾತೆ

 PMOIndiaArchive ಖಾತೆ

PMOIndiaArchive ಖಾತೆ

@PMOIndia ಹೆಸರಿನ ಖಾತೆಯನ್ನು ಬದಲಾಯಿಸಿ @PMOIndiaArchive ಖಾತೆ ಮಾಡಿದ್ದು ಹೀಗೆ

 ಅಧಿಕೃತ ಟ್ವಿಟ್ಟರ್‌ ಖಾತೆ

ಅಧಿಕೃತ ಟ್ವಿಟ್ಟರ್‌ ಖಾತೆ

ಹೊಸದಾಗಿ ಪಿಎಂಒ ಅಧಿಕಾರಿಗಳು ಸೃಷ್ಠಿ ಮಾಡಿದ @PMOIndiaಟ್ವಿಟ್ಟರ್‌ ಖಾತೆ

ಕಾನೂನು ವಿರೋಧಿ ಕ್ರಮ

ಈ ರೀತಿ ಟ್ವಿಟ್ಟರ್‌ ಖಾತೆಯನ್ನು ಬದಲಾಯಿಸಿದ್ದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯುಪಿಎ ಈ ಕ್ರಮ ಡಿಜಿಟಲ್‌ ಆಸ್ತಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ರೂಪಿತವಾಗಿರುವ ಕಾನೂನಿಗೆ ವಿರೋಧಿಯಾಗಿದೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಟೀಕಿಸಿದ್ದಾರೆ.

ಮೋದಿಯವರ ಟ್ವಿಟ್ಟರ್‌ ಖಾತೆ:

ಮೋದಿಯವರ ಟ್ವಿಟ್ಟರ್‌ ಖಾತೆ:

ನರೇಂದ್ರ ಮೋದಿಯವರ ಅಧಿಕೃತ ಟ್ವಿಟ್ಟರ್‌ ಖಾತೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+