ಶಾಲಾ ಮಕ್ಕಳಿಗಾಗಿ 'ಚಾಚಾ' ನರೇಂದ್ರ ಮೋದಿಯಿಂದ ಪುಸ್ತಕ
ನವದೆಹಲಿ, ಫೆಬ್ರವರಿ 5: 'ಚಾಚಾ' ಎಂದ ತಕ್ಷಣ ಮೊದಲಿಗೆ ನೆನಪಿಗೆ ಬರುವ ಹೆಸರು ಪಂಡಿತ್ ಜವಾಹರ್ ಲಾಲ್ ನೆಹರೂ. ಮಕ್ಕಳ ಮೇಲಿನ ನೆಹರೂ ಪ್ರೀತಿ ಮತ್ತು ಮಕ್ಕಳ ದಿಣಾಚರಣೆಯ ಕಾರಣಕ್ಕೆ ಚಾಚಾ ನೆಹರೂ ಹೆಸರು ಅಚ್ಚಳಿಯದೇ ಉಳಿದಿದೆ. ಇದೀಗ ಅದೇ ಹಾದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊರಟಿದ್ದಾರೆ.
ಮಕ್ಕಳಿಗಾಗಿ 'ಎಗ್ಸಾಮ್ ವಾರಿಯರ್ಸ್' ಎಂಬ ಪುಸ್ತಕ ಬರೆದಿರುವ ಪ್ರಧಾನಿ ಮೋದಿ, ಪುಸ್ತಕದಲ್ಲಿ ಮಕ್ಕಳಿಗೆ ಸಹಾಯಕವಾಗುವ ಹಲವು ಅಂಶಗಳನ್ನು ಉಲ್ಲೇಖಿಸಿದ್ದಾರೆ. 'ಪರೀಕ್ಷೆಗಳನ್ನು ಉತ್ಸವಗಳಂತೆ ಸಂಭ್ರಮಿಸಿ' ಎಂದು ಅವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕರೆ ನೀಡಿದ್ದಾರೆ. ಈ ಪುಸ್ತಕ 'ನರೇಂದ್ರ ಮೋದಿ ಆ್ಯಪ್'ನಲ್ಲೂ ಲಭ್ಯವಿದೆ.
ಒತ್ತಡಗಳನ್ನು ಹೋಗಲಾಡಿಸಿ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುವುದು ಹೇಗೆ ಎಂಬ ಬಗ್ಗೆ ಉಪಾಯಗಳು ಹಾಗೂ ಪೋಷಕರಿಗೆ ಸಲಹೆ ಮತ್ತು ಸೂಚನೆಗಳನ್ನು ಪುಸ್ತಕದಲ್ಲಿ ಮೋದಿ ನೀಡಿದ್ದಾರೆ. ಯೋಗಕ್ಕೆ ಪುಸ್ತಕದಲ್ಲಿಯೂ ಮಹತ್ವ ನೀಡಿರುವ ಪ್ರಧಾನಿ, ಯೋಗಾಸನಗಳು ಹಾಗೂ ಯೋಗದ ಫಲಗಳ ಕುರಿತು ವಿವರಿಸಿದ್ದಾರೆ.

193 ಪುಟುಗಳ, 25 ಮಂತ್ರಗಳಿರುವ ಈ ಪುಸ್ತಕವನ್ನು ಶನಿವಾರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಬಿಡುಗಡೆ ಮಾಡಿದ್ದಾರೆ.
ತಮ್ಮ ಪ್ರತಿ ತಿಂಗಳ ರೇಡಿಯೋ ಕಾರ್ಯಕ್ರಮ 'ಮನ್ ಕೀ ಬಾತ್'ಗೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳಿಂದ ಉತ್ತೇಜಿತರಾಗಿ ಪ್ರಧಾನಿ ವಿದ್ಯಾರ್ಥಿಗಳಿಗಾಗಿ ಈ ಪುಸ್ತಕ ಬರೆದಿದ್ದಾರಂತೆ.












Click it and Unblock the Notifications