ಏಪ್ರಿಲ್ 11ಕ್ಕೆ ಪ್ರಧಾನಿ ನರೇಂದ್ರ ಮೋದಿ ಸಿನಿಮಾ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಲನಚಿತ್ರ 'ಪಿಎಂ ನರೇಂದ್ರ ಮೋದಿ' ಏಪ್ರಿಲ್ ಹನ್ನೊಂದನೇ ತಾರೀಕು ಬಿಡುಗಡೆ ಆಗಲಿದೆ ಎಂದು ಸಿನಿಮಾದ ನಿರ್ಮಾಪಕ ಸಂದೀಪ್ ಸಿಂಗ್ ಶುಕ್ರವಾರ ಹೇಳಿದ್ದಾರೆ. "ಸಿನಿಮಾ ಬಿಡುಗಡೆ ದಿನವನ್ನು ಮುಂದೂಡಲಾಗಿದೆ" ಎಂದು ಸಾಮಾಜಿಕ ಮಾಧ್ಯಮದಲ್ಲಿ ಘೋಷಣೆ ಮಾಡಿದ್ದರು.
ಇನ್ನು ಸಿನಿಮಾ ಪರೀಕ್ಷೆ ಹಾಗೂ ಪ್ರಮಾಣ ಪತ್ರ ವಿತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಸೆನ್ಸಾರ್ ಮಂಡಳಿ ತಿಳಿಸಿತ್ತು. ಆದರೆ ಶುಕ್ರವಾರದಂದು ನಿರ್ಮಾಪಕ ಸಿಂಗ್ ಸಿನಿಮಾ ಬಿಡುಗಡೆ ದಿನವನ್ನು ಘೋಷಣೆ ಮಾಡಿದ್ದಾರೆ. ಇದರಲ್ಲಿ ವಿವೇಕ್ ಒಬೇರಾಯ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಮೋದಿ ಚಿತ್ರಕ್ಕೆ ವಿಘ್ನ: ನಾಳೆ ಬಿಡುಗಡೆಯಾಗುತ್ತಿಲ್ಲ ಪಿಎಂ ನರೇಂದ್ರ ಮೋದಿ
"ಪಿಎಂ ನರೇಂದ್ರ ಮೋದಿ ಸಿನಿಮಾ ಏಪ್ರಿಲ್ 11, 2019ಕ್ಕೆ ಅಧಿಕೃತವಾಗಿ ಬಿಡುಗಡೆ ಆಗಲಿದೆ" ಎಂದು ನಿರ್ಮಾಪಕರು ಟ್ವೀಟ್ ಮಾಡಿದ್ದಾರೆ. ಭಾರತದಲ್ಲಿ ಲೋಕಸಭಾ ಚುನಾವಣೆಗೆ ಏಳು ಹಂತದ ಮತದಾನ ಏಪ್ರಿಲ್ ಹನ್ನೊಂದರಿಂದ ಆರಂಭವಾಗಿ ಮೇ ಹತ್ತೊಂಬತ್ತನೇ ತಾರೀಕಿನ ತನಕ ನಡೆಯಲಿದೆ. ಮೇ ಹದಿಮೂರನೇ ತಾರೀಕು ಫಲಿತಾಂಶ ಬರಲಿದೆ.

ಪ್ರಧಾನಮಂತ್ರಿ ಜೀವನಾಧಾರಿತ ಚಿತ್ರ ಈ ಸಮಯದಲ್ಲಿ ಬಿಡುಗಡೆಯಾದರೆ ಅದು ಬಿಜೆಪಿಗೆ ಅನುಕೂಲ ಮಾಡಿಕೊಡಲಿದೆ. ಆದ್ದರಿಂದ ಇದು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ವಿಪಕ್ಷಗಳು ಆರೋಪಿಸಿವೆ.












Click it and Unblock the Notifications