Morning Consult: ವಿಶ್ವ ನಾಯಕರ ಪಟ್ಟಿಯಲ್ಲಿ 'ಪ್ರಧಾನಿ ಮೋದಿ'ಗೆ ಮತ್ತೆ ಅಗ್ರಸ್ಥಾನ

ಬೆಂಗಳೂರು, ಸೆಪ್ಟಂಬರ್ 15: ಜಾಗತಿಕ ನಾಯಕರ ಪಟ್ಟಿಯಲ್ಲಿ ಕಳೆದ ಕೆಲವು ವರ್ಷಗಳಿಂದ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಗ್ರಸ್ಥಾನ ದಲ್ಲಿದ್ದಾರೆ. ಇದೀಗ 'ಗ್ಲೋಬಲ್ ಲೀಡರ್ ಅಪ್ರೂವಲ್' ವರದಿ ಪ್ರಕಾರ ಪ್ರಧಾನಿ ಮೋದಿಯವರು ವಿಶ್ವದ ಅತ್ಯಂತ ಜನಪ್ರಿಯ ನಾಯಕರ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನ ಹೊಂದಿದ್ದಾರೆ.

ಮಾರ್ನಿಂಗ್ ಕನ್ಸಲ್ಟ್ ಬಿಡುಗಡೆ ಮಾಡಿದ ಗ್ಲೋಬಲ್ ಲೀಡರ್ ಅಪ್ರೂವಲ್ ಸಮೀಕ್ಷೆ ಪ್ರಕಾರ, ಶೇಕಡಾ 76 ರಷ್ಟು ಅನುಮೋದನೆ ರೇಟಿಂಗ್ ಪಡೆದು ಪ್ರಧಾನಿ ಮೋದಿ ಮತ್ತೆ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಇದು ಸೆಪ್ಟೆಂಬರ್ 6ರಿಂದ12ವರೆಗಿನ ಸಂಗ್ರಹಿದ ಸಮೀಕ್ಷಾ ವರದಿಯಿಂದ ಬಹಿರಂಗಗೊಂಡಿದೆ.

PM Narendra Modi Top Popular Global Leader With 76% Approval Rating: Survey Report

ಭಾರತ ಪ್ರಧಾನಿಗಳಿಗೆ ಸಿಕ್ಕ ರೇಟಿಂಗ್ ವಿಶ್ವ ನಾಯಕರ ಪಟ್ಟಿಯಲ್ಲಿ ಸ್ವಿಟ್ಜರ್ಲೆಂಡ್‌ನ ಅಧ್ಯಕ್ಷ ಅಲೈನ್ ಬರ್ಸೆಟ್‌ಗಿಂತ ಶೇಕಡಾ 12 ಕ್ಕಿಂತ ಅಧಿಕವಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ನೂ ವಿಶ್ವದ ದೊಡ್ಡಣ್ಣ ದೇಶ ಅಮೆರಿಕಾ (US) ಅಧ್ಯಕ್ಷ ಜೋ ಬೈಡನ್ ಶೇಕಡಾ 40ರಷ್ಟು ರೇಟಿಂಗ್ ಪಡೆದು ಈ ಜಾಗತಿಕ ನಾಯಕರ ಪಟ್ಟಿಯಲ್ಲಿ 07ನೇ ಸ್ಥಾನ ಪಡೆದುಕೊಂಡಿದ್ದಾರೆ. ಇದು ಕಳೆದ ಮಾರ್ಚ್‌ಗಿಂತಲೂ ಅವರಿಗೆ ಸಿಕ್ಕ ರೇಟಿಂಗ್ ಅತ್ಯಧಿಕವಾಗಿದೆ ಎಂದ ಸಮೀಕ್ಷಾ ವರದಿ ತಿಳಿಸಿದೆ.

ಮೋದಿಗೆ ಕೇವಲ 18% ರಷ್ಟು ಅಸಮ್ಮತಿ ರೇಟಿಂಗ್

ಸೆಪ್ಟೆಂಬರ್ 6 ರಿಂದ 12ವರೆಗೆ ಸಂಗ್ರಹಿಸಿದ ಸಮೀಕ್ಷೆ ಪ್ರಕಾರ, ಪ್ರಧಾನಿ ಮೋದಿಯವರು ಪಟ್ಟಿಯಲ್ಲಿ ಕೇವಲ 18% ರಷ್ಟು ಅಸಮ್ಮತಿ ರೇಟಿಂಗ್ ಹೊಂದಿದ್ದಾರೆ. ಅಂದರೆ ಅಷ್ಟು ಮಂದಿ ಅವರನ್ನು ಜಾಗತಿಕ ನಾಯಕ ಎಂದು ಒಪ್ಪಿಲ್ಲ. ಇನ್ನು ಟಾಪ್ 10 ನಾಯಕರ ಪೈಕಿ ಕವಡಾದ ಜಸ್ಟಿನ್ ಟ್ರೋ ಅವರು ಶೇಕಡಾ 50ರಷ್ಟು ಅಸಮ್ಮತಿ ರೇಟಿಂಗ್ ಹೊಂದಿದ್ದಾರೆ.

ರಾಜಕೀಯ ಗುಪ್ತಚರ ಸಂಶೋಧನಾ ಸಂಸ್ಥೆ ಸಂಗ್ರಹಿಸಿದ ದತ್ತಾಂಶವು 22 ಜಾಗತಿಕ ನಾಯಕರ ಸಮೀಕ್ಷೆಯನ್ನು ಆಧರಿಸಿ ಮಾಡಲಾಗಿದೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸಿಯೋಕ್-ಯೂಲ್ ಮತ್ತು ಜೆಕ್ ಗಣರಾಜ್ಯದ ಅಧ್ಯಕ್ಷ ಪೀಟರ್ ಪಾವಲ್ ಅವರು ನಾಯಕರಲ್ಲಿ ಕೇವಲ 20% ರಷ್ಟು ಕಡಿಮೆ ಅನುಮೋದನೆ ರೇಟಿಂಗ್ ಹೊಂದಿದ್ದಾರೆ ಎಂದು ನ್ಯೂಸ್ ಕನ್ನಡ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+