Get Updates
Get notified of breaking news, exclusive insights, and must-see stories!
Live

Heeraben Modi Death News LIVE: ಹೀರಾಬೆನ್ ಮೋದಿ ಚಿತೆಗೆ ಅಗ್ನಿಸ್ಪರ್ಶಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್ ಮೋದಿ ನಿಧನ ಸುದ್ದಿ ಕನ್ನಡದಲ್ಲಿ: ಕಳೆದ ಕೆಲವು ದಿನಗಳಿಂದ ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಶುಕ್ರವಾರ ಬೆಳಿಗ್ಗೆ ನಿಧನರಾದರು. ಹೀರಾಬೆನ್ ಮೋದಿಗೆ 100 ವರ್ಷ ವಯಸ್ಸಾಗಿತ್ತು. ವೈದ್ಯರ ಪ್ರಕಾರ, ಹೀರಾಬೆನ್ ಮೋದಿ ಮುಂಜಾನೆ 3:30 ರ ಸುಮಾರಿಗೆ ಕೊನೆಯುಸಿರೆಳೆದರು. ಹೀರಾಬೆನ್ ಮೋದಿ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಈ ವಾರ ಅಹಮದಾಬಾದ್‌ನ ಯುಎನ್ ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ಗೆ ದಾಖಲಿಸಲಾಗಿತ್ತು.

ಹೀರಾಬೆನ್ ಮೋದಿ ಅವರ ನಿಧನದ ಸುದ್ದಿಯಿಂದ ಇಡೀ ದೇಶದಲ್ಲಿ ದುಃಖದ ವಾತಾವರಣವಿದ್ದು, ರಾಜಕೀಯ ನಾಯಕರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ. ಈ ಸುದ್ದಿಗೆ ಸಂಬಂಧಿಸಿದ ಎಲ್ಲಾ ಪ್ರಮುಖ ನವೀಕರಣಗಳನ್ನು ಇಲ್ಲಿ ಓದಿ.

PM Narendra Modi Mother Heeraben Modi Death News Live Updates and Latest News in Kannada

Dec 30, 2022, 1:25 pm IST

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಗಮಿಸಿದ ನಂತರ ಹೌರಾ ರೈಲು ನಿಲ್ದಾಣದ ವೇದಿಕೆಯಲ್ಲಿ 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗಲಾಯಿತು. ನಂತರ ವಂದೇ ಭಾರತ್ ಎಕ್ಸ್‌ಪ್ರೆಸ್ ಅನ್ನು ಪ್ರಧಾನಿ ಮೋದಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟನೆ ಮಾಡಿದರು.
Dec 30, 2022, 11:59 am IST

'ನಿಮ್ಮ ತಾಯಿ ನಮ್ಮ ತಾಯಿ': ವಂದೇ ಭಾರತ್ ರೈಲು ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಹೇಳಿದರು.
Dec 30, 2022, 11:33 am IST

ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿಯವರ ನಿಧನಕ್ಕೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸಂತಾಪ ವ್ಯಕ್ತಪಡಿಸಿದ್ದಾರೆ.
Dec 30, 2022, 11:13 am IST

ತಮ್ಮ ತಾಯಿ ಹೀರಾಬೆನ್ ಮೋದಿಯವರ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ನಂತರ ಪ್ರಧಾನಿ ಮೋದಿ ಸ್ಮಶಾನದಿಂದ ನಿರ್ಗಮಿಸಿದರು.
Dec 30, 2022, 11:12 am IST

ಸರ್ ನಿಮ್ಮನ್ನು ಬರಮಾಡಿಕೊಳ್ಳಲು ಕಾಯುತ್ತಿದ್ದೆವು. ಆದರೆ ದುರದೃಷ್ಟವಶಾತ್ ನಿಮ್ಮ ತಾಯಿ ತೀರಿಕೊಂಡರು. ಅಗಲಿದ ತಾಯಿಗೆ ನಮ್ಮ ಸಂತಾಪಗಳು. ಅವರು ಮಹಾನ್ ಮಹಿಳೆ ಮತ್ತು ಒಬ್ಬ ಶ್ರೇಷ್ಠ ಮಗನಿಗೆ ಜನ್ಮ ನೀಡಿದ್ದಾರೆ. ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋಲ್ಕತ್ತಾ ಮೇಯರ್ ಫಿರ್ಹಾದ್ ಹಕೀಮ್ ಟ್ವೀಟ್ ಮಾಡಿದ್ದಾರೆ.
Dec 30, 2022, 11:10 am IST

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದೆ.
Dec 30, 2022, 11:09 am IST

ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ನಿಧನಕ್ಕೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ.
Dec 30, 2022, 10:20 am IST

ಹೀರಾಬೆನ್ ನಿಧನಕ್ಕೆ ಸಂತಾಪ ಸೂಚಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ದೇಶಕ್ಕೆ ಜನನಾಯಕ ಪ್ರಧಾನಿ ನರೇಂದ್ರ ಮೋದಿಯವರಂತಹ ಮಗನನ್ನು ನೀಡಿ, ಶತಾಯುಷಿಯಾಗಿ ಬದುಕಿ ಬಾಳಿ ದೇವರ ಚರಣ ಸೇರಿದ ಹೀರಾಬೆನ್ ಅವರಿಗೆ ಗೌರವಪೂರ್ವಕ ವಿದಾಯಗಳು. ದೇವರು ಅವರ ಆತ್ಮಕ್ಕೆ ಸದ್ಗತಿಯನ್ನು ಕರುಣಿಸಲಿ ಹಾಗೂ ಪ್ರಧಾನಿಯವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
Dec 30, 2022, 10:20 am IST

ಗೃಹಸಚಿವ ಅರಗ ಜ್ಞಾನೇಂದ್ರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಮೋದಿ ಅವರು ದೈವಾಧೀನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ವಿಶ್ವದ ಅತ್ಯಂತ ಬಲಿಷ್ಠ ನಾಯಕನಿಗೆ ಜನ್ಮ ನೀಡಿದ ಆ ದಿವ್ಯ ಚೇತನಕ್ಕೆ ದೇವರು ಚಿರ ಶಾಂತಿ ಕರುಣಿಸಲಿ, ಅವರ ಕುಟುಂಬದ ದುಃಖದಲ್ಲಿ ನಾನು ಸಹ ಭಾಗಿಯಾಗಿದ್ದೇನೆ ಎಂದಿದ್ದಾರೆ.
Dec 30, 2022, 10:19 am IST

ಸಂತಾಪ ಸೂಚಿಸಿರುವ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡ, ಹೀರಾಬೆನ್‌ ಅವರು ಶತಾಯುಷಿಯಾಗಿ ಅವರು ತಮ್ಮ ಪೂರ್ಣ ಜೀವನವನ್ನು ನಡೆಸಿದ್ದಾರೆ. ಆದರೆ ಒಬ್ಬ ತಾಯಿಯಾಗಿ ತನ್ನ ಸುತ್ತಲೂ ಶಾಶ್ವತವಾಗಿ ಶಕ್ತಿ ತುಂಬಲು ಬಯಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ತಮಗಾದ ನಷ್ಟವನ್ನು ಭರಿಸುವ ಶಕ್ತಿ ಕೊಡಲಿ ಎಂದಿದ್ದಾರೆ.
Dec 30, 2022, 9:59 am IST

ಪಂಚಭೂತಗಳಲ್ಲಿ ವಿಲೀನಗೊಂಡ ಹೀರಾಬೆನ್ ಮೋದಿ

ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಪಂಚಭೂತಗಳಲ್ಲಿ ವಿಲೀನಗೊಂಡರು. ಪ್ರಧಾನಿ ನರೇಂದ್ರ ಮೋದಿ ಅವರು ಹೀರಾಬೆನ್ ಅವರ ಚಿತೆಗೆ ಅಗ್ನಿಸ್ಪರ್ಶಿಸಿದರು.
Dec 30, 2022, 9:54 am IST

ತಾಯಿ ಹೀರಾಬೆನ್ ಅವರ ಅಗಲಿಕೆಯಿಂದಾಗಿ ಪ್ರಧಾನಿಯವರ ತವರು ವಡ್ನಗರದಲ್ಲಿ ಇಂದು ಅಂಗಡಿಗಳನ್ನು ಬಂದ್ ಮಾಡಲಾಗಿದೆ.
Dec 30, 2022, 9:52 am IST

ಅಂತಿಮಸಂಸ್ಕಾರ ನೆರವೇರಿಸಿದ ಪ್ರಧಾನಿ ಮೋದಿ

ತಾಯಿ ಹೀರಾಬೆನ್ ಅವರ ಅಂತ್ಯಸಂಸ್ಕಾರವನ್ನು ವಿಧಿವತ್ತಾಗಿ ಪ್ರಧಾನಿ ಮೋದಿ ನರೆವೇರಿಸಿದರು.
Dec 30, 2022, 9:48 am IST

ಸಿಎಂ ಭೂಪೇಂದ್ರ ಪಟೇಲ್ ಅಂತಿಮ ವಿಧಿವಿಧಾನದ ವೇಳೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಇದ್ದರು. ಈ ವೇಳೆ ಮಾಜಿ ಸಿಎಂ ವಿಜಯ್ ರೂಪಾನಿ ಮತ್ತು ಶಂಕರಸಿನ್ಹ ವಘೇಲಾ ಉಪಸ್ಥಿತರಿದ್ದರು.
Dec 30, 2022, 9:46 am IST

ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿಯವರ ಪಾರ್ಥಿವ ಶರೀರವನ್ನು ಗಾಂಧಿನಗರದಲ್ಲಿರುವ ಚಿತಾಗಾರಕ್ಕೆ ತರಲಾಗಿದ್ದು, ಹೀರಾಬೆನ್ ಮೋದಿಯವರ ಅಂತಿಮ ಸಂಸ್ಕಾರ ಇನ್ನು ಕೆಲವೇ ಗಂಟೆಗಳಲ್ಲಿ ನಡೆಯಲಿದೆ.
Dec 30, 2022, 9:44 am IST

ಪ್ರಧಾನಿ ಮೋದಿಯವರ ತಾಯಿಯ ನಿಧನಕ್ಕೆ ಸಿಎಂ ಯೋಗಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ನಿಧನದ ಕುರಿತು ಟ್ವೀಟ್ ಮಾಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಮಗನಿಗೆ ತಾಯಿಯೇ ಇಡೀ ಜಗತ್ತು. ತಾಯಿಯ ಸಾವು ಮಗನಿಗೆ ಭರಿಸಲಾಗದ ಮತ್ತು ತುಂಬಲಾರದ ನಷ್ಟವಾಗಿದೆ.
Dec 30, 2022, 9:43 am IST

ಸಂಸದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯ ನಿಧನದಿಂದಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ ಸೂಚಿದ್ದಾರೆ. "ಭಕ್ತಿ, ತಪಸ್ಸು ಮತ್ತು ಕರ್ಮದ ತ್ರಿವೇಣಿ, ನರೇಂದ್ರ ಮೋದಿಯಂತಹ ಮಹಾನ್ ವ್ಯಕ್ತಿತ್ವವನ್ನು ಸೃಷ್ಟಿಸಿದ ತಾಯಿಯ ಪಾದಗಳಿಗೆ ನಮಸ್ಕಾರಗಳು" ಎಂದು ಟ್ವೀಟ್ ಮಾಡಿದ್ದಾರೆ.
Dec 30, 2022, 9:41 am IST

ಟ್ವೀಟ್ ಮೂಲಕ ದುಃಖ ವ್ಯಕ್ತಪಡಿಸಿದ ಜೆಪಿ ನಡ್ಡಾ

ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ನಿಧನದ ಕುರಿತು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಟ್ವೀಟ್ ಮಾಡಿದ್ದಾರೆ. 'ಹೀರಾಬೆನ್ ಅವರು ಹೋರಾಟ ಮತ್ತು ಸದ್ಗುಣದ ಜೀವನವು ಯಾವಾಗಲೂ ಸ್ಫೂರ್ತಿಯಾಗಿದೆ. ಅವರ ಪ್ರೀತಿ ಮತ್ತು ಸಮಗ್ರತೆಯು ದೇಶಕ್ಕೆ ಯಶಸ್ವಿ ನಾಯಕತ್ವವನ್ನು ನೀಡಿದೆ' ಎಂದು ಬರೆದಿದ್ದಾರೆ.
Dec 30, 2022, 9:37 am IST

ಅಂತ್ಯಕ್ರಿಯೆಯಲ್ಲಿ ಪ್ರಧಾನಿ ಮೋದಿ ಸಹೋದರ ಸೋಮಾಭಾಯಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಸೋಮಾಭಾಯಿ ಮೋದಿ ಮತ್ತು ಇತರ ಕುಟುಂಬ ಸದಸ್ಯರು ಹೀರಾಬೆನ್ ಮೋದಿ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದಾರೆ.
Dec 30, 2022, 9:35 am IST

ಮಲ್ಲಿಕಾರ್ಜುನ ಖರ್ಗೆ ಟ್ವೀಟ್

ಪ್ರಧಾನಿ ಮೋದಿಯವರ ತಾಯಿಯ ನಿಧನದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ. 'ಈ ದುಃಖದ ಸಮಯದಲ್ಲಿ ನಮ್ಮ ಸಂತಾಪ ಮತ್ತು ಪ್ರಾರ್ಥನೆಗಳು ಇಡೀ ಕುಟುಂಬದೊಂದಿಗೆ ಇವೆ' ಎಂದು ಬರೆದಿದ್ದಾರೆ.
Dec 30, 2022, 9:34 am IST

ಹೀರಾಬೆನ್ ಮೋದಿ ನಿಧನ: ಪ್ರಿಯಾಂಕಾ ಗಾಂಧಿ ಸಂತಾಪ

ಪ್ರಧಾನಿ ಮೋದಿಯವರ ತಾಯಿಯ ನಿಧನದ ಕುರಿತು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.' ದೇವರು ಅಗಲಿದ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ನರೇಂದ್ರ ಮೋದಿ ಮತ್ತು ಅವರ ಕುಟುಂಬದ ಎಲ್ಲ ಸದಸ್ಯರಿಗೆ ನೋವಿನ ಕ್ಷಣಗಳಲ್ಲಿ ಧೈರ್ಯ ನೀಡಲಿ' ಎಂದು ಬರೆದಿದ್ದಾರೆ.
Dec 30, 2022, 9:32 am IST

ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಪಾರ್ಥಿವ ಶರೀರವನ್ನು ಗಾಂಧಿನಗರದಲ್ಲಿರುವ ಸ್ಮಶಾನಕ್ಕೆ ತರಲಾಯಿತು.
Dec 30, 2022, 9:31 am IST

ಗುಜರಾತ್ ರಾಜಧಾನಿ ಗಾಂಧಿನಗರದ ಸೆಕ್ಟರ್ 30 ರಲ್ಲಿ ಮುಕ್ತಿಧಾಮ್ ಸ್ಮಶಾನದಲ್ಲಿ ಹೀರಾಬೆನ್ ಮೋದಿಯವರ ಅಂತ್ಯಕ್ರಿಯೆಗಳು ನಡೆಯುತ್ತಿವೆ.
Dec 30, 2022, 9:20 am IST

ತಾಯಿಯ ಮೃತದೇಹಕ್ಕೆ ಹೆಗಲು ನೀಡಿದ ಪ್ರಧಾನಿ ಮೋದಿ

ಗಾಂಧಿನಗರದಲ್ಲಿ ಹೀರಾಬೆನ್ ಮೋದಿಯವರ ಅಂತಿಮ ಯಾತ್ರೆ ಆರಂಭ, ತಾಯಿಯ ಪಾರ್ಥಿವ ಶರೀರಕ್ಕೆ ಪ್ರಧಾನಿ ನರೇಂದ್ರ ಮೋದಿ ಭುಜ ಕೊಟ್ಟರು.
Dec 30, 2022, 9:16 am IST

ಇಂದು ಬೆಳಗ್ಗೆ ಗುಜರಾತ್ ತಲುಪಿದ ಪ್ರಧಾನಿ ಮೋದಿ ಅವರು ಮೊದಲು ಅವರ ರೇಸನ್ ನಿವಾಸದಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ತಾಯಿಯ ಪಾರ್ಥಿವ ಶರೀರದೊಂದಿಗೆ ಅಂತಿಮ ಸಂಸ್ಕಾರಕ್ಕಾಗಿ ಚಿತಾಗಾರಕ್ಕೆ ಕೊಂಡೊಯ್ದರು.
Dec 30, 2022, 9:14 am IST

ಹೀರಾಬೆನ್ ಮೋದಿಯನ್ನು ಕರೆದುಕೊಂಡು ಹೋದ ಆಂಬ್ಯುಲೆನ್ಸ್‌ನಲ್ಲಿ ಪ್ರಧಾನಿ ಮೋದಿ ಒಬ್ಬರೇ ಕುಳಿತಿದ್ದರು.
Dec 30, 2022, 9:02 am IST

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್

ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿ ಅವರ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 'ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ತಾಯಿ ಹೀರಾಬೇನ್ ಮೋದಿ ಅವರ ನೂರು ವರ್ಷಗಳ ಹೋರಾಟದ ಜೀವನವು ಭಾರತೀಯ ಆದರ್ಶಗಳ ಸಂಕೇತವಾಗಿದೆ' ಎಂದು ಬರೆದಿದ್ದಾರೆ.
Dec 30, 2022, 9:00 am IST

ಪ್ರಧಾನಿ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಅಂತಿಮ ಯಾತ್ರೆ, ಪಾರ್ಥಿವ ಶರೀರವನ್ನು ಅಂತಿಮ ಸಂಸ್ಕಾರಕ್ಕೆ ಕೊಂಡೊಯ್ಯಲಾಗುತ್ತಿದೆ. ಶವನೌಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಇದ್ದಾರೆ.
Dec 30, 2022, 8:58 am IST

ಗುಲಾಂ ನಬಿ ಆಜಾದ್ ಟ್ವೀಟ್ ಮಾಡುವ ಮೂಲಕ ಸಂತಾಪ

ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ನಿಧನಕ್ಕೆ ಡೆಮಾಕ್ರಟಿಕ್ ಆಜಾದ್ ಪಕ್ಷದ ಅಧ್ಯಕ್ಷ ಗುಲಾಂ ನಬಿ ಆಜಾದ್ ಸಂತಾಪ ಸೂಚಿಸಿದ್ದು, ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
Dec 30, 2022, 8:57 am IST

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್

ಪ್ರಧಾನಿ ಮೋದಿಯವರ ತಾಯಿಯ ನಿಧನದ ಕುರಿತು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಟ್ವೀಟ್ ಮಾಡಿದ್ದಾರೆ. '100 ಅದ್ಭುತ ವರ್ಷಗಳ ಕಾಲ, ಹೀರಾಬೆನ್ ಮಾ ಅವರು ನಮ್ಮೆಲ್ಲರನ್ನು ಪ್ರೀತಿಯಿಂದ ಆಶೀರ್ವದಿಸಿದರು. ಅವರು ಸರಳತೆ, ನಮ್ರತೆ ಮತ್ತು ದೃಢತೆಯ ಸಂಕೇತವಾಗಿದ್ದರು' ಎಂದು ಟ್ವೀಟ್ ಮಾಡಿದ್ದಾರೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+