ಜೂನ್ 25ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನ್ ಕೀ ಬಾತ್
ಬೆಂಗಳೂರು, ಜೂನ್ 24: ನಾಳಿನ ಭಾನುವಾರ (ಜೂನ್ 25) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ ಕಾರ್ಯಕ್ರಮ ಬೆಳಗ್ಗೆ ಹನ್ನೊಂದು ಗಂಟೆಗೆ ಇದೆ. ಆಲ್ ಇಂಡಿಯಾ ರೇಡಿಯೋ, ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿಯಲ್ಲಿ ನೇರವಾಗಿ ಕೇಳಬಹುದು.
1922 ಸಂಖ್ಯೆಗೆ ಮಿಸ್ಡ್ ಕಾಲ್ ನೀಡುವ ಮೂಲಕ ಅಪ್ಲಿಕೇಷನ್ ಡೌನ್ ಲೋಡ್ ಮಾಡಿಕೊಳ್ಳಬಹುದು ಅಥವಾ ಮನ್ ಕೀ ಬಾತ್ ಕೇಳಬಹುದು. ಹಿಂದಿಯಲ್ಲಿ ಪ್ರಸಾರವಾದ ನಂತರ ತಕ್ಷಣವೇ ಪ್ರಾದೇಶಿಕ ಭಾಷೆಯಲ್ಲಿ ಆಕಾಶವಾಣಿಯಿಂದ ಬಿತ್ತರಿಸಲಾಗುತ್ತದೆ. ಈ ಕಾರ್ಯಕ್ರಮಕ್ಕೆ ತುಂಬ ಒಳ್ಳೆ ಪ್ರತಿಕ್ರಿಯೆ ಇದೆ.

ಈ ಬಾರಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸದಲ್ಲಿದ್ದಾರೆ. ಪ್ರತಿ ಬಾರಿಯೂ ಯಾವುದಾದರೂ ನಿರ್ದಿಷ್ಟ ವಿಚಾರದ ಬಗ್ಗೆ ಸ್ಫೂರ್ತಿದಾಯಕ ಮಾತುಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಹೇಳುತ್ತಾರೆ. ಅದೇ ರೀತಿ ಉತ್ತಮ ಕಾರ್ಯಗಳನ್ನು ಮಾಡಿದವರನ್ನು ಕೂಡ ದೇಶದ ಜನತೆ ಮುಂದೆ ಪ್ರಸ್ತಾವ ಮಾಡುತ್ತಾರೆ.
ಈ ಕಾರ್ಯಕ್ರಮಕ್ಕೆ ನಗರ ಹಾಗೂ ಪಟ್ಟಣ ಪ್ರದೇಶದಲ್ಲಂತೂ ನಿರೀಕ್ಷೆಗೂ ಮೀರಿದ ಸ್ಪಂದನೆ ಇದೆ.












Click it and Unblock the Notifications