Vande Bharat Express: 10 ಹೊಸ ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಚಾಲನೆ, ಮಾರ್ಗಗಳು, ಇತರ ವಿವರಗಳು ಇಲ್ಲಿವೆ

ನವದೆಹಲಿ, ಮಾರ್ಚ್ 12: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರ ಮಂಗಳವಾರ 10 ಹೊಸ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ್ದಾರೆ. ಈ ಮೂಲಕ ಒಟ್ಟು ವಂದೇ ಭಾರತ್‌ ರೈಲಿಗಳು 50 ಕ್ಕೂ ಹೆಚ್ಚಾಗಿದ್ದು, ಈ ಎಕ್ಸ್‌ಪ್ರೆಸ್‌ ಸೇವೆಗಳು ರಾಷ್ಟ್ರವ್ಯಾಪಿ 45 ಮಾರ್ಗಗಳನ್ನು ಸಂಪರ್ಕಿಸಲಿವೆ.

ಪ್ರಸ್ತುತ, ಭಾರತೀಯ ರೈಲ್ವೇಯು 41 ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗಳನ್ನು ನೀಡುತ್ತಿದೆ. ಬ್ರಾಡ್ ಗೇಜ್ (ಬಿಜಿ) ವಿದ್ಯುದೀಕೃತ ನೆಟ್‌ವರ್ಕ್‌ಗಳೊಂದಿಗೆ ರಾಜ್ಯಗಳನ್ನು ಸಂಪರ್ಕಿಸುತ್ತದೆ. ಒಟ್ಟು 24 ರಾಜ್ಯಗಳು ಮತ್ತು 256 ಜಿಲ್ಲೆಗಳಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ತಲುಪುತ್ತಿದೆ.

PM Narendra Modi launches 10 new Vande Bharat trains Check routes other details

ದೆಹಲಿ- ಕತ್ರಾ, ದೆಹಲಿ- ವಾರಣಾಸಿ, ಮುಂಬೈ- ಅಹಮದಾಬಾದ್, ಮೈಸೂರು- ಚೆನ್ನೈ, ಕಾಸರಗೋಡು- ತಿರುವನಂತಪುರ ಸೇರಿದಂತೆ ಆರು ಮಾರ್ಗಗಳು ಮತ್ತು ಈಗ, ವಿಶಾಖಪಟ್ಟಣ- ಸಿಕಂದರಾಬಾದ್ ನಡುವೆ ಎರಡು ವಂದೇ ಭಾರತ್ ರೈಲುಗಳು ಕಾರ್ಯನಿರ್ವಹಿಸಲಿವೆ. ವಂದೇ ಭಾರತ್ ರೈಲುಗಳು ಪ್ರಾಥಮಿಕವಾಗಿ ವಿವಿಧ ರಾಜ್ಯಗಳನ್ನು ವ್ಯಾಪಿಸಿರುವ ವಿದ್ಯುದ್ದೀಕರಿಸಿದ ಬ್ರಾಡ್ ಗೇಜ್ ನೆಟ್‌ವರ್ಕ್‌ಗಳಲ್ಲಿ ಚಲಿಸುತ್ತವೆ.

ಡಿಸೆಂಬರ್ 2023 ರಲ್ಲಿ, ಪ್ರಧಾನ ಮಂತ್ರಿ ಆರು ಹೆಚ್ಚುವರಿ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸಿದ್ದರು. ಇವುಗಳು ಕತ್ರಾದಿಂದ ನವದೆಹಲಿಗೆ ಸಂಪರ್ಕಿಸುವ ಎರಡನೇ ರೈಲನ್ನು ಒಳಗೊಂಡಿವೆ. ಅಮೃತಸರದಿಂದ ದೆಹಲಿ, ಕೊಯಮತ್ತೂರಿನಿಂದ ಬೆಂಗಳೂರು, ಮಂಗಳೂರಿನಿಂದ ಮಡಗಾಂವ್, ಜಲ್ನಾದಿಂದ ಮುಂಬೈ, ಮತ್ತು ಅಯೋಧ್ಯೆಯಿಂದ ದೆಹಲಿಗೆ ಇತರ ಮಾರ್ಗಗಳು ಸೇರಿವೆ. ದೆಹಲಿ ಮತ್ತು ವಾರಣಾಸಿ ನಡುವಿನ ಎರಡನೇ ರೈಲನ್ನು ಡಿಸೆಂಬರ್ 2023 ರಲ್ಲಿ ಉದ್ಘಾಟಿಸಲಾಯಿತು.

PM Narendra Modi launches 10 new Vande Bharat trains Check routes other details

ಹೊಸ ವಂದೇ ಭಾರತ್ ರೈಲುಗಳ ಮಾರ್ಗಗಳು ಹೀಗಿವೆ

1. ಅಹಮದಾಬಾದ್- ಮುಂಬೈ ಸೆಂಟ್ರಲ್

2. ಸಿಕಂದರಾಬಾದ್- ವಿಶಾಖಪಟ್ಟಣ

3. ಮೈಸೂರು- ಡಾ. ಎಂಜಿಆರ್ ಸೆಂಟ್ರಲ್ (ಚೆನ್ನೈ)

4. ಪಾಟ್ನಾ- ಲಕ್ನೋ

5. ಹೊಸ ಜಲ್ಪೈಗುರಿ- ಪಾಟ್ನಾ

6. ಪುರಿ- ವಿಶಾಖಪಟ್ಟಣ

7. ಲಕ್ನೋ - ಡೆಹ್ರಾಡೂನ್

8. ಕಲಬುರಗಿ - ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು

9. ರಾಂಚಿ-ವಾರಣಾಸಿ

10. ಖಜುರಾಹೊ- ದೆಹಲಿ (ನಿಜಾಮುದ್ದೀನ್)

ವಂದೇ ಭಾರತ್ ವಿಸ್ತರಣೆ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಾಲ್ಕು ವಂದೇ ಭಾರತ್ ರೈಲುಗಳ ವಿಸ್ತರಣೆಗೆ ಚಾಲನೆ ನೀಡಲಿದ್ದಾರೆ.

1. ಅಹಮದಾಬಾದ್- ಜಾಮ್‌ನಗರ ವಂದೇ ಭಾರತ್ ಸೇವೆಯನ್ನು ದ್ವಾರಕಾವರೆಗೆ ವಿಸ್ತರಿಸಲಾಗುತ್ತಿದೆ

2. ಅಜ್ಮೀರ್- ದೆಹಲಿ ಸರೈ ರೋಹಿಲ್ಲಾ ವಂದೇ ಭಾರತ್ ಸೇವೆಯನ್ನು ಚಂಡೀಗಢದವರೆಗೆ ವಿಸ್ತರಿಸಲಾಗುತ್ತಿದೆ

3. ಗೋರಖ್‌ಪುರ-ಲಕ್ನೋ ವಂದೇ ಭಾರತ್ ಸೇವೆಯನ್ನು ಪ್ರಯಾಗರಾಜ್‌ವರೆಗೆ ವಿಸ್ತರಿಸಲಾಗುತ್ತಿದೆ

4. ತಿರುವನಂತಪುರಂ- ಕಾಸರಗೋಡು ವಂದೇ ಭಾರತ್ ಸೇವೆಯನ್ನು ಮಂಗಳೂರಿನವರೆಗೆ ವಿಸ್ತರಿಸಲಾಗುತ್ತಿದೆ

ಹೆಚ್ಚು ವಂದೇ ಭಾರತ್ ರೈಲುಗಳನ್ನು ಹೊಂದಿರುವ ನಗರ

ದೆಹಲಿಯು ನಗರಗಳಲ್ಲಿ ಅತಿ ಹೆಚ್ಚು ವಂದೇ ಭಾರತ್ ರೈಲುಗಳನ್ನು ಹೊಂದಿದೆ. ರಾಜಧಾನಿಯಲ್ಲಿ 10 ರೈಲುಗಳು ಕಾರ್ಯ ನಿರ್ವಹಿಸುತ್ತಿವೆ. ಈ ರೈಲುಗಳು ದೆಹಲಿಯನ್ನು ಡೆಹ್ರಾಡೂನ್, ಅಂಬ್ ಅಂಡೌರಾ, ಭೋಪಾಲ್, ಅಯೋಧ್ಯೆ, ಅಮೃತಸರ ಮತ್ತು ಈಗ ಖಜುರಾಹೊದಂತಹ ವಿವಿಧ ಸ್ಥಳಗಳಿಗೆ ಸಂಪರ್ಕಿಸುತ್ತವೆ.

ಅಹಮದಾಬಾದ್ ಮತ್ತು ಗಾಂಧಿನಗರಕ್ಕೆ ಹೊಸ ಸೇವೆಗಳು ಸೇರಿದಂತೆ ಆರು ಮೀಸಲಾದ ರೈಲುಗಳೊಂದಿಗೆ ಮುಂಬೈ ನಂತರದ ಸ್ಥಾನದಲ್ಲಿದೆ. ಚೆನ್ನೈ ಐದು ರೈಲುಗಳನ್ನು ಹೊಂದಿದೆ ಮತ್ತು ಮೈಸೂರಿಗೆ ಎರಡನೇ ವಂದೇ ಭಾರತ್ ರೈಲಿಲು ಉದ್ಘಾಟನೆಯನ್ನು ಮಂಗಳವಾರ ನಿಗದಿಪಡಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+