ಇಂದು ನರೇಂದ್ರ ಮೋದಿ ಜನ್ಮದಿನ: ಟ್ವಿಟ್ಟರ್ ನಲ್ಲಿ ಶುಭಾಶಯದ ಸುರಿಮಳೆ
Recommended Video

ವಾರಣಾಸಿ, ಸೆಪ್ಟೆಂಬರ್ 17: ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ 68 ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದು, ಅವರಿಗೆ ಟ್ವಿಟ್ಟರ್ ನಲ್ಲಿ ಸಾಕಷ್ಟು ಗಣ್ಯರು ಶುಭಾಶಯ ಕೋರಿದ್ದಾರೆ.
ತಮ್ಮ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಈ ಬಾರಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಇಲ್ಲಿನ ಶಾಲಾಮಕ್ಕಳೊಂದಿಗೆ ಕಾಲಕಳೆಯಲಿದ್ದಾರೆ.
ಅಷ್ಟೇ ಅಲ್ಲದೆ, ತಾವು ದತ್ತು ಪಡೆದ ಜಯಪುರ, ನಾಗೆಪುರ ಮತ್ತು ಕಕ್ರಾಹಹಿಯಾ ಹಳ್ಳಿಗಳಿಗೂ ಅವರು ಭೇಟಿ ನೀಡಲಿದ್ದಾರೆ. ಇದಲ್ಲದೆ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ 'ಚಲೋ ಜೀತೆ ಹೈ' ಸಹ ಈ ಸಮಯದಲ್ಲಿ ಪ್ರದರ್ಶನಗೊಳ್ಳಲಿದೆ.
|
ರಾಮನಾಥ್ ಕೋವಿಂದ್
ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೇವರು ದೀರ್ಘಾಯುಷ್ಯವನ್ನು ನೀಡಲಿ. ಮತ್ತು ಅವರ ನಿಸ್ವಾರ್ಥ ಸೇವೆ ನಮ್ಮ ದೇಶಕ್ಕೆ ಮತ್ತಷ್ಟು ದೀರ್ಘ ಕಾಲ ದೊರೆಯಲಿ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದಾರೆ.
| Array |
ರವಿಶಂಕರ್ ಪ್ರಸಾದ್
ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೇವರು ದೀರ್ಘಾಯುರಾರೋಗ್ಯ ನೀಡಲಿ. ಹಾಗೂ ಈ ದೇಶದ ಹಾದಿಯನ್ನು ಸಮೃದ್ಧಿಯತ್ತ ಕೊಂಡೊಯ್ಯಲು ಅವರ ಮಾರ್ಗದರ್ಶನ ನಮಗೆ ಸದಾ ದೊರೆಯಲಿ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ.
|
ವಸುಂಧರಾ ರಾಜೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ನಿಮ್ಮ ದೂರದೃಷ್ಟಿ, ನಿಮ್ಮ ಸಂಕಲ್ಪ ಮತ್ತು ಹೊಸ ಭಾರತದ ಬಗೆಗಿನ ನಿಮ್ಮ ಕನಸು ನನಸಾಗಲಿ. ನಿಮ್ಮ ಅವಿರತ ಕೆಲಸ ಮತ್ತು ಕ್ರಿಯಾಶೀಲತೆ ನಮಗೆ ಮತ್ತಷ್ಟು ಸ್ಫೂರ್ತಿ ನೀಡಲಿ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಟ್ವೀಟ್ ಮಾಡಿದ್ದಾರೆ.
| Array |
ರಾಜದೀಪ್ ಸರ್ದೇಸಾಯಿ
ನನ್ನ ಹಳೆಯ ಸ್ನೇಹಿತರಾದ ನರೇಂದ್ರ ಭಾಯಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅದೊಂದು ಕಾಲವಿತ್ತು. ತಮ್ಮ ಜನ್ಮದಿನದಂದು ಬಿಜೆಪಿ ಕಚೇರಿಯಲ್ಲಿ ನರೇಂದ್ರ ಮೋದಿ ಅವರು ಪತ್ರಕರ್ತರಿಗೆ ಸಿಹಿಹಂಚುತ್ತಿದ್ದರು. ಆದರೆ ಅವರಿಗೆ ಅವೆಲ್ಲ ಈಗ ನೆನಪಿಗೆ ಬಾರದಷ್ಟು ದೊಡ್ಡ ವ್ಯಕ್ತಿಯಾಗಿದ್ದಾರೆ ಎಂದು ಪತ್ರಕರ್ತ ರಾಜದೀಪ್ ಸರ್ದೇಸಾಯಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications