2023ಕ್ಕೆ ಹೋಲಿಸಿದ್ರೆ ಈ ಬಾರಿ ಪ್ರಧಾನಿ ಮೋದಿ ಮೇಲೆ ಜನರಿಗೆ ಭಾರೀ ಲವ್ ಆಗಿದ್ಯಂತೆ ಹೌದಾ?-ವರದಿಯೊಂದು ಇಲ್ಲಿದೆ ಗಮನಿಸಿ
ನವದೆಹಲಿ, ಮಾರ್ಚ್, 06: ಲೋಕಸಭೆ ಚುನಾವಣೆ ಹಿನ್ನೆಲೆ ಇದೀಗ ದೇಶದಲ್ಲಿ ಎಲ್ಲಾ ಪಕ್ಷಗಳ ನಾಯಕರು ಕೂಡ ಪ್ರಚಾರದಲ್ಲಿ ಕಾರ್ಯನಿರತವಾಗಿದ್ದಾರೆ. ಈ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳಲು ಮುಂದಾಗಿದ್ದಾರೆ. ಇನ್ನು ಮತ್ತೊಂದೆಡೆ ಜಾಗತಿಕ ನಾಯಕರ ಜನಪ್ರಿಯತೆಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. ಅವರು 75 ಪ್ರತಿಶತದಷ್ಟು ಅನುಮೋದನೆ ರೇಟಿಂಗ್ ಹೊಂದಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ.
ಅನುಮೋದನೆ ರೇಟಿಂಗ್ ಸಮೀಕ್ಷೆಯನ್ನು ನಡೆಸುವ ಸಂಸ್ಥೆ ಇಪ್ಸೋಸ್ ಇಂಡಿಯಾಬಸ್ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 2024ರಲ್ಲಿ ಶೇಕಡಾ 75 ರಷ್ಟು ಅನುಮೋದನೆ ರೇಟಿಂಗ್ ಅನ್ನು ಸಾಧಿಸಿದ್ದಾರೆ. ಈ ಹಿಂದೆ, ಸೆಪ್ಟೆಂಬರ್ 2023ರಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಪಿಎಂ ಮೋದಿ 65 ಪ್ರತಿಶತದಷ್ಟು ರೇಟಿಂಗ್ ಪಡೆದಿದ್ದರು. ಈ ಬಾರಿ ಅವರ ಅನುಮೋದನೆ ರೇಟಿಂಗ್ ಶೇಕಡಾ 10ರಷ್ಟು ಹೆಚ್ಚಳ ಆಗಿದೆ.

2022, ಡಿಸೆಂಬರ್‌ನಿಂದ ಪಿಎಂ ಮೋದಿ ಅವರ ಅನುಮೋದನೆ ರೇಟಿಂಗ್ ಹೆಚ್ಚಳ ಆಗಿದೆ. 2022ರಲ್ಲಿ ರೇಟಿಂಗ್ ಶೇಕಡಾ 60ರಷ್ಟಿತ್ತು. ಫೆಬ್ರವರಿ 2023ರಲ್ಲಿ ಪಿಎಂ ಮೋದಿಯವರ ಅನುಮೋದನೆ ರೇಟಿಂಗ್ ಶೇಕಡಾ 67ರಷ್ಟಿತ್ತು. ಅವರ ರೇಟಿಂಗ್ ಸೆಪ್ಟೆಂಬರ್ 2023ರಲ್ಲಿ ಎರಡು ಪ್ರತಿಶತದಷ್ಟು ಕುಸಿದಿದೆ ಮತ್ತು 65 ಪ್ರತಿಶತದಷ್ಟು ರೇಟಿಂಗ್ ಪಡೆದಿದೆ. ಈಗ ಫೆಬ್ರವರಿ 2024ರಲ್ಲಿ, ಮೋದಿಯವರ ರೇಟಿಂಗ್ ಮತ್ತೆ ಹೆಚ್ಚಳ ಆಗಿದೆ ಎಂದು ವರದಿಯಾಗಿದೆ.












Click it and Unblock the Notifications