ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ಮೋದಿ ವಿದೇಶ ಪ್ರವಾಸದ ಖರ್ಚು-ವೆಚ್ಚದ ಮೊತ್ತ ಬಹಿರಂಗ

|
Google Oneindia Kannada News

ನವದೆಹಲಿ, ಡಿಸೆಂಬರ್ 29: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ 2014ರ ಜೂನ್ ತಿಂಗಳಿನಿಂದ ವಿದೇಶ ಪ್ರವಾಸ ಕೈಗೊಂಡಿದ್ದಕ್ಕೆ ಆಗಿರುವ ಖರ್ಚು ವೆಚ್ಚದ ವಿವರಗಳು ಈಗ ಲಭ್ಯವಿದೆ. ನಾಲ್ಕು ವರ್ಷಗಳಲ್ಲಿ ಪ್ರಧಾನಿ ವಿದೇಶಿ ಪ್ರವಾಸಕ್ಕೆ ಸುಮಾರು 2,021 ಕೋಟಿ ರು ಖರ್ಚಾಗಿದೆ ಎಂದು ತಿಳಿದು ಬಂದಿದೆ.

ಮೋದಿ ವಿದೇಶ ಪ್ರವಾಸಕ್ಕೆ ಚಾರ್ಟರ್ಡ್ ವಿಮಾನ, ಅದರ ನಿರ್ವಹಣೆ ಮತ್ತು ಹಾಟ್‌ಲೈನ್ ಸೌಲಭ್ಯಕ್ಕಾಗಿ 2021 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಹೇಳಿದ್ದಾರೆ.

ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ! ಪ್ರಧಾನಿ ಮೋದಿ ಇನ್ನು ಮುಂದೆ ವಿದೇಶ ಪ್ರವಾಸ ಮಾಡೊಲ್ಲ!

"2014ರ ಜೂನ್‌ನಿಂದ 2018ರವರೆಗೆ ಮೋದಿಯವರು ಭೇಟಿ ನೀಡಿದ ದೇಶಗಳು, ದೇಶಕ್ಕೆ ಗರಿಷ್ಠ ನೇರ ವಿದೇಶಿ ಬಂಡವಾಳ ಹರಿದು ಬಂದ ಅಗ್ರ ಹತ್ತು ದೇಶಗಳಾಗಿ ರೂಪುಗೊಂಡಿವೆ. ವಿದೇಶಿ ನೇರ ಬಂಡವಾಳ 2014ರಿಂದ ಜೂನ್ 2018ರ ವೇಳೆಗೆ 136,077.75 ಮಿಲಿಯನ್ ಯುಎಸ್ ಡಿ ಇತ್ತು. 2011 ರಿಂದ 2014ರ ವೇಳೆಗೆ 81,843.71 ಮಿಲಿಯನ್ ಯುಎಸ್ ಡಾಲರ್ ಮಾತ್ರ ಆಗಿತ್ತು ಎಂದಿದ್ದಾರೆ.

PM Modi’s foreign trips cost Rs 2,021 crore

ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿ(ಯುಪಿಎ 2)ಯಲ್ಲಿ ಐದು ವರ್ಷ ಬಾಡಿಗೆ ವಿಮಾನ, ವಿಮಾನ ನಿರ್ವಹಣೆ ಹಾಗೂ ಹಾಟ್‌ಲೈನ್ ಸೌಲಭ್ಯಕ್ಕಾಗಿ 1346 ಕೋಟಿ ರೂಪಾಯಿ ಖರ್ಚಾಗಿತ್ತು.

ಪ್ರಧಾನಿ ವಿಮಾನ ನಿರ್ವಹಣೆಗೆ 1583.18 ಕೋಟಿ ರೂಪಾಯಿ, ವಿಮಾನ ಬಾಡಿಗೆಯಾಗಿ 429.25 ಕೋಟಿ ವೆಚ್ಚವಾಗಿತ್ತು. ಹಾಟ್‌ಲೈನ್‌ಗೆ ಮಾಡಿದ ವೆಚ್ಚ 9.11 ಕೋಟಿ ರೂಪಾಯಿ. 48 ವಿದೇಶ ಪ್ರವಾಸಗಳಲ್ಲಿ ಮೋದಿ 55 ದೇಶಗಳಿಗೆ ಭೇಟಿ ನೀಡಿದ್ದಾರೆ.

ಕರ್ನಾಟಕದಲ್ಲಿ ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ : ಮೋದಿಕರ್ನಾಟಕದಲ್ಲಿ ಸಾಲ ಮನ್ನಾ ಹೆಸರಿನಲ್ಲಿ ರೈತರ ಅಪಹಾಸ್ಯ : ಮೋದಿ

2014-15ರಲ್ಲಿ 93.76 ಕೋಟಿ ರು, 2015-16ರಲ್ಲಿ 117.89 ಕೋಟಿ ರು. 2016-17ರಲ್ಲಿ 76.27 ಕೋಟಿ ರು, 2017-18ರಲ್ಲಿ ಚಾರ್ಟೆಡ್ ವಿಮಾನಕ್ಕಾಗಿ 99.32 ಕೋಟಿ ರು ಖರ್ಚಾಗಿದೆ.

English summary
An expenditure of over Rs 2,021 crore was incurred on chartered flights, maintenance of aircraft and hotline facilities during Prime Minister Narendra Modi's visits to foreign countries since June 2014, according to the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X