ಲೋಕ ಕದನಕ್ಕೆ ಮೋದಿ ರೆಡಿ... ಎಲ್ಲೆಲ್ಲೂ 'ಚೌಕಿದಾರಂದೇ' ಹವಾ!

Recommended Video

      ಲೋಕಸಭಾ ಚುನಾವಣೆಗೆ ಸಜ್ಜಾದ ನರೇಂದ್ರ ಮೋದಿ | ಟ್ವಿಟ್ಟರ್ ನಲ್ಲಿ ಮೋದಿ ಟ್ರೆಂಡಿಂಗ್

      ನಾನು ಈ ದೇಶದ ಚೌಕಿದಾರ(ಸೇವಕ) ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಟೀಕಿಸುವುದಕ್ಕೆ ವಿಪಕ್ಷಗಳಿಗೆ ಅದೆಷ್ಟು ಕಚ್ಚಾ ವಸ್ತುಗಳನ್ನು ನೀಡಿತ್ತು ಎಂಬುದು ಬೇರೆ ಮಾತು... ಚೌಕಿದಾರ್ ಚೋರ್ ಹೈ ಎಂದಿದ್ದ ರಾಹುಲ್ ಗಾಂಧಿ ಅವರ ಮಾತನ್ನಾಗಲೀ, ವಿಪಕ್ಷದ ಇನ್ಯಾರದೇ ಮಾತನ್ನಾಗಲೀ ಮೋದಿ ಗಂಭೀರವಾಗಿ ಪರಿಗಣಿಸಲಿಲ್ಲ. ಬದಲಾಗಿ 'ಚೌಕಿದಾರ' ಎಂದು ಟೀಕಿಸುತ್ತ ಎಸೆದ ಕಲ್ಲನ್ನೇ ಎತ್ತಿಟ್ಟುಕೊಂಡು ಗೆಲುವಿನ ಮೆಟ್ಟಿಲು ನಿರ್ಮಿಸಲು ಹೊರಟಿದ್ದಾರೆ ಮೋದಿ.

      ಪ್ರಧಾನಿ ಮೋದಿ ಅವರ ಚುನಾವಣಾ ಪ್ರಚಾರಕ್ಕೆ ಟ್ವಿಟ್ಟರ್ ನಲ್ಲಿ ಅಧಿಕೃತ ಆಂದೋಲನ ಆರಂಭವಾಗಿದೆ. 'ಮೋದಿ ಮತ್ತೊಮ್ಮೆ' ಎಂಬುವವರೆಲ್ಲ 'ಮೇ ಭೀ ಚೌಕಿದಾರ್ ಹೂಂ' ಎಂದರೆ ಸಾಕು!

      ಹೌದು, ಮೇ ಬೀ ಚೌಕಿದಾರ್(#MainBhiChowkidar) ಹ್ಯಾಶ್ ಟ್ಯಾಗ್ ಮೂಲಕ ಮೋದಿ ಟ್ವೀಟ್ ಮಾಡಿದ್ದು, ಮೋದಿ ಅಭಿಮಾನಿಗಳೆಲ್ಲ ಆ ಹ್ಯಾಶ್ ಟ್ಯಾಗ್ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

      ನರೇಂದ್ರ ಮೋದಿ ಅವರು ಈ ಟ್ವೀಟ್ ಮಾಡಿದ ಒಂದು ಗಂಟೆಯೊಳಗಾಗಿ ಸರಿ ಸುಮಾರು 4 ಸಾವಿರಕ್ಕೂ ಹೆಚ್ಚು ಜನ ಈ ಟ್ವೀಟ್ ಅನ್ನು ರೀಟ್ವೀಟ್ ಮಾಡಿದ್ದಾರೆ. ಮೇ ಬಿ ಚೌಕಿದಾರ್ ಹ್ಯಾಶ್ ಟ್ಯಾಗ್ ಸೃಷ್ಟಿಯಾದ ಕೆಲವೇ ನಿಮಿಷಗಳಲ್ಲಿ ಟ್ವೀಟ್ಟರ್ ನ ಟ್ರೆಂಡಿಂಗ್ ಹ್ಯಾಶ್ ಟ್ಯಾಗ್ ನಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

      ಈ ಟ್ವೀಟ್ ನಲ್ಲಿ ಭಾರತದ ವಿವಿಧ ಸಂಸ್ಕೃತಿಯ, ವಿವಿಧ ಸ್ಥರದ, ವಿವಿಧ ಕ್ಷೇತ್ರದ, ವಿವಿಧ ವೃತ್ತಿಯ ಜನರೂ ಮೇ ಭೀ ಚೌಕಿದಾರ್ ಎನ್ನುತ್ತಿರುವ ಅರ್ಥವತ್ತಾದ ಹಾಡಿನಿಂದಿಗೆ ವಿಡಿಯೋವನ್ನೂ ಲಗತ್ತಿಸಲಾಗಿದೆ.

      Array

      ಮೋದಿ ಟ್ವೀಟ್

      "ನಿಮ್ಮ ಚೌಕಿದಾರ ದೇಶ ಸೇವೆಗೆ ಸದೃಢವಾಗಿ ನಿಂತಿದ್ದಾನೆ. ಆದರೆ ನಾನು ಒಬ್ಬಂಟಿಯಲ್ಲ. ಭ್ರಷ್ಟಾಚಾರ, ದುಷ್ಟಶಕ್ತಿಯ ವಿರುದ್ಧ ಹೋರಾಡುವ ಪ್ರತಿಯೊಬ್ಬರೂ ಚೌಕಿದಾರರೇ. ಭಾರತದ ಪ್ರಗತಿಗಾಗಿ ಹೋರಾಡುವ ಪ್ರತಿಯೊಬ್ಬರೂ ಚೌಕಿದಾರರೇ. ಇಂದು ಪ್ರತಿ ಭಾರತೀಯನೂ ಹೇಳುತ್ತಿದ್ದಾನೆ, 'ನಾನೂ ಚೌಕಿದಾರ' ಎಂದು" ಇದು ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಟ್ವೀಟ್.

      Array

      ನಾನು ಚೌಕಿದಾರ್ ಎನ್ನಲು ಹೆಮ್ಮೆ ಇದೆ

      ಮೇಭೀ ಚೌಕಿದಾರ್ ಹೂಂ ಆಂದೋಲನಕ್ಕೆ ಸೇರಲು ನನಗೆ ಹೆಮ್ಮೆ ಇದೆ. ಭಾರತವನ್ನು ಪ್ರೀತಿಸುವ ಒಬ್ಬ ನಾಗರಿಕನಾಗಿ ಭ್ರಷ್ಟಾಚಾರ, ದುಷ್ಟಶಕ್ತಿ, ಬಡತನ, ಭಯೋತ್ಪಾದನೆಯನ್ನು ಹತ್ತಿಕ್ಕಿ, ಬಲಾಡ್ಯ, ಭದ್ರ ಮತ್ತು ಸಮೃದ್ಧ ಭಾರತವನ್ನು ನಿರ್ಮಿಸಲು ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದಿದ್ದಾರೆ ನಿಶಿಕಾಂತ್ ಮಿಶ್ರಾ.

      ನಾನೂ ಚೌಕಿದಾರ, ಯಾಕಂದ್ರೆ...

      ನಾನೂ ಒಬ್ಬ ಚೌಕಿದಾರ, ಯಾಕಂದ್ರೆ ಇದು ನನ್ನ ದೇಶ. ಭ್ರಷ್ಟಾಚಾರ ಎಂಬುದು ಒಂದು ದುಷ್ಟಶಕ್ತಿ. ಅದನ್ನು ಬೇರು ಸಮೇತ ಕಿತ್ತೆಸೆಯುವುದು ಎಲ್ಲ ಭಾರತೀಯರ ಜವಾಬ್ದಾರಿ. ಆದ್ದರಿಂದ ನಾನೂ ಚೌಕಿದಾರ ಎಂದಿದ್ದಾರೆ ಯೋಗೇಶ್ ದೇಸ್ವಾಲ್.

      ಬಾಲಿವುಡ್ ಮೂವಿ ಆಗುತ್ತಾ?

      ಮೇ ಭೀ ಚೌಕಿದಾರ್ ಆಂದೋಲನವೂ ಬಾಲಿವುಡ್ ಮೂವಿಯಾಗುತ್ತದೆಯಾ? ಸೂಪರ್ ಹೀರೋ ಚೌಕಿದಾರ್ ಹೆಸರಿನಲ್ಲಿ ಎಂದು ಕಾಲೆಳೆದಿದ್ದಾರೆ ಆಶೀಶ್.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+