ಸೋನಿಯಾ ಗಾಂಧಿಯವರಿಗೆ ಜನ್ಮದಿನದ ಶುಭಾಶಯ ಕೋರಿದ ಮೋದಿ
ನವದೆಹಲಿ, ಡಿಸೆಂಬರ್ 09: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದಾರೆ.
"ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಅವರಿಗೆ ದೀರ್ಘ ಆಯುರಾರೋಗ್ಯ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

1998 ರಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರವಹಿಸುತ್ತಿರುವ ಸೋನಿಯಾ ಗಾಂಧಿಯವರು ಇಂದು ತಮ್ಮ 71 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ದೆಹಲಿಯ ಜನಪಥದಲ್ಲಿ ಅವರ ಸಾವಿರಾರು ಅಭಿಮಾನಿಗಳು, ಪಕ್ಷದ ಮುಖಂಡರು ಅವರಿಗೆ ಶುಭ ಹಾರೈಸಿದರು.
Birthday greetings to Congress President Smt. Sonia Gandhi. I pray for her long life and good health.
— Narendra Modi (@narendramodi) December 9, 2017
ರಾಜೀವ್ ಗಾಂಧಿಯವರ ಪತ್ನಿ, ಸೋನಿಯಾ ಗಾಂಧಿಯವರು ಇಟಲಿಯ ವಿಸೆಂಜಾ ಎಂಬ ಹಳ್ಳಿಯಲ್ಲಿ 1946, ಡಿಸೆಂಬರ್ 9 ರಂದು ಜನಿಸಿದರು.












Click it and Unblock the Notifications