ಟ್ರಂಪ್ ಆಹ್ವಾನದ ಮೇರೆಗೆ ಜೂನ್ 25,26 ಮೋದಿ ಅಮೆರಿಕಾ ಪ್ರವಾಸ
ನವದೆಹಲಿ, ಜೂನ್ 12: ಅಮೆರಿಕಾ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೂನ್ 25 ಮತ್ತು 26ರಂದು ಅಮೆರಿಕಾ ರಾಜಧಾನಿ ವಾಷಿಂಗ್ಟನ್ ಡಿಸಿ ಗೆ ಭೇಟಿ ನೀಡಲಿದ್ದಾರೆ. ಇದು ಅವರಿಬ್ಬರ ನಡುವಿನ ಮೊದಲ ಭೇಟಿಯಾಗಲಿದೆ.
ಪ್ಯಾರಿಸ್ ಒಪ್ಪಂದದಿಂದ ಹಿಂದೆ ಸರಿಯುವ ವೇಳೆ ಡೊನಾಲ್ಡ್ ಟ್ರಂಪ್ ಭಾರತದ ವಿರುದ್ಧ ಹೇಳಿಕೆ ನೀಡಿದ್ದರು. ಇದಾದ ಬೆನ್ನಿಗೆ ಈ ಭೇಟಿ ನಿಗದಿಯಾಗಿದೆ.

ಭೇಟಿ ವೇಳೆ ಪಾಕಿಸ್ತಾನ, ಭಯೋತ್ಪಾದನೆ, ನ್ಯೂಕ್ಲಿಯರ್ ಪೂರೈಕೆ ದೇಶಗಳಲ್ಲಿ ಭಾರತಕ್ಕೆ ಸದಸ್ಯತ್ವ, ಎಚ್-1ಬಿ ವೀಸಾ ಮೊದಲಾದ ವಿಚಾರಗಳು ಪ್ರಸ್ತಾಪವಾಗಲಿವೆ.
ಉಭಯ ನಾಯಕರು ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದ್ದಾರೆ ಎಂದುಕೊಳ್ಳಲಾಗಿದೆ.












Click it and Unblock the Notifications