ಎಲ್ಲ ಪಕ್ಷಗಳ ಧ್ಯೇಯ ಒಂದೇ; ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಲೋಕಸಭೆ ಚುನಾವಣೆ 2019ರ ದಿನಾಂಕವನ್ನು ಚುನಾವಣೆ ಆಯೋಗದಿಂದ ಭಾನುವಾರ ಘೋಷಣೆ ಮಾಡುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಚುನಾವಣೆ ಆಯೋಗಕ್ಕೆ ಶುಭ ಹಾರೈಸಿದ್ದಾರೆ. ಇಡೀ ದೇಶದಾದ್ಯಂತ ಯಾವುದೇ ತೊಂದರೆ ಇಲ್ಲದಂತೆ ಚುನಾವಣೆ ಪೂರೈಸಲು ಆಯೋಗದ ಜತೆಗೆ ಎಲ್ಲ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಹಾರೈಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ದೃಢವಾಗಿ ಚುನಾವಣೆಗಳನ್ನು ಆಯೋಜಿಸಿಕೊಂಡು ಬರುತ್ತಿರುವ ಚುನಾವಣೆ ಆಯೋಗದ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮೂರು ಸಾವಿರದ ಏಳು ನೂರಕ್ಕೂ ಹೆಚ್ಚು ಬಾರಿ ರಿಟ್ವೀಟ್, ಹದಿಮೂರು ಸಾವಿರದಷ್ಟು ಲೈಕ್ಸ್ ಬಂದಿವೆ. ಇನ್ನು ಏಳು ನೂರರಷ್ಟು ಕಮೆಂಟ್ ಗಳು ಬಂದಿವೆ.

PM Modi tweet after lok sabha elections 2019 announcement

ಎಲ್ಲ ರಾಜಕೀಯ ಪಕ್ಷಗಳಿಗೂ ಶುಭ ಹಾರೈಸಿರುವ ಪ್ರಧಾನಿ ಮೋದಿ, ನಾವು ಬೇರೆ ಪಕ್ಷಗಳಿಗೆ ಸೇರಿದವರಾಗಿರಬಹುದು. ಆದರೆ ನಮ್ಮ ಗುರಿ ಮಾತ್ರ ಒಂದೇ- ಭಾರತದ ಅಭಿವೃದ್ಧಿ ಹಾಗೂ ಭಾರತೀಯರ ಬಲವರ್ಧನೆ ಎಂದು ಕೂಡ ಟ್ವೀಟ್ ಮಾಡಿದ್ದಾರೆ. ಅದನ್ನು ಮೂರೂವರೆ ಸಾವಿರಕ್ಕೂ ಹೆಚ್ಚು ಮಂದಿ ರೀ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+