ಶೀಘ್ರದಲ್ಲೇ ಏರ್ ಇಂಡಿಯಾ ಖಾಸಗೀಕರಣ?

ಸಾವಿರಾರು ಕೋಟಿ ಸಾಲ ಹಾಗೂ ಸತತ ನಷ್ಟದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾವನ್ನು ನಷ್ಟದಿಂದ ಪಾರು ಮಾಡಲು ಸಂಸ್ಥೆಯನ್ನು ಮಾರಾಟ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.

ನವದೆಹಲಿ, ಮೇ 31: ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ ಕಂಪನಿಯನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡುವ ಪ್ರಸ್ತಾವನೆಯು ಕೇಂದ್ರ ಸರಕಾರದ ಮುಂದಿದ್ದು, ಶೀಘ್ರದಲ್ಲೇ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆಂದು ಮೂಲಗಳು ತಿಳಿಸಿವೆ.

ಈ ಪ್ರಸ್ತಾವನೆಯಿನ್ನೂ ಕ್ಯಾಬಿನೆಟ್ ನಲ್ಲಿ ಚರ್ಚೆಗೆ ಬಂದಿಲ್ಲ. ಹಾಗಾಗಿ, ಈ ಬಗ್ಗೆ ಏನೂ ಮಾಹಿತಿಯಿಲ್ಲ ಎಂದು ಕೇಂದ್ರ ಸರ್ಕಾರದ ವಕ್ತಾರ ಧನಂಜಯ ಕುಮಾರ್ ಅವರು ಹೇಳಿದ್ದಾರೆ.[ಚಪ್ಪಲಿ ಏಟು ಕೊಟ್ಟ 'ಮಹಾ' ಸಂಸದ ಕಪ್ಪು ಪಟ್ಟಿಗೆ!]

PM Modi Said To Be Considering Privatising Air India

ಈಗಾಗಲೇ ಏರ್ ಇಂಡಿಯಾ ಸಂಸ್ಥೆಯ ಮೇಲೆ 19 ಸಾವಿರ ಕೋಟಿ ರು.ಗಳಷ್ಟು ಸಾಲ ಇದೆ. ಹಾಗಾಗಿ, ಬರುವ ಆದಾಯದಲ್ಲಿ ಕಂಪನಿ ನಡೆಸುವುದು ಕಷ್ಟವಾಗುತ್ತಿದೆ. ಇದರಿಂದಾಗಿ, ಈ ಸಂಸ್ಥೆಯನ್ನು ಪರಭಾರೆ ಮಾಡುವ ಮೂಲಕ ಈ ಸಂಸ್ಥೆಯನ್ನು ಉಳಿಸಲು ಕೇಂದ್ರ ಸರ್ಕಾರದ ಮುಂದೆ ವಿಮಾನ ಯಾನ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿದೆ.[ಹೊಸ ಏರ್ ಲೈನ್ ಸಂಸ್ಥೆ 'ಜೂಮ್ ಏರ್' ಬಗ್ಗೆ ತಿಳಿಯಬೇಕಾದ 5 ಅಂಶ]

ಕೊಳ್ಳುವವರು ಮುಂದೆ ಬಂದಲ್ಲಿಅವರು ಸಾಲದ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ ಎಂದು ವಿಮಾನ ಯಾನ ಖಾತೆ ಸಚಿವಾಲಯದ ಹೆಸರನ್ನೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆಂದು ಎನ್ ಡಿಟಿವಿ ವರದಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+