100 ಮಿಲಿಯನ್ ಫಾಲೋವರ್ಸ್: ಕನ್ನಡದಲ್ಲೂ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ ಖಾತೆಯಲ್ಲಿ ಹಿಂಬಾಲಕರ ವಿಚಾರದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಭಾನುವಾರ ಅವರ ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ದಾಟಿದೆ. ಈ ಮೂಲಕ , ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ನಂತರ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಎರಡನೇ ರಾಜಕಾರಣಿಯಾಗಿದ್ದಾರೆ.

ಭಾರತದಲ್ಲಿ, ಅವರು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳಿಗಿಂತ ಮುಂದಿದ್ದಾರೆ ಸಾಕಷ್ಟು ಮುಂದೆ ಇದ್ದಾರೆ. ರಾಹುಲ್ ಗಾಂಧಿ (26.4 ಮಿಲಿಯನ್), ಅರವಿಂದ್ ಕೇಜ್ರಿವಾಲ್ (27.5 ಮಿಲಿಯನ್), ಅಖಿಲೇಶ್ ಯಾದವ್ (19.9 ಮಿಲಿಯನ್), ಮಮತಾ ಬ್ಯಾನರ್ಜಿ (7.4 ಮಿಲಿಯನ್), ಲಾಲು ಯಾದವ್ (6.3 ಮಿಲಿಯನ್), ತೇಜಸ್ವಿ ಯಾದವ್ (5.2 ಮಿಲಿಯನ್), ಮತ್ತು ಶರದ್ ಪವಾರ್ (2.9 ಮಿಲಿಯನ್) ಫಾಲೋವರ್ಸಗಳನ್ನು ಮಾತ್ರ ಹೊಂದಿದ್ದಾರೆ.

PM Modi Reaches 100 Million Followers on Platform X Expresses Gratitude

ಪ್ರಧಾನಿ ವಿರಾಟ್ ಕೊಹ್ಲಿ (64.1 ಮಿಲಿಯನ್), ನೇಮರ್ ಜೂನಿಯರ್ (63.6 ಮಿಲಿಯನ್), ಮತ್ತು ಲೆಬ್ರಾನ್ ಜೇಮ್ಸ್ (52.9 ಮಿಲಿಯನ್) ಗಿಂತ ಹೆಚ್ಚಿನ ಫಾಲೋವರ್ಸ್‌ಗಳನ್ನು ನರೇಂದ್ರ ಮೋದಿ ಹೊಂದಿದ್ದಾರೆ. ಟೇಲರ್ ಸ್ವಿಫ್ಟ್ (95.3 ಮಿಲಿಯನ್), ಲೇಡಿ ಗಾಗಾ (83.1 ಮಿಲಿಯನ್) ಮತ್ತು ಕಿಮ್ ಕಾರ್ಡಶಿಯಾನ್ (75.2 ಮಿಲಿಯನ್) ಸೆಲೆಬ್ರಿಟಿಗಳಿಗಿಂತ ಕೂಡ ಮೋದಿ ಮುಂದೆ ಇದ್ದಾರೆ.

ಮೂರು ವರ್ಷಗಳಲ್ಲಿ ಭಾರಿ ಏರಿಕೆ

ಪ್ರಧಾನಿ ಮೋದಿ ಅವರ ಎಕ್ಸ್ ಖಾತೆಗೆ ಕಳೆದ ಮೂರು ವರ್ಷಗಳಲ್ಲಿ ಸುಮಾರು 30 ಮಿಲಿಯನ್ ಜನ ಫಾಲೋ ಮಾಡಲು ಆರಂಭಿಸಿದ್ಆರೆ. ಯೂಟೂಬ್‌ನಲ್ಲಿ ಅವರು 25 ಮಿಲಿಯನ್‌ ಚಂದಾದಾರರನ್ನು ಹೊಂದಿದ್ದು, ಇನ್‌ಸ್ಟಾಗ್ರಾಂನಲ್ಲಿ 91 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.

2009 ರಲ್ಲಿ ವೇದಿಕೆಗೆ ಸೇರಿದಾಗಿನಿಂದ, ಪಿಎಂ ಮೋದಿ ಅವರು ಪಕ್ಷದ ಕಾರ್ಯಕರ್ತರು, ಬೆಂಬಲಿಗರು, ಕ್ಯಾಬಿನೆಟ್ ಸಹೋದ್ಯೋಗಿಗಳು ಮತ್ತು ಸಾಮಾನ್ಯ ಜನರನ್ನು ಫಾಲೋ ಮಾಡುತ್ತಾ ಸಕ್ರಿಯವಾಗಿದ್ದಾರೆ.

ಧನ್ಯವಾದ ತಿಳಿಸಿದ ಮೋದಿ

ಫಾಲೋವರ್ಸ್ ಸಂಖ್ಯೆ 100 ಮಿಲಿಯನ್ ಆದ ಬಳಿಕ ಮೋದಿ ಎಲ್ಲರಿಗೂ ಧನ್ಯವಾದ ತಿಳಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ. ಕನ್ನಡದಲ್ಲಿ ಕೂಡ ಅವರು ಧನ್ಯವಾದ ತಿಳಿಸಿದ್ದಾರೆ. ಎಕ್ಸ್‌ನಲ್ಲಿ ನೂರು ಮಿಲಿಯನ್! ಈ ರೋಮಾಂಚಕ ಮಾಧ್ಯಮದಲ್ಲಿರಲು ಮತ್ತು ಚರ್ಚೆ, ಚರ್ಚೆ, ಒಳನೋಟಗಳು, ಜನರ ಆಶೀರ್ವಾದಗಳು, ರಚನಾತ್ಮಕ ಟೀಕೆಗಳು ಮತ್ತು ಹೆಚ್ಚಿನದನ್ನು ಪಾಲಿಸಲು ಸಂತೋಷವಾಗಿದೆ. ಭವಿಷ್ಯದಲ್ಲಿಯೂ ಸಮಾನವಾಗಿ ತೊಡಗಿಸಿಕೊಳ್ಳುವ ಸಮಯವನ್ನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+