ಬಿಜೆಪಿ ಗೆಲುವು: ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಮೋದಿ
ನವದೆಹಲಿ, ಡಿಸೆಂಬರ್ 18: ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತಿದ್ದಂತೆಯೇ ಸಂಸತ್ತಿನ ಮುಂದೆ 'v for Victory' ಎಂಬಂತೆ ಕೈಸನ್ನೆ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಇದೀಗ ಟ್ವಿಟ್ಟರ್ ನಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಹೊರಬಿದ್ದ ಫಲಿತಾಂಶದಲ್ಲಿ ಹಿಮಾಚಲ ಪ್ರದೇಶದದಲ್ಲಿ 68 ಕ್ಷೇತ್ರಗಳಲ್ಲಿ 44 ಸ್ಥಾನ ಮತ್ತು ಗುಜರಾತಿನ 182 ಕ್ಷೇತ್ರಗಳಲ್ಲಿ 99 ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸುವುದು ಬಹುತೇಕ ಖಚಿತವಾಗಿದೆ.

"ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ, ದಕ್ಷ ಆಡಳಿತ ಮತ್ತು ಅಭಿವೃದ್ಧಿಗೆ ಜನಬೆಂಬಲವಿದೆ ಎಂಬುದನ್ನು ಸೂಚಿಸಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸುವುದಕ್ಕೆ ಮುಖ್ಯ ಕಾರಣವಾಗಿದ್ದು ಕಾರ್ಯಕರ್ತರ ದಣಿವರಿಯದ ಶ್ರಮ. ಅವರಿಗೆ ನನ್ನ ಸಲಾಂ" ಎಂದು ಅವರು ಟ್ವೀಟ್ ಮಾಡಿದ್ದಾರೆ.
I bow to the people of Gujarat and Himachal Pradesh for their affection and trust in BJP. I assure them that we will leave no stone unturned in furthering the development journey of these states and serve the people tirelessly.
— Narendra Modi (@narendramodi) December 18, 2017
ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಜನರು ಬಿಜೆಪಿಯ ಮೇಲಿಟ್ಟಿರುವ ನಂಬಿಕೆ ಮತ್ತು ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ನಾವು ಈ ರಾಜ್ಯಗಳ ಅಭಿವೃದ್ಧಿಗೆ ಅವಿರತ ದುಡಿಯುತ್ತೇವೆಂದು ನಾನು ಭರವಸೆ ನೀಡುತ್ತೇನೆ ಎಂದು ಸಹ ಅವರು ಟ್ವೀಟ್ ಮಾಡಿದ್ದಾರೆ.
Election results in Gujarat and Himachal Pradesh indicate a strong support for politics of good governance and development. I salute the hardworking BJP Karyakartas in these states for their hardwork which has led to these impressive victories.
— Narendra Modi (@narendramodi) December 18, 2017
ನ. 9 ರಂದು ಹಿಮಾಚಲ ಪ್ರದೇಶ ಮತ್ತು ಡಿ.9 ಮತ್ತು ಡಿ.14ರಂದು ಗುಜರಾತಿನಲ್ಲಿ ನಡೆದ ಚುನಾವಣೆಗಳ ಫಲಿತಾಂಶ ಇಂದು(ಡಿ.18) ಹೊರಬಿದ್ದಿದ್ದು ಬಿಜೆಪಿ ಎರಡೂ ರಾಜ್ಯಗಳಲ್ಲಿ ಬಹುಮತ ಪಡೆದಿದ್ದು, ಸ್ವತಂತ್ರವಾಗಿ ಸರ್ಕಾರ ನಡೆಸಲಿದೆ.












Click it and Unblock the Notifications