ಪೋರ್ಚುಗಲ್ ನತ್ತ ಪ್ರಯಾಣ ಬೆಳಸಿದ ಪ್ರಧಾನಿ ಮೋದಿ
ನವದೆಹಲಿ, ಜೂನ್ 24: ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ (ಜೂನ್ 24) ಮತ್ತೊಂದು ಸುತ್ತಿನ ವಿದೇಶ ಪ್ರವಾಸ ಕೈಗೊಂಡಿದ್ದಾರೆ.
PM @narendramodi emplaned for Portugal, after which he shall visit USA and Netherlands for important bilateral visits. pic.twitter.com/RfIfzVtIAa
— PMO India (@PMOIndia) June 24, 2017
ಇಂದು (ಜೂನ್ 24) ಪೋರ್ಚುಗಲ್ ಗೆ ಭೇಟಿ ನೀಡಲಿರುವ ಮೋದಿ, ಭಾನುವಾರ (ಜೂನ್ 25) ಮತ್ತು ಸೋಮವಾರ (ಜೂನ್ 26) ಅಮೆರಿಕಕ್ಕೆ ಪ್ರಯಾಣ ಬೆಳಸಲಿದ್ದು, ಅಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಅಮೆರಿಕ ಅಧ್ಯಕ್ಷರಾದ ಬಳಿಕ ಟ್ರಂಪ್ ಮತ್ತು ಮೋದಿ ಅವರದ್ದು ಚೊಚ್ಚಲ ಭೇಟಿ ಇದಾಗಿದೆ.

ಆ ಬಳಿಕ (ಜೂನ್ 27) ಮಂಗಳವಾರ ನೆದರ್ ಲ್ಯಾಂಡ್ ಗೆ ಭೇಟಿ ನೀಡಿ, ಅಲ್ಲಿನ ರಾಷ್ಟ್ರ ನಾಯಕರೊಂದಿಗೆ ಮಾತುಕತೆ ನಡೆಸಿ ಸ್ವದೇಶಕ್ಕೆ ಮರಳಲಿದ್ದಾರೆ.












Click it and Unblock the Notifications