Bihar Polls 2025: ಬಿಹಾರದಲ್ಲಿ 'ನಮೋ' ಭರ್ಜರಿ ಪ್ರಚಾರ, ಎನ್‌ಡಿಎ ಪರ ಸಮೀಕ್ಷೆ ಪ್ರಕಟ
ಪಾಟ್ನಾ, ನವೆಂಬರ್ 02: ಬಿಹಾರದಲ್ಲಿ ಎರಡು ಹಂತಗಳ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಇಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರಕ್ಕೆ ಭೇಟಿ ನೀಡಿದ್ದು, ಪಕ್ಷದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಪ್ರಧಾನಿಯು ಭೋಜ್‌ಪುರ ಮತ್ತು ನವಾಡಾದಲ್ಲಿ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ಪಾಟ್ನಾದಲ್ಲಿ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಕುಮಾರ್ ಜೈಸ್ವಾಲ್ ಮಾಹಿತಿ ನೀಡಿದ್ದಾರೆ.
ಬಿಹಾರದಲ್ಲಿ ಪ್ರಧಾನಿ ಮೋದಿಯವರು ನವೆಂಬರ್ 3 ರಂದು ಸಹರ್ಸಾ ಮತ್ತು ಕಟಿಹಾರ್‌ನಲ್ಲಿ ಹಾಗೂ ನವೆಂಬರ್ 6 ರಂದು ಅರಾರಿಯಾ ಮತ್ತು ಭಾಗಲ್ ಪುರದಲ್ಲಿ ಬೃಹತ್ ರ್ಯಾಲಿಗಳನ್ನು ಮಾಡಲಿದ್ದಾರೆ. ನವೆಂಬರ್ 6 ರಂದು ಬಿಹಾರದ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಈ ಸಂಬಂಧ ಮತದಾರರ ಮತಯಾಚನೆ ಮಾಡಲಿದ್ದಾರೆ. ಅಭಿವೃದ್ಧಿ ವಿಚಾರಗಳನ್ನು ಮುಂದಿಟ್ಟುಕೊಂಡು ಮತ ಕೇಳಲಿದ್ದಾರೆ.

ಎನ್‌ಡಿಎ ಚುನಾವಣಾ ಪ್ರಚಾರದ ಭಾಗವಾಗಿರುವ ಪಾಟ್ನಾ ರೋಡ್ ಶೋಗಾಗಿ ಬಿಜೆಪಿ ವ್ಯಾಪಕ ವ್ಯವಸ್ಥೆ ಮಾಡಿದೆ. ಪಾಟ್ನಾ ಜಿಲ್ಲೆಯಲ್ಲಿ,14 ವಿಧಾನಸಭಾ ಸ್ಥಾನಗಳು ಮೊದಲ ಹಂತದ ಮತದಾನ ವ್ಯಾಪ್ತಿಗೆ ಬರಲಿವೆ. ದಿನಕರ್ ಗೋಲಾಂಬರ್‌ನಿಂದ ಸಂಜೆ 5 ಗಂಟೆಗೆ ರೋಡ್ ಶೋ ಪ್ರಾರಂಭವಾಗಲಿದೆ. ನಲಾ ರಸ್ತೆ, ಠಾಕೂರ್ಬರಿ ರಸ್ತೆ, ಬಾರಿ ಪಥ್ ಮತ್ತು ಬಕರ್‌ಗಂಜ್ ಮೂಲಕ ನಮೋ ರಾಲಿ ಹಾದು ಹೋಗಲಿದೆ.
ಬಿಹಾರ ಜನರು ಪ್ರದಾನಿ ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ. ಒಟ್ಟು ಸುಮಾರು 2.8 ಕಿಲೋಮೀಟರ್ ಕ್ರಮಿಸಿದ ನಂತರ ಗಾಂಧಿ ಮೈದಾನದ ಬಳಿಯ ಉದ್ಯೋಗ್ ಭವನದಲ್ಲಿ ರ್ಯಾಲಿ ಸಮಾಪ್ತಿಯಾಗಲಿದೆ. ಬಿಜೆಪಿ ಕಾರ್ಯಕರ್ತರು ಮಾರ್ಗದುದ್ದಕ್ಕೂ ಹತ್ತು ಸ್ವಾಗತ ಕೇಂದ್ರಗಳನ್ನು ವ್ಯವಸ್ಥೆ ಮಾಡಿದ್ದಾರೆ. ಪ್ರತಿ ಸ್ವಾಗತ ಕೇಂದ್ರಗಳಲ್ಲಿ ಪ್ರಧಾನಿಯವರಿಗೆ ಹೂವಿನ ದಳಗಳು, ಡ್ರಮ್ ಪ್ರದರ್ಶನಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಮೂಲಕ ಸ್ವಾಗತಿಸಲು ಪ್ಲಾನ್ ಮಾಡಿಕೊಳ್ಳಳಾಗಿದೆ. ಒಟ್ಟು ಎರಡು ದಿನ ಬಿಹಾರ ಕೇಸರಿಮಯವಾಗಲಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಜನತಾದಳ (ಯುನೈಟೆಡ್) ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ಜೆವಿಸಿ ಪೋಲ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದೆ. ಈ ಸಂಸ್ಥೆಯ ಸಮೀಕ್ಷೆಯ ಆಧಾರದಲ್ಲಿ ಜನತಾದಳ (ಯುನೈಟೆಡ್)ತನ್ನದೇ ಕಾರ್ಯತಂತ್ರ, ಹುರುಪಿನೊಂದಿಗೆ ಪ್ರಚಾರ ನಡೆಸಿದೆ.
ಬಿಹಾರ ರಾಜ್ಯದಲ್ಲಿ ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ. ಈ ಮೇಲಿನ ಸಮೀಕ್ಷೆಯ ಪ್ರಕಾರ, ಸದರಿ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ 120 ರಿಂದ 140 ಸ್ಥಾನಗಳನ್ನು ಗಳಿಸುವ ಸಾಧ್ಯತೆ ಇದೆ. ಆದರೆ ಎಂಜಿಬಿಬಿಬಿ 93 ರಿಂದ 112 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜು ಮಾಡಲಾಗಿದೆ. ಇಲ್ಲಿ ಮ್ಯಾಜಿಕ್ ಸಂಖ್ಯೆ 122 ಆಗಿದೆ.












Click it and Unblock the Notifications