PM Modi Deepfake video: ಪ್ರಧಾನಿ ಮೋದಿಗೆ ಸಂಬಂಧಿಸಿದ ಡೀಪ್‌ಫೇಕ್‌ ವಿಡಿಯೊ ವೈರಲ್‌

ನವದೆಹಲಿ, ನವೆಂಬರ್ 17: ನಟಿ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಅವರ ಡೀಪ್‌ ಫೇಕ್ ವಿಡಿಯೋ (AI Deepfake Video) ವೈರಲ್ ಆದ ಬೆನ್ನಲ್ಲೆ ಪ್ರಧಾನಿ ನರೇಂದ್ರ ಮೋದಿ ಅವರ ಗರ್ಬಾ ಹಾಡಿನ ಡೀಪ್ ಫೇಕ್ ವಿಡಿಯೋ (PM Modi Garbha Song Deepfake video) ಹರಿದಾಡಿದೆ. ಸ್ವತಃ ವಿಡಿಯೋ ನೋಡಿದ ಪ್ರಧಾನಮಂತ್ರಿಗಳು ತಂತ್ರಜ್ಞಾನ ದುರ್ಭಳಕೆ ಕುರಿತು ಮಾತನಾಡಿದ್ದಾರೆ. ಸದ್ಯದ ಬೆಳವಣಿಗೆ ಕುರಿತು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ದೀಪಾವಳಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಧಾನಿ ಮೋದಿಯವರು, ಚಾಟ್‌ಜಿಪಿಟಿ ತಂಡವು ಎಐ ಆಧಾರಿತ ಡೀಪ್‌ಫೇಕ್‌ಗಳನ್ನು ವಿಡಿಯೋಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿದ್ದಂತೆ ಎಚ್ಚರಿಕೆ ನೀಡುವಂತೆ ಕೇಳಿಕೊಂಡಿದ್ದಾಗಿ ಅವರು ತಿಳಿಸಿದರು.

pm-modi-garba-song-deepfake-video

ದೇಶದ ಗುಜರಾತ್‌ ರಾಜ್ಯದ ಉತ್ಸವ ನೃತ್ಯವಾದ 'ಗಾರ್ಬಾ' ಅನ್ನು ಪ್ರಧಾನಿ ಮಾಡುತ್ತಿರುವ ಡೀಪ್‌ಫೇಕ್ ವೀಡಿಯೋ ಕುರಿತು ಅವರು ಪ್ರಸ್ತಾಪಿಸಿದರು. ನಾನು ಇತ್ತೀಚೆಗೆ ಗರ್ಬಾ ಆಡುತ್ತಿರುವ ವೀಡಿಯೋ ನೋಡಿದ್ದು, ನಾನು ಶಾಲೆಯಲ್ಲಿದ್ದಾಗಲೇ ಗರ್ಬಾ ನೃತ್ಯ ಮಾಡಿಲ್ಲ ಎಂದರು.

ಕೇವಲ ನನ್ನದೊಂದೆ ಅಲ್ಲ ಇಂತಹ ಇನ್ನೂ ಅನೇಕ ವೀಡಿಯೊಗಳು ಆನ್‌ಲೈನ್‌ನಲ್ಲಿವೆ ಎಂದು ಬೇಸರ ವ್ಯಕ್ತಪಡಿಸಿದರು. ಇಂತಹ ನಕಲಿ ವೀಡಿಯೋಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡಬೇಕು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಮುಖ್ಯವಾಗಿದೆ ಎಂದು ಎಚ್ಚರಿಸಿದರು.

ತಂತ್ರಜ್ಞಾನ ದುರ್ಬಳಕೆ, ವಿಡಿಯೋಗಳು ಆತಂಕ ಸೃಷ್ಟಿಸಿವೆ

ನಟರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್ ಮತ್ತು ಕಾಜೋಲ್ ಅವರ ಮುಖಗಳನ್ನು ಎಡಿಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟ ಬೆನ್ನಲ್ಲೆ ದೇಶದ ಪ್ರಧಾನಿಮಂತ್ರಿಯವರೇ ಈ ಸಂಗತಿ ಕುರಿತು ಮಾತನಾಡಿದ್ದಾರೆ.

ಸಾರ್ವಜನಿಕ ವ್ಯಕ್ತಿಗಳನ್ನು ಗುರಿಯಾಗಿಸುವ ನಕಲಿ ವೀಡಿಯೊಗಳು ಮತ್ತು ಜಗತ್ತನ್ನು ದಾರಿತಪ್ಪಿಸುವ ಡೀಪ್‌ಫೇಕ್‌ಗಳನ್ನು ರಚಿಸಲು AI ಯ ಶಕ್ತಿಯ ಬಗ್ಗೆ ವೀಡಿಯೊಗಳು ಭಾರಿ ಆತಂಕವನ್ನು ಹುಟ್ಟುಹಾಕಿವೆ. ಸಾರ್ವಜನಿಕ ವ್ಯಕ್ತಿಗಳಿಗೆ ಇಂತಹ ತೊಂದರೆ ಎದುರಾಗಬಾರದು ಎಂದರು.

pm-modi-garba-song-deepfake-video

ಕ್ರಮ ಕೈಗೊಳ್ಳಲು ಹಲವರು ಒತ್ತಾಯ

ಈಗಾಗಲೇ ಈ ಡೀಪ್‌ಫೇಕ್ ವಿಡಿಯೋ ಕುರಿತು ನಟ ಅಮಿತಾಬ್ ಬಚ್ಚನ್ ಸೇರಿದಂತೆ ಚಿತ್ರರಂಗದ ಹಲವಾರು ಧ್ವನಿಗಳು ಎತ್ತಿದ್ದಾರೆ. ನಕಲಿ ವಿಡಿಯೋ ಹಾವಳಿ ಹೆಚ್ಚಾಗುವ ಮೊದಲೇ ಅವೆಲ್ಲವನ್ನು ತಡೆಯುವಂತೆ, ಕಾನೂನು ಕ್ರಮವಹಿಸಲು ಕರೆ ನೀಡಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚರಿಕೆ ನೀಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಡೀಪ್‌ಫೇಕ್ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಕಾನೂನು ನಿಬಂಧನೆ, ಹಕ್ಕಭಾದ್ಯತೆ ಕುರಿತು ತಿಳಿಸಿದೆ. ದಂಡದ ಕ್ರಮ ಕುರಿತು ಎಚ್ಚರಿಕೆ ನೀಡಿದೆ. ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಐಟಿ ನಿಯಮಗಳ ಪಾಲನೆ ಕಡ್ಡಾಯ. ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಡೀಪ್‌ಫೇಕ್‌ಗಳ ಸೃಷ್ಟಿ ಮತ್ತು ಪ್ರಸಾರಕ್ಕೆ ₹1 ಲಕ್ಷ ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಸಚಿವರು ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+