ಮೆಟ್ರೋ ರೈಲು ವ್ಯವಸ್ಥೆ ಸುಧಾರಣೆ ಸಮಿತಿ ರಚನೆಗೆ ಪ್ರಧಾನಿ ಒಪ್ಪಿಗೆ

ಬೆಂಗಳೂರು, ಜೂನ್ 25: ದೇಶದಲ್ಲಿರುವ ಮೆಟ್ರೋ ರೈಲು ವ್ಯವಸ್ಥೆ ಸುಧಾರಣೆಗೆ ಮಾನದಂಡಗಳನ್ನು ನಿಗದಿಗೊಳಿಸುವ ಸಮಿತಿಯೊಂದನ್ನು ರಚನೆ ಮಾಡುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ಸಮ್ಮತಿ ನೀಡಿದ್ದಾರೆ.

ಬೆಂಗಳೂರು ಒಳಗೊಂಡಂತೆ ದೇಶದಲ್ಲಿರುವ ಎಲ್ಲಾ ಮೆಟ್ರೋ ರೈಲು ವ್ಯವಸ್ಥೆ ಸುಧಾರಣೆಗೆ ಮಾನದಂಡಗಳನ್ನು ನಿಗದಿ ಮಾಡಲು ಸಮಿತಿಯೊಂದನ್ನು ರಚನೆ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿತ್ತು. ಮೆಟ್ರೋ ಮ್ಯಾನ್‌ ಎಂದೇ ಕರೆಯಲಾಗುವ ಇ ಶ್ರೀಧರನ್ ಅವರು ಸಮಿತಿ ಮುಖ್ಯಸ್ಥರಾಗಲಿದ್ದಾರೆ.

ನವದೆಹಲಿ ಮೆಟ್ರೋನ ಮುಂಡ್ಕಾ-ಬಹಾದುರ್‌ಗಢ ಘಟಕ ಉದ್ಘಾಟಿಸಿದ ಪ್ರಧಾನಿ, ಅನುಕೂಲಕರ, ಆರಾಮದಾಯಕ ಮತ್ತು ಕೈಗೆಟುಕುವ ನಗರ ಸಾರಿಗೆ ವ್ಯವಸ್ಥೆ ನಿರ್ಮಾಣ ಮಾಡುವುದು ತಮ್ಮ ಸರ್ಕಾರದ ಆದ್ಯತೆ, ಮೆಟ್ರೋಗಳಿಗೆ ಸಂಬಂಧಿಸಿದಂತೆ ನಮ್ಮ ಸರ್ಕಾರ ನೀತಿಯನ್ನು ಜಾರಿಗೆ ತಂದಿದೆ ಎಂದರು.

PM Modi approves committee on metro rail headed by E.Sridharan

ಜತೆಗೆ ಮೆಟ್ರೋ ರೈಲು ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಶೀಘ್ರ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+