2000 ಸಾವಿರ ರೂಪಾಯಿ ಪಿ.ಎಂ ಕಿಸಾನ್ ಹಣ ಮುಂದಿನ ವಾರ ಈ ದಿನ ಬಿಡುಗಡೆ!
ಕೇಂದ್ರ ಸರ್ಕಾರದ ಪ್ರಮುಖ ಹಾಗೂ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯು ಒಂದಾಗಿದೆ. ಈ ಯೋಜನೆಯ ಮೂಲಕ ಪ್ರತಿ ಮೂರು ಕಂತುಗಳಲ್ಲಿ ತಲಾ 2,000 ಸಾವಿರ ರೂಪಾಯಿಯಂತೆ ಒಟ್ಟು 6,000 ಸಾವಿರ ರೂಪಾಯಿಯನ್ನು ಕೇಂದ್ರ ಸರ್ಕಾರವು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಇದೀಗ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಅಪ್‌ಡೇಟ್‌ವೊಂದು ಬಂದಿದೆ. ಅದರ ಸಂಪೂರ್ಣ ವಿವರ ಇಲ್ಲಿದೆ.
ಕೇಂದ್ರ ಬಿಜಪಿ ಸರ್ಕಾರವು ರೈತರಿಗಾಗಿ ಪರಿಚಯಿಸಿದ ಪ್ರಮುಖ ಯೋಜನೆಗಳಲ್ಲಿ ಪಿ.ಎಂ ಕಿಸಾನ್ ಯೋಜನೆಯೂ ಒಂದಾಗಿದೆ. ಇದೀಗ ರೈತರು 19ನೇ ಕಂತಿನ ಅಡಿಯಲ್ಲಿ ಬರುವ 2,000 ಸಾವಿರ ರೂಪಾಯಿಗಾಗಿ ಕಾಯುತ್ತಿದ್ದಾರೆ. ಈ ಹಣದ ನಿರೀಕ್ಷೆಯಲ್ಲಿರುವ ಕೋಟ್ಯಾಂತರ ಜನರಿಗೆ ಗುಡ್‌ನ್ಯೂಸ್ ಕೊಡಲಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆಯ ಹಣ ಯಾವಾಗ ಬಿಡುಗಡೆಯಾಗಲಿದೆ ಎನ್ನುವ ಅಪ್ಡೇಟ್‌ವೊಂದು ಬಂದಿದೆ.

ಅಧಿಕೃತ ಮಾಹಿತಿ: ಪಿ.ಎಂ ಕಿಸಾನ್ ಯೋಜನೆಯ ಅಡಿಯಲ್ಲಿ ಕೊಡುವ 2,000 ಸಾವಿರ ರೂಪಾಯಿಯ ಬಗ್ಗೆ ಹಲವು ವರದಿಗಳು ಬಂದಿದ್ದವು. ಒಂದೊಂದು ವರದಿಯಲ್ಲೂ ಈ ಯೋಜನೆ ಅಡಿಯಲ್ಲಿ ಕೊಡುವ ಮೊತ್ತದ ಬಗ್ಗೆ ಒಂದೊಂದು ದಿನವನ್ನು ಹೇಳಲಾಗಿತ್ತು. ಇದೀಗ ನಿಖರವಾಗಿ ಈ ಯೋಜನೆಯ ಹಣ ಯಾವ ದಿನ ಬರಲಿದೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಾಗಿದೆ. ಪಿಎಂ ಕಿಸಾನ್ ವೆಬ್ಸೈಟ್ನಲ್ಲಿ ದಿನಾಂಕದ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಾಗಿದೆ.
ಮುಂದಿನ ವಾರ ಪಿ.ಎಂ ಕಿಸಾನ್ ಹಣ: ಮುಂದಿನ ವಾರವೇ ಪಿ.ಎಂ ಕಿಸಾನ್ 19ನೇ ಕಂತಿನ ಹಣ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಹೌದು ಫೆಬ್ರವರಿ 24ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಕಿಸಾನ್‌ನ 19ನೇ ಕಂತಿನ ಹಣವನ್ನು ರಿಲೀಸ್ ಮಾಡಲಿದ್ದಾರೆ. ಈ ಯೋಜನೆಯನ್ನು ದೇಶದ ರೈತರಿಗೆ ನೀಡಲಾಗುತ್ತದೆ. ರೈತರ ಹೆಚ್ಚುವರಿ ಖರ್ಚು ಹಾಗೂ ಕೃಷಿ ಸಾಧನಗಳನ್ನು ಬಳಸುವುದಕ್ಕೆ ನೆರವಾಗುವ ಉದ್ದೇಶದಿಂದ ಈ ಮೊತ್ತವನ್ನು ನೀಡಲಾಗುತ್ತದೆ.
ಈ ಯೋಜನೆಯನ್ನು 2019ರಲ್ಲಿ ಪ್ರಾರಂಭಿಸಲಾಗಿತ್ತು. ರೈತರಿಗೆ ವ್ಯವಸಾಯ ಮಾಡುವುದಕ್ಕೆ ಸಹಾಯ ಮಾಡು ಉದ್ದೇಶದಿಂದ ವರ್ಷಕ್ಕೆ 6,000 ರೂಪಾಯಿ ಮೊತ್ತವನ್ನು ದೇಶದ ಎಲ್ಲಾ ರೈತರಿಗೂ ಕೊಡಲಾಗುತ್ತದೆ. ಈ ಯೋಜನೆಯ ಮೂಲಕ ರೈತರ ಖಾತೆಗೆ ವಾರ್ಷಿಕ 6,000 ರೂ ಹಣವನ್ನು ತಲಾ ಮೂರು ಖಾತೆಗಳಲ್ಲಿ ಕೊಡಲಾಗುತ್ತದೆ. ಪ್ರತೀ ನಾಲ್ಕು ತಿಂಗಳಿಗೆ ಒಂದು ಬಾರಿ 2,000 ಸಾವಿರ ರೂಪಾಯಿಯನ್ನು ದೇಶದ ಎಲ್ಲಾ ರೈತರ ಖಾತೆಗೆ ಏಕಕಾಲಕ್ಕೆ ಜಮೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಏಪ್ರಿಲ್ -ಜುಲೈ, ಆಗಸ್ಟ್ - ನವೆಂಬರ್ ಹಾಗೂ ಡಿಸೆಂಬರ್ - ಮಾರ್ಚ್ ತಿಂಗಳ ನಡುವೆ ಈ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗುತ್ತದೆ. ಆದರೆ, ಚುನಾವಣೆಯ ಸಂರ್ದಭಗಳಲ್ಲಿ ಮಾತ್ರ ಕೆಲವೊಮ್ಮೆ ಸಮಸ್ಯೆ ಆಗುವ ಸಾಧ್ಯತೆ ಇದೆ.












Click it and Unblock the Notifications