ನನ್ನ ಹೆಣ್ಣು ಮಕ್ಕಳನ್ನು ರಕ್ಷಿಸಿ: ಮೋದಿ, ಯೋಗಿಗೊಂದು ಪತ್ರ
ಮೀರತ್, ಜೂನ್ 27: 'ನನ್ನ ನಾಲ್ವರು ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಿ' ಉತ್ತರ ಪ್ರದೇಶದ ಮೀರತ್ತಿನ ವ್ಯಕ್ತಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
'ನನ್ನ ನಾಲ್ವರು ಹೆಣ್ಣು ಮಕ್ಕಳಿಗೆ ಯುವಕನೊಬ್ಬ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಇದೀಗ ಅವರನ್ನು ಓದುವುದಕ್ಕೂ ಕಳಿಸುವುದಕ್ಕಾಗುತ್ತಿಲ್ಲ. ದಯವಿಟ್ಟು ಅವರಿಗೆ ರಕ್ಷಣೆ ನೀಡಿ' ಎಂದು ಈ ವ್ಯಕ್ತಿ ಪತ್ರದಲ್ಲಿ ಬರೆದಿದ್ದಾರೆ.
'ನಿಮ್ಮ ನಾಲ್ಕು ಮಕ್ಕಳ ಮೇಲೆ ನನ್ನ ಸ್ನೇಹಿತರೆಲ್ಲ ಸೇರಿ ದೌರ್ಜನ್ಯ ಎಸಗುತ್ತೇವೆ' ಎಂದು ಆ ವ್ಯಕ್ತಿಯೇ ಬೆದರಿಕೆ ಒಡ್ಡಿದ್ದಾನೆ ಎಂದು ಈ ಪತ್ರದಲ್ಲಿ ಅವರು ಬರೆದಿದ್ದಾರೆ.

ಈ ಪತ್ರದ ನಂತರ ಪ್ರಕರಣ ದಾಖಲಿಸಿಕೊಂಡಿರುವ ಪೊಲಿಸರು ಈ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈ ಎಲ್ಲಾ ಹೆಣ್ಣು ಮಕ್ಕಳ ಮೇಲೆ acid ದಾಳಿ ನಡೆಸುವುದಾಗಿಯೂ ದುಷ್ಕರ್ಮಿಗಳು ಹೆದರಿಸಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ವಿಶ್ವದಲ್ಲೇ ಭಾರತ ಹೆಣ್ಣು ಮಕ್ಕಳಿಗೆ ಅತ್ಯಂತ ಅಸುರಕ್ಷಿತ ದೇಶ ಎಂಬ ವರದಿಯನ್ನು ಇತ್ತೀಚಿನ ಸಂಶೋದನೆಯೊಂದು ನೀಡಿರುವ ಬೆನ್ನಲ್ಲೇ ಈ ಸುದ್ದಿ ಹೊರಬಿದ್ದಿರುವುದು ಆತಂಕ ಸೃಷ್ಟಿಸಿದೆ.












Click it and Unblock the Notifications