10 ಔಷಧಿ ಕಂಪನಿಗಳ ವಿರುದ್ಧ ಸಿಬಿಐ ತನಿಖೆಗಾಗಿ ಪಿಐಎಲ್

ನವದೆಹಲಿ, ಸೆಪ್ಟೆಂಬರ್ 07: ದೇಶದ ಎರಡು ಔಷಧಿ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಅನುಮತಿ ಇಲ್ಲದೆ ಔಷಧಿಗಳನ್ನು ಉತ್ಪಾದನೆ ಮಾಡಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ವಕೀಲ ಎಂ. ಎಲ್. ಶರ್ಮಾ ಎಂಬುವವರು ಈ ಪಿಐಎಲ್ ಸಲ್ಲಿಕೆ ಮಾಡಿದ್ದಾರೆ. ರೆಮೆಡಿಸಿವಿರ್ ಸೇರಿದಂತೆ ಕೆಲವು ಔಷಧಿಗಳನ್ನು ಅನುಮತಿ ಪಡೆಯದೇ ತಯಾರು ಮಾಡಲಾಗುತ್ತಿದೆ. ಮಾರಾಟ ಮಾಡಲು ಲೈಸೆನ್ಸ್ ಇಲ್ಲದಿದ್ದರೂ ಮಾರಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಕೆಲವು ವಿದೇಶಿ ಕಂಪನಿಗಳ ಜೊತೆ ಭಾರತದ ಈ ಕಂಪನಿಗಳು ಒಪ್ಫಂದ ಮಾಡಿಕೊಂಡಿವೆ. ಭಾರತದಲ್ಲಿಯೂ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅನುಮತಿ ಇಲ್ಲದೆ ಇದನ್ನು ಬಳಕೆ ಮಾಡಲಾಗುತ್ತಿದೆ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ.

PIL Seeking CBI Probe On 10 Indian Pharmaceutical Firms

ಭಾರತೀಯ ಔಷಧಿ ಕಾಯ್ದೆ 1940ರ ಉಲ್ಲಂಘನೆ ಮಾಡಿರುವ ಕಂಪನಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಲು ಸಿಬಿಐಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಲಾಗಿದೆ. ನ್ಯಾಯಾಲಯ ಕೆಲವೇ ದಿನಗಳಲ್ಲಿ ಇದರ ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ಭಾರತದಲ್ಲಿ ಅತಿ ಹೆಚ್ಚಿನ ದರಕ್ಕೆ ಈ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಕೋವಿಡ್ ಭಯದಲ್ಲಿ ಜನರ ಹಣ ನೀಡಿ ಖರೀದಿ ಮಾಡಿದ್ದಾರೆ. ಅಮೆರಿಕಕ್ಕೂ ಈ ಔಷಧಿ ಮಾರಾಟ ಮಾಡಲಾಗಿದೆ ಎಂದು ಪಿಐಎಲ್‌ನಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+