ಚುನಾವಣೋತ್ತರ ಸಮೀಕ್ಷೆ: ತಮಿಳುನಾಡಿನಲ್ಲಿ ಫೋಟೋ ಫಿನಿಶ್

Posted By:
Subscribe to Oneindia Kannada

ಚೆನ್ನೈ, ಮೇ 16: ಐದು ರಾಜ್ಯಗಳ ಚುನಾವಣೆ ಆರಂಭಕ್ಕೂ ಮುನ್ನ ಬಂದ ಸಮೀಕ್ಷೆಗಳಿಗೂ ಈಗ ಲೇಟೆಸ್ಟ್ ಸಮೀಕ್ಷೆಗೂ ಭಾರಿ ಅಂತರ ಕಂಡು ಬರಲಿದೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಸುಲಭವಾಗಿ ಅಧಿಕಾರ ಹಿಡಿಯಲಿದೆ ಎಂಬ ಸಮೀಕ್ಷೆ ಸುಳ್ಳಾಗಲಿದ್ದು, ಈ ಬಾರಿ ಫೋಟೋ ಫಿನಿಶ್ ಫಲಿತಾಂಶ ಸಾಧ್ಯತೆ ಕಂಡು ಬಂದಿದೆ. ಗುಪ್ತಚರ ಇಲಾಖೆ ಸೋಮವಾರ (ಮೇ 16) ನೀಡಿರುವ ವರದಿ ಇಲ್ಲಿದೆ.

ಐಬಿ ವರದಿ ಪ್ರಕಾರ, ತಮಿಳುನಾಡಿನಲ್ಲಿ ಫೋಟೋ ಫಿನಿಶ್, ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ಸುಲಭವಾಗಿ ಅಧಿಕಾರಕ್ಕೆ ಬರಲಿದೆ ಎಂಬ ಮಾಹಿತಿ ಸಿಕ್ಕಿದೆ.

Photo finish in Tamil Nadu, big win for TMC in West Bengal says IB

ಜಯಲಲಿತಾ ಅವರು ಮತ್ತೆ ಅಧಿಕಾರ ಹಿಡಿಯಲು ಸಾಕಷ್ಟು ಹೆಣಗಾಡಬೇಕಾಗುತ್ತದೆ. ಡಿಎಂಕೆ ಪ್ರಾಬಲ್ಯ ಜೋರಾಗಿದ್ದು, ಅಂತಿಮವಾಗಿ ವಿಜಯಲಕ್ಷ್ಮಿ ಯಾರ ಕೊರಳಿಗೆ ಬೀಳಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ 184 ಸಂಖ್ಯೆ ದಾಟಲಿದ್ದು, ಕಾಂಗ್ರೆಸ್ ಹಾಗೂ ಎಡಪಕ್ಷಗಳು ಕ್ರಮವಾಗಿ 20 ಹಾಗೂ 65 ಸ್ಥಾನ ಗಳಿಸುವ ಸಾಧ್ಯತೆಯಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While at the start of the election process it appeared that the AIDMK would walk through easily and return to power, the fortunes may have changed slightly as of today says the Intelligence Bureau. The IB report also states that in West Bengal, the TMC led by Mamata Banerjee will come back to power easily.
Please Wait while comments are loading...