ವಾಹನ ಸವಾರರೇ ಗಮನಿಸಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ
ನವದೆಹಲಿ, ಮಾರ್ಚ್ 16: ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಬುಧವಾರ ಏರಿಕೆಗೊಂಡಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 3.07 ರು ಏರಿಕೆಯಾಗಿದ್ದರೆ, ಡೀಸೆಲ್ ದರ ಪ್ರತಿ ಲೀಟರ್ ಗೆ 1.90ರು ಏರಿದೆ.
ಪರಿಷ್ಕೃತ ದರಗಳು ಬುಧವಾರ ಮಧ್ಯರಾತ್ರಿಯಿಂದಲೇ ಜಾರಿಗೊಳ್ಳಲಿವೆ. ಕೇಂದ್ರ ಬಜೆಟ್ 2016-17 ಮಂಡನೆ ನಂತರ ಫೆಬ್ರವರಿ 29ರಂದು ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 3.02ರು ಇಳಿಕೆಯಾಗಿತ್ತು. ಡೀಸೆಲ್ ದರ 1.47ರು ಏರಿಕೆಯಾಗಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕುಸಿತದ ಲಾಭ ಭಾರತೀಯರಿಗೆ ಸಿಗುತ್ತಿಲ್ಲ ಎಂಬ ಕೊರಗು ಮುಂದುವರೆದಿದೆ.












Click it and Unblock the Notifications