ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ, ನವೆಂಬರ್ 05 : ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ತುಸು ಏರಿಕೆಯಾಗಿದ್ದು, ಸರಕಾರಿ ಸ್ವಾಮ್ಯದ ತೈಲ ಕಂಪನಿಗಳು ಜನಸಾಮಾನ್ಯರಿಗೆ ಮತ್ತೊಂದು ಹೊಡೆತ ನೀಡಿವೆ.

ಪೆಟ್ರೋಲ್ ಲೀಟರಿಗೆ 89 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರಿಗೆ 86 ಪೈಸೆಯಷ್ಟು ಏರಿಕೆಯಾಗಿದೆ. ಪೆಟ್ರೋಲ್ ಬೆಲೆ ಏರಿಕೆಯಾಗಿದ್ದು ಸೆಪ್ಟೆಂಬರ್ ನಿಂದ 6ನೇ ಬಾರಿ. ಪರಿಷ್ಕೃತ ದರಗಳು ಶನಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿವೆ. [ಪೆಟ್ರೋಲ್ ದುಬಾರಿ? ಡೋಂಟ್ ವರಿ, ಜೋಕ್ಸ್ ಓದಿರಿ]

Petrol price up by 89p/litre, diesel by 86 paise a litre

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತು ರುಪಾಯಿ-ಡಾಲರ್ ವಿನಿಮಯ ದರಗಳ ಆಧಾರದ ಮೇಲೆ ಹದಿನೈದು ದಿನಗಳಿಗೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏರಿಸಲಾಗುತ್ತದೆ ಅಥವಾ ಇಳಿಸಲಾಗುತ್ತದೆ ಎಂದು ಐಓಸಿ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಬಾರಿ ಅಕ್ಟೋಬರ್ 15ರಂದು ದರಗಳು ಏರಿಕೆ ಕಂಡಿದ್ದವು. ಇಂಡಿಯನ್ ಆಯ್ಲ್ ಕಂಪನಿ ಘೋಷಣೆ ಮಾಡಿರುವ ಈ ದರಗಳು ಮಾರಾಟ ತೆರಿಗೆ ಮತ್ತು ವ್ಯಾಟ್ ಅನ್ನು ಹೊರತುಪಟ್ಟದ್ದಾಗಿರುತ್ತವೆ. ಕಳೆದ ಬಾರಿ ಏರಿಕೆಯಾದಾಗ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರಿಗೆ 71.28 ರು. ಆಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+