ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ
ನವದೆಹಲಿ, ಮೇ.15: ಏಪ್ರಿಲ್ ತಿಂಗಳಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆಯಾಗಿತ್ತು. ಇದಕ್ಕೆ ಪ್ರತಿಯಾಗಿ ಮೇ ತಿಂಗಳಿನಲ್ಲಿ ಎರಡನೆ ಬಾರಿಗೆ ಇಂಧನ ಬೆಲೆ ಏರಿಕೆಯಾಗಿದೆ. ನೂತನ ದರಗಳು ಶುಕ್ರವಾರ (ಮೇ.15) ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ.
ಪೆಟ್ರೋಲ್ ದರ ಪ್ರತಿ ಲೀಟರ್ 3.13 ರು ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 2.71 ರು ನಷ್ಟು ಏರಿಕೆ ಕಂಡಿದೆ. ಈ ಹಿಂದೆ ಮೇ.1ರಂದು ಪೆಟ್ರೋಲ್ ದರ ಲೀಟರ್‌ಗೆ 3.96 ರು. ಹಾಗೂ ಡಿಸೇಲ್ ಲೀಟರ್‌ಗೆ 2.37 ರೂ. ರಷ್ಟು ಹೆಚ್ಚಳ ಕಂಡಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿರುವ ಪರಿಣಾಮ ಪೆಟ್ರೋಲಿಯಂ ಸಚಿವಾಲಯ ಏಕಾಏಕಿ ನಿರ್ಧಾರ ಪ್ರಕಟಿಸಿದೆ. [ತೈಲ ಬೆಲೆ ಇಳಿಯಲು ನಿಜ ಕಾರಣಗಳು ಏನಾಗಿದ್ದವು]
ರುಪಾಯಿ-ಡಾಲರ್ ವಿನಿಮಯ ದರದಲ್ಲಿನ ಬದಲಾವಣೆಯೂ ಏರಿಕೆಗೆ ಕಾರಣ ಎಂದು ಹೇಳಲಾಗಿದೆ.
ಏ.2 ಮತ್ತು ಏ.16ರಂದು ಪೆಟ್ರೋಲ್ ಬೆಲೆಯಲ್ಲಿ ಕ್ರಮವಾಗಿ 80 ಪೈಸೆ ಮತ್ತು 1.30 ರೂ. ಇಳಿಕೆ ಮಾಡಲಾಗಿತ್ತು.
ದರ ಏರಿಕೆ ನಂತರ ಬೆಂಗಳೂರಿಗರು ಲೀಟರ್ ಪೆಟ್ರೋಲ್ ಗೆ 72.34 ರು. ನೀಡಬೇಕಿದೆ. ಅಂತೆಯೇ ಡೀಸೆಲ್ ಗೆ 56.83 ರು ನೀಡಬೇಕಾಗಿದೆ.












Click it and Unblock the Notifications