ಪೆಟ್ರೋಲ್ 4 ರುಪಾಯಿ, ಡೀಸೆಲ್ 2.37 ರು. ತುಟ್ಟಿ
ನವದೆಹಲಿ, ಮೇ. 1: ದೇಶದ ನಾಗರೀಕರಿಗೆ ಕೇಂದ್ರ ಸರ್ಕಾರ ತೈಲ ಶಾಕ್ ನೀಡಿದೆ. ದಿಢೀರ್ ಎಂದು ಪೆಟ್ರೋಲ್ ಮತ್ತು ಡಿಸೇಲ್ ಬೆಲೆಯಲ್ಲಿ ಭಾರಿ ಏರಿಕೆ ಮಾಡಲಾಗಿದೆ.
ಪೆಟ್ರೋಲ್ ದರ ಲೀಟರ್‌ಗೆ 3.96 ರು. ಹಾಗೂ ಡಿಸೇಲ್ ಲೀಟರ್‌ಗೆ 2.37 ರೂ. ರಷ್ಟು ಹೆಚ್ಚಾಗಿದ್ದು ಗುರುವಾರ ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.[ತೈಲ ಬೆಲೆ ಇಳಿಯಲು ನಿಜ ಕಾರಣಗಳು ಏನಾಗಿದ್ದವು]

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿದೆ. ಪರಿಣಾಮ ಪೆಟ್ರೋಲಿಯಂ ಸಚಿವಾಲಯ ಏಕಾಏಕಿ ನಿರ್ಧಾರ ಪ್ರಕಟಿಸಿದೆ. ರೂಪಾಯಿ-ಡಾಲರ್ ವಿನಿಮಯ ದರದಲ್ಲಿನ ಬದಲಾವಣೆಯೂ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಈ ಹಿಂದೆ ಏ.2 ಮತ್ತು ಏ.16ರಂದು ಪೆಟ್ರೋಲ್ ಬೆಲೆಯಲ್ಲಿ ಕ್ರಮವಾಗಿ 80 ಪೈಸೆ ಮತ್ತು 1.30 ರೂ. ಇಳಿಕೆ ಮಾಡಲಾಗಿತ್ತು.[ಏಪ್ರಿಲ್ ನಲ್ಲಿ 2ನೇ ಸಾರಿ ಪೆಟ್ರೋಲ್, ಡೀಸೆಲ್ ಇಳಿಕೆ]
ಬೆಂಗಳೂರಿಗರು ಏಷ್ಟು ಕೊಡಬೇಕು?
ದರ ಏರಿಕೆ ನಂತರ ಬೆಂಗಳೂರಿಗರು ಲೀಟರ್ ಪೆಟ್ರೋಲ್ ಗೆ 69. 21 ರು. ನೀಡಬೇಕಿದೆ. ಅಂತೆಯೇ ಡೀಸೆಲ್ ಗೆ 54.12 ರು ನೀಡಬೇಕಾಗಿದೆ. ಅಬಕಾರಿ ಸುಂಕ ಹೆಚ್ಚಳ ಮಾಡಿದ್ದ ಕೇಂದ್ರ ಸರ್ಕಾರ ಈಗ ಒಮ್ಮೆಲೆ ತೈಲ ಬೆಲೆಯಲ್ಲೂ ಏರಿಕೆ ಮಾಡಿದೆ.












Click it and Unblock the Notifications