ಪೆಟ್ರೋಲ್, ಡೀಸೆಲ್ ದರ, ಮತ್ತೊಮ್ಮೆ ಅಲ್ಪ ಪ್ರಮಾಣದ ಏರಿಕೆ
ಪೆಟ್ರೋಲ್ ದರ ಪ್ರತಿ ಲೀಟರ್ ಗೆ 0.42 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 1.03 ರು ನಂತೆ ಏರಿಕೆಯಾಗಿದೆ. ನೂತನ ದರ ಭಾನುವಾರ(ಜನವರಿ 15) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ
ನವದೆಹಲಿ, ಜನವರಿ 15: ವರ್ಷದ ಮೊದಲ ದಿನವೇ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರ, ಮತ್ತೊಮ್ಮೆ ಅಲ್ಪ ಪ್ರಮಾಣದ ಏರಿಕೆ ಕಂಡಿದೆ. ಪೆಟ್ರೋಲ್ ದರ ಪ್ರತಿ ಲೀಟರ್ ಗೆ 0.42 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 1.03 ರು ನಂತೆ ಏರಿಕೆಯಾಗಿದೆ.
ನೂತನ ದರ ಭಾನುವಾರ (ಜನವರಿ 15) ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಹೇಳಿವೆ. ವರ್ಷದ ಮೊದಲ ದಿನ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 1.29 ರು ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 0.97 ರು ನಂತೆ ಏರಿಕೆಯಾಗಿತ್ತು.[ಸಬ್ಸಿಡಿ ಇರುವ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ]













Click it and Unblock the Notifications