ಹೊಸ ವರ್ಷಕ್ಕೆ ಪೆಟ್ರೋಲ್, ಡಿಸೇಲ್ ಮತ್ತಷ್ಟು ಸೋವಿ

ನವದೆಹಲಿ, ಡಿ, 31: ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್ ಮತ್ತಷ್ಟು ಸೋವಿಯಾಗಲಿದೆ. ಕೇಂದ್ರ ಸರ್ಕಾರ ಗ್ರಾಹಕರಿಗೆ ಸಿಹಿ ಸುದ್ದಿ ನೀಡಲಿದೆ. ಡಿಸೆಂಬರ್ 31 ರ ಮಧ್ಯರಾತ್ರಿಯಿಂದಲೇ ತೈಲ ಬೆಲೆಯಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ರಾಜ್ಯಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರಂತರವಾಗಿ ತೈಲ ಬೆಲೆ ಇಳಿಕೆಯಾಗುತ್ತಿರುವುದು ದರ ಇಳಿಕೆಗೆ ಮುಖ್ಯ ಕಾರಣ. ಆದರೆ ಭಾರತದ ರೂಪಾಯಿ ಕಳೆದೆರಡು ವಾರಗಳಿಂದ ಡಾಲರ್ ಎದುರು ತೀವ್ರ ಏರಿಳಿತ ಕಾಣುತ್ತಿರುವುದರಿಂದ ಹೆಚ್ಚಿನ ಪ್ರಮಾಣದ ಇಳಿಕೆ ಅಸಾಧ್ಯ ಎಂದು ಹೇಳಲಾಗಿದೆ.[ಮತ್ತೆ ಇಳಿಯಿತು ಡೀಸೆಲ್, ಪೆಟ್ರೋಲ್ ಬೆಲೆ]

petrol

ಇದಲ್ಲದೇ ಕೇಂದ್ರ ಸರ್ಕಾರ ಅಡುಗೆ ಅನಿಲ ಬೆಲೆ ಇಳಿಕೆ ಬಗ್ಗೆ ವರದಿ ತಯಾರಿಸುವಂತೆ ತೈಲ ನಿಗಮಗಳಿಗೆ ಸೂಚಿಸಿದೆ. ಗೃಹೋಪಯೋಗಿ ಮತ್ತು ವಾಣಿಜ್ಯ ಬಳಕೆ ನಡುವಿನ ವ್ಯತ್ಯಾಸ ತಿಳಿಸುವಂತೆಯೂ ನಿರ್ದೇಶನ ನೀಡಿದೆ.

ಒಂದು ವೇಳೆ ಡಿಸೆಂಬರ್ 31 ರಂದು ತೈಲ ಬೆಲೆ ಇಳಿಕೆಯಾಗಿದ್ದೇ ಆದರೆ 2014 ರಲ್ಲಿ ಒಟ್ಟು 9 ಸಾರಿ ತೈಲ ಬೆಲೆ ಇಳಿಒಕೆ ಮಾಡಿದಂತಾಗುತ್ತದೆ. ಡೀಸೆಲ್ ಗೆ 5 ಸಾರಿ ಇಳಿಕೆ ಭಾಗ್ಯ ದೊರೆತಂತಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+