ವಾರಣಾಸಿಗೆ ಕುಟುಂಬ ಸಮೇತ ಪೂಜೆ ಸಲ್ಲಿಸಲು ಬಂದಿದ್ದ ವ್ಯಕ್ತಿಗೆ ವೆಜ್ ಬಿರಿಯಾನಿಯಲ್ಲಿ ಸಿಕ್ಕಿದ್ದು ಕೋಳಿ ಕಾಲು!
ಬಿರಿಯಾನಿಯು ದೇಶದಲ್ಲಿ ಹೆಚ್ಚು ಇಷ್ಟಪಡುವ ಭಕ್ಷ್ಯಗಳಲ್ಲಿ ಒಂದಾಗಿದೆ. ಬಿರಿಯಾನಿಯನ್ನು ಇಷ್ಟಪಡದೇ ಇರುವವರು ತುಂಬಾ ವಿರಳ. ಭಾರತದಲ್ಲಂತೂ ಅನೇಕ ಆಹಾರ ಪ್ರಿಯರ ಹೃದಯದಲ್ಲಿ ಬಿರಿಯಾನಿಗೆ ವಿಶೇಷ ಸ್ಥಾನವಿದೆ. ಬಿರಿಯಾನಿಯಲ್ಲಿ ಅನೇಕ ಜನರು ವೆಜ್ ಬಿರಿಯಾನಿ ತಿನ್ನಲು ಇಷ್ಟಪಟ್ಟರೆ, ಇನ್ನೂ ಅನೇಕ ಜನರು ನಾನ್ ವೆಜ್ ಅನ್ನು ಬಯಸುತ್ತಾರೆ.
ಒಂದು ಪಕ್ಷ ನಾನ್ ವೆಜ್ ಬಿಡಿಯಾನಿ ತನ್ನುವವರು ವೆಜ್ ಬಿರಿಯಾನಿ ಅಪ್ಪಿ ತಪ್ಪಿ ತಿನ್ನಬಹುದು. ಆದರೆ ವೆಜ್ ಬಿರಿಯಾನಿ ತಿನ್ನುವವರು ನಾನ್ ವೆಜ್ ಬಿರಿಯಾನಿ ತಿನ್ನುವು ಕಷ್ಟ. ಹಾಗಾಗಿ ವೆಜ್ ಬಿರಿಯಾನಿ ತಿನ್ನುವವರಿಗೆ ಹಲವು ಆಯ್ಕೆಗಳು ಲಭ್ಯವಿದೆ. ಚಿಕನ್ ಬದಲಿಗೆ, ಜಾಕ್‌ಫ್ರೂಟ್ ಬಿರಿಯಾನಿ ನಿಖರವಾದ ಮಾಂಸಾಹಾರಿ ರುಚಿಯನ್ನು ನೀಡುತ್ತದೆ. ಇದು ವೆಜ್ ಪ್ರೀಯರಿಗೆ ಉತ್ತಮ ಆಯ್ಕೆಯಾಗಿದೆ. ಆದರೆ ಈ ಬಿರಿಯಾನಿಗೆ ಸಂಬಂಧಿಸಿದ ಪ್ರಕರಣವೊಂದು ಇತ್ತೀಚಿಗೆ ಮುನ್ನೆಲೆಗೆ ಬಂದಿದ್ದು, ವ್ಯಕ್ತಿಯೊಬ್ಬರು ಆಘಾತಕಾರಿ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ಟ್ವಿಟ್ಟರ್ ಬಳಕೆದಾರರು ರೆಸ್ಟೋರೆಂಟ್‌ನಲ್ಲಿ ಪನೀರ್ ಬಿರಿಯಾನಿ ಬದಲಿಗೆ, ಚಿಕನ್ ಬಿರಿಯಾನಿ ನೀಡಿದ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. ಟ್ವೀಟ್ ಪ್ರಕಾರ, ವ್ಯಕ್ತಿಯ ಸ್ನೇಹಿತ ಪನೀರ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಪನೀರ್ ಬಿರಿಯಾನಿ ಬದಲಿಗೆ ಚಿಕನ್ ತುಂಡುಗಳೊಂದಿಗೆ ಖಾದ್ಯವನ್ನು ಜೊಮಾಟೋ ಮೂಲಕ ಪಡೆಯಲಾಗಿದೆ.
ಟ್ವಿಟ್ಟರ್ ಬಳಕೆದಾರರಾದ ಅಶ್ವಿನಿ ಶ್ರೀವಾಸ್ತವ ಅವರು ವಾರಣಾಸಿಯಲ್ಲಿ ತನಗೆ ಆದ ಅನುಭವದ ಬಗ್ಗೆ ಮಾತನಾಡಿದ್ದಾರೆ. ಅವರು ಎರಡು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ವಿಡಿಯೋದಲ್ಲಿ ತರಕಾರಿ ಪನೀರ್ ಬಿರಿಯಾನಿಯ ಬಿಲ್ ಅನ್ನು ತೋರಿಸಲಾಗಿದೆ. ಅವರು ಅದನ್ನು ಆನ್‌ಲೈನ್‌ನಲ್ಲಿ ಫುಡ್ ಅಗ್ರಿಗೇಟ್ ಅಪ್ಲಿಕೇಶನ್ Zomato ಮೂಲಕ ಆರ್ಡರ್ ಮಾಡಿದರು. ಇನ್ನೊಂದು ಕ್ಲಿಪ್‌ನಲ್ಲಿ ಅವರು ಪಡೆದ ಖಾದ್ಯವನ್ನು ತೋರಿಸುತ್ತಾರೆ. ಆರ್ಡರ್ ಮಾಡಿದ ಪನೀರ್ ಬಿರಿಯಾನಿಯಲ್ಲಿ ಚಿಕನ್ ತುಂಡುಗಳನ್ನು ಮರೆಮಾಡಲಾಗಿರುವುದು ಕಂಡು ಬಂದಿದೆ.
ಆದರೆ ಆರ್ಡರ್ ಮಾಡಿದ ವ್ಯಕ್ತಿಗೆ ಇದು ಚಿಕನ್ ಬಿರಿಯಾನಿ ಎಂದು ತಿಳಿದಿರಲಿಲ್ಲ. ಕೆಲವೊಮ್ಮೆ ಪನೀರ್ ಬಿರಿಯಾನಿಯಲ್ಲಿ ಅನೇಕ ಬಾರಿ ಪನೀರ್ ಅನ್ನು ಹುರುಳಿ ಹಿಟ್ಟಿನ ಪದರದಲ್ಲಿ ಸುತ್ತಿಡಲಾಗುತ್ತದೆ. ಅದಿರಬಹುದು ಎಂದು ಭಾವಿಸಿದ್ದರು. ಇದಾದ ಬಳಿಕ ರುಚಿ ನೋಡಿದಾಗ ಅದು ಪನೀರ್ ಅಲ್ಲ ಬೇರೇನೋ ಎಂದು ತಿಳಿಯಿತು. ಈ ಎಲ್ಲಾ ವಿಷಯಗಳನ್ನು ಬಳಕೆದಾರರು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಂತರ ಅವರು ಬೆಹ್ರೂಜ್ ಬಿರಿಯಾನಿಗೆ ಕರೆ ಮಾಡಿದಾಗ, ಜೊಮಾಟೊವನ್ನು ಸಂಪರ್ಕಿಸಲು ಕೇಳಿದರು ಎಂದು ಅವರು ದೂರಿದ್ದಾರೆ. ಅವರು Zomato ಗೆ ಕರೆ ಮಾಡಿ ಹೋಟೆಲ್ ಅನ್ನು ಸಂಪರ್ಕಿಸಲು ಕೇಳಿದರು ಎಂದು ಬರೆಯಲಾಗಿದೆ. ಆದರೆ ಪ್ರಯೋಜನವಾಗಲಿಲ್ಲ.
ತರುವಾಯ ವಿಡಿಯೋವನ್ನು ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ. ಆಗ ಜೊಮಾಟೊ ಮತ್ತು ಬೆಹ್ರೂಜ್ ಬಿರಿಯಾನಿ ಇಬ್ಬರೂ ವೈರಲ್ ವೀಡಿಯೊಗೆ ತಕ್ಷಣ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಅಶ್ವಿನಿ, ಈ ಘಟನೆಯ ಬಗ್ಗೆ ನಾವು ವಿಷಾದಿಸುತ್ತೇವೆ ಎಂದು Zomato ಬರೆದಿದ್ದಾರೆ. ಅಂತಹ ಯಾವುದೇ ಕೆಲಸ ಮಾಡುವುದು ನಮ್ಮ ಉದ್ದೇಶವಾಗಿರಲಿಲ್ಲ. ನಾವು ಅದನ್ನು ತಕ್ಷಣವೇ ಪರಿಶೀಲಿಸುತ್ತೇವೆ' ಎಂದು Zomato ಉತ್ತರಿಸಿದೆ.












Click it and Unblock the Notifications