ಕೇವಲ 12 ವರ್ಷಗಳಲ್ಲಿ 4139 ಕೋಟಿ ಮೌಲ್ಯದ ಕಂಪನಿ ಕಟ್ಟಿದ್ದ ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ಹೃದಯ ಸ್ತಂಭನದಿಂದ ನಿಧನ
ಭಾರತದ ಆನ್‌ಲೈನ್ ಪೀಠೋಪಕರಣಗಳಲ್ಲಿ ಭಾರಿ ಹೆಸರು ಮಾಡಿರುವ ಪೆಪ್ಪರ್ ಫ್ರೈ ಕಂಪನಿಯ ಸಹ-ಸಂಸ್ಥಾಪಕ ಅಂಬರೀಶ್ ಮೂರ್ತಿ ಅವರು ಲೇಹ್‌ನಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ ಎಂದು ಕಂಪನಿಯ ಮತ್ತೊಬ್ಬ ಸಗ-ಸಂಸ್ಥಾಪಕ ಆಶಿಶ್ ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
"ನನ್ನ ಸ್ನೇಹಿತ, ಮಾರ್ಗದರ್ಶಕ, ಸಹೋದರ, ಆತ್ಮ ಸಂಗಾತಿ ಅಂಬರೀಶ್ ಮೂರ್ತಿ ಇನ್ನಿಲ್ಲ ಎಂದು ತಿಳಿಸಲು ತುಂಬಾ ದುಃಖವಾಗಿದೆ. ನಿನ್ನೆ ರಾತ್ರಿ ಲೇಹ್‌ನಲ್ಲಿ ಹೃದಯಾಘಾತದಿಂದ ಅವರನ್ನು ಕಳೆದುಕೊಂಡೆ. ದಯವಿಟ್ಟು ಅವರಿಗಾಗಿ ಮತ್ತು ಅವರ ಕುಟುಂಬ ಮತ್ತು ಹತ್ತಿರದವರಿಗೆ ಶಕ್ತಿಗಾಗಿ ಪ್ರಾರ್ಥಿಸಿ" ಎಂದು ಆಶಿಶ್ ಶಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮುಂಬೈನಲ್ಲಿ ನೆಲೆಸಿದ್ದ ಅವರು ಲೇಹ್‌ಗೆ ಬೈಕ್‌ನಲ್ಲಿ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಹೃದಯ ಸ್ತಂಭನವಾಗಿದ್ದು ನಿಧನರಾಗಿದ್ದಾರೆ. ಉದ್ಯಮಿಯ ಸಾವಿಗೆ ಹಲವರು ಆಘಾತ ವ್ಯಕ್ತಪಡಿಸಿದ್ದು, ಟ್ವಿಟರ್ ನಲ್ಲಿ ಸಂತಾಪ ಸಲ್ಲಿಸಿದ್ದಾರೆ.
"ಹೃದಯ ಸ್ತಂಭನದಿಂದ ಅಂಬರೀಶ್ ಮೂರ್ತಿ ಅವರ ಹಠಾತ್ ನಿಧನದ ಸುದ್ದಿ ಕೇಳಿ ತುಂಬಾ ದುಃಖ ಮತ್ತು ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅದ್ಭುತ ಉದ್ಯಮಿ ಮತ್ತು ಅನೇಕರಿಗೆ ಸ್ಫೂರ್ತಿ. ಪೆಪ್ಪರ್‌ಫ್ರೈ ಜೊತೆಗಿನ ಅವರ ಪರಂಪರೆಯು ಬದುಕಲಿ." ಎಂದು ಸ್ವಾತಿ ಭಾರ್ಗವ, ಉದ್ಯಮಿ ಟ್ವಿಟರ್ ನಲ್ಲಿ ಬರೆದಿದ್ದಾರೆ.
ಅನೇಕ ಸಂಸ್ಥೆಗಳಲ್ಲಿ ಕೆಲಸ
ಜೂನ್ 1996 ರಲ್ಲಿ ಕ್ಯಾಡ್‌ಬರಿಯ ಸೇಲ್ಸ್ ಮತ್ತು ಮಾರ್ಕೆಟಿಂಗ್ ವೃತ್ತಿಪರರಾಗಿ ಸೇರಿದಾಗ ಮೂರ್ತಿಯವರ ವ್ಯಾಪಾರ ಪ್ರಪಂಚಕ್ಕೆ ಪ್ರವೇಶ ಪ್ರಾರಂಭವಾಯಿತು. ಅವರು ಪ್ರಸಿದ್ಧ ಚಾಕೊಲೇಟ್ ತಯಾರಕರೊಂದಿಗೆ ಜೊತೆ ಐದೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದರು.
ಅಂಬರೀಶ್ ಮೂರ್ತಿ ಅವರು ತಮ್ಮ ಪರಿಣತಿಯೊಂದಿಗೆ ಪ್ರುಡೆನ್ಶಿಯಲ್ ICICI AMC (ಈಗ ICICI ಪ್ರುಡೆನ್ಶಿಯಲ್) ಸಂಸ್ಥೆಯನ್ನು ಸೇರಿಕೊಳ್ಳುವ ಮೂಲಕ ಹಣಕಾಸಿನ ವಲಯಕ್ಕೆ ಕಾಲಿಟ್ಟರು. ವಿಪಿ ಮಾರ್ಕೆಟಿಂಗ್ ಮತ್ತು ಗ್ರಾಹಕ ಸೇವೆ ವಿಭಾಗದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು.
ಲೆವಿಸ್ ಕಂಪನಿನಲ್ಲಿ ಐದು ತಿಂಗಳ ಕಾಲ ಕೆಲಸ ಮಾಡಿದರು ನಂತರ, ಕೆಲಸ ತೊರೆದ ಅವರು. ತಮ್ಮ ಸ್ವಂತ ಉದ್ಯಮವಾದ ಒರಿಜಿನ್ ರಿಸೋರ್ಸಸ್ ಅನ್ನು ಪ್ರಾರಂಭಿಸಿದರು. ಈ ಪೋರ್ಟಲ್, ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
ಅವರು 2005 ರಲ್ಲಿ ಸ್ಟಾರ್ಟ್-ಅಪ್ ಅನ್ನು ಸ್ಥಗಿತಗೊಳಿಸಿದರು ಮತ್ತು ಬ್ರಿಟಾನಿಯಾದಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸೇರಿದರು. ಏಳು ತಿಂಗಳ ನಂತರ, ಮೂರ್ತಿ ಇಬೇ ಇಂಡಿಯಾವನ್ನು ಸೇರಿಕೊಂಡರು ಮತ್ತು ಫಿಲಿಪೈನ್ಸ್, ಮಲೇಷಿಯಾ ಮತ್ತು ಭಾರತಕ್ಕೆ ದೇಶದ ವ್ಯವಸ್ಥಾಪಕರಾಗಿದ್ದರು.
ಪೆಪ್ಪರ್ ಫ್ರೈ ಸಂಸ್ಥೆ ಕಟ್ಟಿದ ಉದ್ಯಮಿ
ಅಂಬರೀಶ್ ಮೂರ್ತಿ ಜೂನ್ 2011 ರಲ್ಲಿ ಆಶಿಶ್ ಶಾ ಅವರೊಂದಿಗೆ ಪೆಪ್ಪರ್‌ಫ್ರೈ ಅನ್ನು ಪ್ರಾರಂಭಿಸಿದರು. ಪೆಪ್ಪರ್‌ಫ್ರೈ ಆನ್‌ಲೈನ್ ಮಾರುಕಟ್ಟೆಯಾಗಿದ್ದು ಅದು ಮನೆ ಪೀಠೋಪಕರಣಗಳು ಮತ್ತು ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ಮುಂಬೈ ಮೂಲದ ಸ್ಟಾರ್ಟ್‌ಅಪ್ ತನ್ನ ಮೊದಲ ಸುತ್ತಿನ ಬಂಡವಾಳವನ್ನು ಡಿಸೆಂಬರ್ 2011 ರಲ್ಲಿ ನಾರ್ವೆಸ್ಟ್ ವೆಂಚರ್ ಪಾರ್ಟ್‌ನರ್ಸ್‌ನಿಂದ $5 ಮಿಲಿಯನ್ ಚೆಕ್ ಪಡೆದುಕೊಂಡಿತು.
ಪೆಪ್ಪರ್‌ಫ್ರೈ ನಂತರ ಪಿಡಿಲೈಟ್ ವೆಂಚರ್ಸ್ ಸೇರಿದಂತೆ ಫೆವಿಕಾಲ್, ಗೋಲ್ಡ್‌ಮನ್ ಸ್ಯಾಚ್ಸ್ ಇನ್ವೆಸ್ಟ್‌ಮೆಂಟ್ ಪಾರ್ಟ್‌ನರ್ಸ್ ಮತ್ತು ಇತರ ಹಲವಾರು ಹೂಡಿಕೆದಾರರಿಂದ ಒಟ್ಟು $240 ಮಿಲಿಯನ್‌ಗಳಷ್ಟು ಬಂಡವಾಳ ಸಂಗ್ರಹಿಸಿತು.
ನವೆಂಬರ್ 2021 ರಲ್ಲಿ, ಜನರಲ್ ಎಲೆಕ್ಟ್ರಿಕ್, ಮುಖೇಶ್ ಶರ್ಮಾ ಫ್ಯಾಮಿಲಿ ಟ್ರಸ್ಟ್ ಮತ್ತು ಇತರರು ಕಂಪನಿಯಲ್ಲಿ $ 10 ಮಿಲಿಯನ್ ಹೂಡಿಕೆ ಮಾಡಿದಾಗ ಕಂಪನಿ ಮತ್ತಷ್ಟು ಬೆಳೆಯಿತು. ಸದ್ಯ ಪೆಪ್ಪರ್ ಕಂಪನಿಯ ಮಾರುಕಟ್ಟೆ ಮೌಲ್ಯ $500 ಮಿಲಿಯನ್ (4139 ಕೋಟಿ ರೂಪಾಯಿ) ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸ್ಟಾರ್ಟಪ್ ಹೋಮ್ ಸೆಂಟರ್, ಅರ್ಬನ್ ಲ್ಯಾಡರ್, ಫರ್ಲೆಂಕೊ, ವೇಕ್‌ಫಿಟ್ ಮತ್ತು ಇತರ ಕಂಪನಿಗಳ ಜೊತೆ ಸ್ಪರ್ಧೆ ಮಾಡುತ್ತಿರುವ ಪೆಪ್ಪರ್ ಫ್ರೈ ಸಾಕಷ್ಟು ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications