ಚರಂಡಿ ನೀರಿನಲ್ಲಿ ನೋಟು ಹುಡುಕಿದ ಜನ: ವಿಡಿಯೋ
ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತು ಬಿಹಾರದಲ್ಲಿ ನಡೆದ ಈ ಘಟನೆಯಿಂದ ನಿಜ ಎನಿಸಬಹುದು. ಹೌದು ಬಿಹಾರದಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ಬಿಹಾರದ ರೋಹ್ತಾಸ್ ಜಿಲ್ಲೆಯ ಚರಂಡಿಯಲ್ಲಿ ಜನ ಹಣವನ್ನು ಹುಡುಕಿರುವ ಘಟನೆ ನಡೆದಿದೆ. ಮುಖ ಕಿವಿಚಿದರೂ ಈ ಮಾತು ನಿಜ.
ಮುಂಜಾನೆ ಚರಂಡಿಯೊಳಗೆ 2,000, 500, 100 ಮತ್ತು 10 ರೂ ಮುಖಬೆಲೆಯ ನೋಟುಗಳಿರುವ ಚೀಲಗಳನ್ನು ನೋಡಿದ್ದೇವೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದ್ದಾರೆ. ಹೀಗಾಗಿ ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಜನರು ಧಾವಿಸಿ ಚರಂಡಿಗಿಳಿದಿದ್ದಾರೆ. ನೋಟುಗಳನ್ನು ಸಂಗ್ರಹಿಸತೊಡಗಿದ್ದಾರೆ. ನೋಟುಗಳು ಅಸಲಿ ಎಂದು ಕೂಡ ಹೇಳಿಕೊಂಡಿದ್ದಾರೆ.

ಬಿಹಾರದ ರೋಹ್ತಾಸ್ ಜಿಲ್ಲೆಯ ಚರಂಡಿಯಲ್ಲಿ ನೋಟುಗಳು ಕಂಡುಬಂದಿದ್ದು ಹಲವಾರು ಜನರು ಸಾಧ್ಯವಾದಷ್ಟು ನೋಟುಗಳನ್ನು ದೋಚಲು ಚರಂಡಿಗೆ ಇಳಿದಿದ್ದಾರೆ. ನಾ ಮುಂದು ತಾ ಮುಂದು ಎನ್ನುತ್ತಾ ನೋಟು ಸಂಗ್ರಹ ಮಾಡಿದ್ದಾರೆ.
ಮೊರಾದಾಬಾದ್ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದ್ದು, ಹಲವಾರು ಜನರು ಚರಂಡಿಗೆ ನುಗ್ಗಿ 2,000, 500, 100 ಮತ್ತು 10 ರೂ ಮುಖಬೆಲೆಯ ನೋಟುಗಳನ್ನು ಸಂಗ್ರಹಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋವನ್ನು ಇಲ್ಲಿ ವೀಕ್ಷಿಸಿ-
If it is money, people will do anything. They waded sewage water in a canal in #Sasaram town in #Rohtas district of #Bihar to collect bundles of sodden, rotten currency notes. #India #Rupees #MoneyHeist pic.twitter.com/0NCCCHKf7u
— Dev Raj (@JournoDevRaj) May 6, 2023
ಈ ಮಧ್ಯೆ, ನೋಟುಗಳು ಅಸಲಿಯೇ ಮತ್ತು ಅವುಗಳನ್ನು ಯಾರು ಚರಂಡಿಗೆ ಎಸೆದರು ಎಂಬ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸುತ್ತಿದೆ.

ಚರಂಡಿಯಲ್ಲಿ ಫೋಟೋ ಶೂಟ್
ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್‌ನ ಚಿತ್ರಗಳು ವೈರಲ್ ಆಗುತ್ತಿದ್ದು ಇದು ಸಾಕಷ್ಟು ಅದ್ಭುತವಾಗಿದೆ. ಈ ಫೋಟೋಶೂಟ್‌ನಲ್ಲಿ ಜೋಡಿಗಳು ಚರಂಡಿಯಲ್ಲಿ ಕುಳಿತು ಫೋಟೋಶೂಟ್ ಮಾಡಿಸುತ್ತಿದ್ದಾರೆ. ಸದ್ಯ ಈ ಫೋಟೋಗಳು ಫುಲ್ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಟ್ರೆಂಡ್ ಸಾಕಷ್ಟು ಹೆಚ್ಚಾಗಿದೆ. ಮದುವೆಗೂ ಮುನ್ನ ದಂಪತಿಗಳು ಸುಂದರ ಸ್ಥಳಕ್ಕೆ ಹೋಗಿ ಅಲ್ಲಿ ಫೋಟೋ ತೆಗೆಯುತ್ತಾರೆ. ಛಾಯಾಗ್ರಾಹಕರು ದಂಪತಿಗಳ ಫೋಟೋಗಳನ್ನು ಸಮುದ್ರ ತೀರದಲ್ಲಿ, ಪಾರ್ಕ್ಗಳಲ್ಲಿ ಹೋಗಿ ಪ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ.

ಆದರೆ ಇಲ್ಲೊಂದು ಜೋಡಿಗಳು ಚರಂಡಿಯಲ್ಲಿ ಕುಳಿತು ಪ್ರೀ ವೆಡ್ಡಿಂಗ್ ಫೋಟೋಶೂಟ್ ಮಾಡಿದ್ದಾರೆ. ಸದ್ಯ ಈ ಫೋಟೋ ಶೂಟ್‌ನ ಚಿತ್ರಗಳು ವೈರಲ್ ಆಗುತ್ತಿದ್ದು ಇದು ಸಾಕಷ್ಟು ಅದ್ಭುತವಾಗಿದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ಫೋಟೋ ಒಂದು ಭಾರೀ ವೈರಲ್ ಆಗುತ್ತಿದೆ. ಆದರೆ ಸಾಮಾನ್ಯವಾಗಿ ಯಾರೇ ಆಗಲಿ ಫೋಟೋ ಶೂಟ್ ಮಾಡ್ಬೇಕಾದ್ರೆ ಒಳ್ಳೆಯ ರೀತಿಯ ಬಟ್ಟೆಗಳನ್ನು ತೊಟ್ಟು ಎಲ್ಲೋ ಪಾರ್ಕ್ನಲ್ಲಿ ಅಥವಾ ಕಡಲ ತೀರದಲ್ಲಿ ಕುಳಿತು ಫೋಟೋಶೂಟ್ ಮಾಡುತ್ತಾರೆ. ಆದರೆ ಈ ಫೋಟೋ ನೋಡಿದ್ರೆ ಇದು ನಿಜವೋ? ಸುಳ್ಳೋ ಎಂಬ ಪ್ರಶ್ನೆಗಳು ಮೂಡುತ್ತಿದೆ.
ಇನ್ನು ಈ ವೈರಲ್ ಆಗಿರುವ ಫೋಟೋದಲ್ಲಿ ಜೋಡಿಗಳು ಚರಂಡಿಯಲ್ಲಿ ಕುಳಿತಿದ್ದಾರೆ. ಇವರ ಸುತ್ತಲೂ ಕಸಗಳು ತುಂಬಿಕೊಂಡಿದೆ. ಇಬ್ಬರೂ ಒಬ್ಬರೊನ್ನಬ್ಬರು ನೋಡಿ ನಗುವುದನ್ನು ಕಾಣಬಹುದಾಗಿದೆ. ಅದೇ ರೀತಿಯಲ್ಲಿ ಈ ಫೋಟೋದಲ್ಲಿ ಹುಡುಗ ಮತ್ತು ಹುಡುಗಿ ಒಬ್ಬರಿಗೊಬ್ಬರು ಕಿಸ್ ಕೊಡೋದನ್ನು ಸಹ ನೋಡಬಹುದಾಗಿದೆ. ಇನ್ನು ಚರಂಡಿಯಲ್ಲಿ ಈ ರೀತಿಯಲ್ಲೂ ಫೋಟೋಗಳನ್ನು ಜನರು ತೆಗೆಯುತ್ತಾರಾ ಎಂಬ ಪ್ರಶ್ನೆಗಳು ಮೂಡುತ್ತಿವೆ.
ಇನ್ನು ಈ ಫೋಟೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದಂತೆ ಜನರು ಈ ಫೋಟೋಶೂಟ್ ಫೇಕ್ ಎಂಬ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಹಾಗೆಯೇ ಕೆಲವರು ಇದು AI ಟೆಕ್ನಾಲಜಿ ಬಳಸಿಕೊಂಡು ಎಡಿಟ್ ಮಾಡಿದ ಫೋಟೋಗಳಾಗಿದೆ ಎಂದು ಹೇಳಿದ್ದಾರೆ.











Click it and Unblock the Notifications