ಕಾಶ್ಮೀರ ಪ್ರಜೆಗಳ ಬಗ್ಗೆ ಹಗುರ ಮಾತು: ವೈದ್ಯನ ವಿರುದ್ಧ ತನಿಖೆ
ನಸ್ರೀನಾ ಮಲಿಕ್ ಎಂಬ ಮಹಿಳೆಯೊಬ್ಬರಿಗೆ ಇಲ್ಲಿನ ಪೋಸ್ಟ್ ಗ್ರಾಜುಯೇಟ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಪಿಜಿಐಎಂಇಆರ್) ಕೇಂದ್ರಕ್ಕೆ ತರಲಾಗಿತ್ತು.
ಚಂಡೀಗಢ, ಮೇ 8: 'ಕಾಶ್ಮೀರದಲ್ಲಿ ಭಾರತೀಯ ಸೇನೆಯ ಮೇಲೆ ಕಲ್ಲು ಎಸೆಯಿರಿ. ಅಕಸ್ಮಾತ್ ಆ ಘಟನೆಗಳಲ್ಲಿ ನಿಮಗೆ ಗಾಯವಾದರೆ ಚಿಕಿತ್ಸೆಗೆ ಇಲ್ಲಿಗೆ ಬನ್ನಿ' - ಅನಾರೋಗ್ಯದಿಂದ ಚಿಕಿತ್ಸೆಗಾಗಿ ಆಗಮಿಸಿದ ವ್ಯಕ್ತಿಯೊಬ್ಬನಿಗೆ ಚಂಡೀಗಢದ ವೈದ್ಯರೊಬ್ಬರು ಛೇಡಿಸಿ ಮಾತನಾಡಿರುವುದು ವಿವಾದಕ್ಕೀಡಾಗಿದೆ. ಹಾಗಾಗಿ, ಈ ವೈದ್ಯರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ನಸ್ರೀನಾ ಮಲಿಕ್ ಎಂಬ ಮಹಿಳೆಯೊಬ್ಬರು ಇಂಟರ್ನಲ್ ಕ್ಯಾರೋಟಿಕ್ ಆರ್ಟರಿ ಅನೇರಿಸಂ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಇಲ್ಲಿನ ಪೋಸ್ಟ್ ಗ್ರಾಜುಯೇಟ್ ಇನ್ಸಿಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಪಿಜಿಐಎಂಇಆರ್) ಕೇಂದ್ರಕ್ಕೆ ತರಲಾಗಿತ್ತು.
ರೋಗಿಯನ್ನು ಪರೀಕ್ಷೆಗೊಳಪಡಿಸಿದ ಈ ಕೇಂದ್ರದ ವೈದ್ಯರೊಬ್ಬರು, ಕಾಶ್ಮೀರ ಪ್ರಜೆಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ನಸ್ರೀನ್ ಅವರ ಪುತ್ರ ಅಹ್ಮದ್ ಮಲಿಕ್ ಆರೋಪಿಸಿದ್ದಾರೆ. ಚಿಕಿತ್ಸೆ ನೀಡುವ ವೇಳೆ, ''ಕಾಶ್ಮೀರದಲ್ಲಿ ನಮ್ಮ ಸೇನೆಗಳ ಮೇಲೆ ಕಲ್ಲೆಸೆಯುತ್ತೀರಿ. ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿರಿ'' ಎಂದು ವೈದ್ಯರು ಹೇಳಿದ್ದಾಗಿ ಅಹ್ಮದ್ ಆರೋಪಿಸಿದ್ದಾರೆ.












Click it and Unblock the Notifications