ವಾರದೊಳಗೆ 6,000 ಕೆಜಿ ಟೊಮೆಟೊ ಮಾರಿದ Paytm: ಕಡಿಮೆ ಬೆಲೆಯಲ್ಲಿ ಮನೆ ಬಾಗಿಲಿಗೆ ಬರುವ 'ಕೆಂಪು ಸುಂದರಿ', ಅಂಕಿಅಂಶ, ಮಾಹಿತಿ,ವಿವರ
ನವದೆಹಲಿ, ಆಗಸ್ಟ್ 01: ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪೇಟಿಎಂ ಇ-ಕಾಮರ್ಸ್ ಪ್ರೈವೇಟ್ ಲಿಮಿಟೆಡ್ (ಪಿಇಪಿಎಲ್) ಒಂದು ವಾರದೊಳಗೆ ಸುಮಾರು 6,000 ಕೆಜಿ ಟೊಮೆಟೊಗಳನ್ನು ಮಾರಾಟ ಮಾಡಿದೆ. ಒಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ಒಎನ್‌ಡಿಸಿ) ಮೂಲಕ ಕಡಿಮೆ ಬೆಲೆಯಲ್ಲಿ ಟೊಮೆಟೊ ಮಾರಿ ದಾಖಲೆ ಸೃಷ್ಟಿಸಿದೆ.
ಒಎನ್‌ಡಿಸಿ ಮೂಲಕ ಒಂದು ವಾರದೊಳಗೆ ಸುಮಾರು 6,000 ಕೆಜಿ ಟೊಮೆಟೊಗಳನ್ನು ಮಾರಾಟ ಮಾಡಲಾಗಿದೆ ಎಂದು ಪೇಟಿಎಂ ಕಂಪನಿ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಒಎನ್‌ಡಿಸಿಯ ಒಟ್ಟು 10,000 ಕೆಜಿ ಮಾರಾಟದಲ್ಲಿ, ಶೇ.60 ರಷ್ಟು ಟೊಮೆಟೊವನ್ನು ಪೇಟಿಎಂ ಮೂಲಕ ಮಾರಲಾಗಿದೆ. ಇದರ ಮೊತ್ತ ಅಂದಾಜು 4.2 ಲಕ್ಷ ರೂಪಾಯಿಗಳಷ್ಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪಿಇಪಿಎಲ್ ಮೂಲಕ ನಡೆಸಲ್ಪಡುವ ಕಂಪನಿಯ ಅಪ್ಲಿಕೇಶನ್‌ನಲ್ಲಿ 'Paytm se ONDC' ಅನ್ನು ಪ್ರಾರಂಭಿಸಲಾಯಿತು. Paytm ONDC ಅಲ್ಲಿ ಮಾರಾಟದ ಘೋಷಣೆಯನ್ನು ಕಳೆದ ವಾರ ಮಾಡಲಾಗಿದೆ. ದೆಹಲಿ-ಎನ್‌ಆರ್‌ಸಿ ಪ್ರದೇಶದ ಗ್ರಾಹಕರಿಗಾಗಿ ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್) ಈ ಪ್ರಕ್ರಿಯೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.

ಗ್ರಾಹಕರು Paytm ಅಪ್ಲಿಕೇಶನ್‌ನಲ್ಲಿ ONDC ಮೂಲಕ ವಾರಕ್ಕೆ ಎರಡು ಕೆಜಿ ಟೊಮೆಟೊಗಳನ್ನು ಪಡೆಯಬಹುದು. 140 ರೂಗಳಲ್ಲಿ ಎರಡು ಕಿಲೋಗ್ರಾಂಗಳಷ್ಟು ಟೊಮೆಟೊಗಳನ್ನು ಖರೀದಿಸಬಹುದು.
ಎನ್‌ಸಿಸಿಎಫ್‌ನ ನಿರ್ದೇಶನಗಳ ಪ್ರಕಾರ, ಟೊಮೆಟೊ ಬೆಲೆಗಳು ಮತ್ತಷ್ಟು ಕಡಿಮೆಯಾಗಬಹುದು. ಕೆಲವು ನಗರಗಳಲ್ಲಿ ಟೊಮೆಟೊ ಚಿಲ್ಲರೆ ಬೆಲೆ ಪ್ರತಿ ಕಿಲೋಗ್ರಾಂಗೆ 200 ರೂಪಾಯಿ ದಾಟಿರುವುದರಿಂದ ಬಳಕೆದಾರರಿಗೆ ಅನುಕೂಲವಾಗುವಂತೆ ಈ ಕ್ರಮ ಕೈಗೊಳ್ಳಲಾಗಿದೆ.
'ಭಾರತದಲ್ಲಿ ಇ-ಕಾಮರ್ಸ್ ಅನ್ನು ಹೆಚ್ಚು ಬಳಸುವಂತೆ ಮಾಡುವುದು. ನಮ್ಮ ಗ್ರಾಹಕರಿಗೆ ಸಾಟಿಯಿಲ್ಲದ ಆನ್‌ಲೈನ್ ಶಾಪಿಂಗ್ ಅನುಭವವನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಅದೇ ರೀತಿ, Paytm se ONDC ನಲ್ಲಿ ಟೊಮೆಟೊ ಮಾರಾಟ ಮಾಡಲಾಗಿದೆ. ಇದಕ್ಕೆ ನಮ್ಮ ಗ್ರಾಹಕರಿಂದ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ. ಈ ಹಿನ್ನೆಲೆಯಲ್ಲಿ ನಾವು ರೋಮಾಂಚನಗೊಂಡಿದ್ದೇವೆ' ಎಂದು ಕಂಪನಿ ವಕ್ತಾರರು ತಿಳಿಸಿದ್ದಾರೆ.

Paytm ONDC ಮತ್ತೊಂದು ವಾರದವರೆಗೆ ಮಾರಾಟವನ್ನು ಮುಂದುವರಿಸುತ್ತದೆ. ಗ್ರಾಹಕರಿಗೆ ಶೂನ್ಯ ವಿತರಣಾ ಶುಲ್ಕದಲ್ಲಿ ಟೊಮೆಟೊಗಳನ್ನು ಆರ್ಡರ್ ಮಾಡಲು ಅನುಮತಿ ನೀಡುತ್ತದೆ ಎಂದು ಮಾಹಿತಿ ನೀಡಲಾಗಿದೆ.
ಬೆಂಗಳೂರಿ, ದೆಹಲಿ-ಎನ್‌ಸಿಆರ್, ಮುಂಬೈ, ಕೋಲ್ಕತ್ತಾ, ಚೆನ್ನೈ, ಕಾಂಚೀಪುರಂ, ಹೈದರಾಬಾದ್, ಬಾಗಲಕೋಟ್ ಮತ್ತು ಲಕ್ನೋನಲ್ಲಿ ಒಎನ್‌ಡಿಸಿ ಲಭ್ಯವಿದೆ.
ಸ್ಥಳೀಯ ಮಾರುಕಟ್ಟೆಯಲ್ಲಿ ಕೆಲ ದಿನಗಳಿಂದ ಅಲ್ಪ ಕುಸಿತ ಕಂಡಿದ್ದ ತರಕಾರಿ ಬೆಲೆ ಮತ್ತೆ ಗಗನಕ್ಕೇರಿದೆ. ದೇಶದಾದ್ಯಂತ ಭಾರೀ ಮಳೆಯಿಂದಾಗಿ ತರಕಾರಿಗಳ ಕೊರತೆಯ ಹೆಚ್ಚುತ್ತಿದೆ. ರಾಜ್ಯವೂ ಸೇರಿದಂತೆ ಟೊಮೆಟೊ ಬೆಲೆ ಕೆಜಿಗೆ 180 ರಿಂದ 200 ರೂ.ವರೆಗೆ ಮಾರಾಟವಾಗುತ್ತಿದೆ.
ತಾಜಾ ಉತ್ಪನ್ನಗಳು ಮಾರುಕಟ್ಟೆಗೆ ಬಂದ ನಂತರ ಬೆಲೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ. ಟೊಮೆಟೊ ಮಾತ್ರವಲ್ಲ, ಇತರೆ ತರಕಾರಿಗಳೂ ದುಬಾರಿಯಾಗಿವೆ. ಹಸಿ ಮೆನಸಿನಕಾಯಿ, ಶುಂಠಿ ಸೇರಿದಂತೆ ಹಲವು ತರಾಕಾರಿಗಳ ಬೆಲೆ ಮುಗಿಲು ಮುಟ್ಟಿವೆ.
ರಾಜ್ಯದಲ್ಲಿಯೂ ಟೊಮೆಟೊ ತುಟ್ಟಿ
ಸೋಮವಾರ ಬೆಳಗ್ಗೆ ಯಶವಂತಪುರ ಎಪಿಎಂಸಿಯಲ್ಲಿರುವ ಟೊಮೊಟೊ ಮಂಡಿಯಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ರೈತರು, ವರ್ತಕರು ತಂದಿದ್ದ ಟೊಮೆಟೊ ಹರಾಜು ಪ್ರಕ್ರಿಯೆ ನಡೆಯಿತು. ಪ್ರತಿ ಬಾಕ್ಸ್‌ಗೆ 4,500 ರೂ.ಗೆ ಮಾರಾಟವಾಗಿದೆ. ಇದು ಮಾರುಕಟ್ಟೆಯಲ್ಲಿ ಕೆಜಿಗೆ 180 ರೂಪಾಯಿಗಳಿಗೆ ಸಿಗುತ್ತದೆ.
ಭಾನುವಾರ ಇದೇ ಬಾಕ್ಸ್‌ಗಳು 5,000 ರೂ.ಗೆ ಹರಾಜಾಗಿದ್ದು, ಕೆಜಿಗೆ ಸುಮಾರು 200 ರೂ. ತಲುಪಿವೆ. ಚಿಕ್ಕಮಗಳೂರಿನಿಂದ ಗುಜರಾತ್, ರಾಜಸ್ಥಾನ, ನವದೆಹಲಿ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಿಗೆ ಟೊಮೆಟೊ ಪೂರೈಕೆಯಾಗುತ್ತಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.












Click it and Unblock the Notifications