ಪಾಟ್ನಾ ಸರಣಿ ಬಾಂಬ್ ಸ್ಫೋಟದ ಆರೋಪಿ ಪರಾರಿ
ಪಾಟ್ನಾ, ಅ, 31 : ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಸಮಾವೇಶದ ಸಂದರ್ಭದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಆಲಂ ಎನ್ಐಎ ವಶದಿಂದ ಪರಾರಿಯಾಗಿದ್ದಾನೆ. ಆಲಂ ವಿಚಾರಣೆ ನಡೆಸುತ್ತಿದ್ದ ಎನ್ಐಎ ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿಒದೆ.
ಗುರುವಾರ ಮುಜಾಫುರ್ ನಗರ ಪೊಲೀಸ್ ಠಾಣೆಯ ಸಮೀಪದ ಲಾಡ್ಜ್ ವೊಂದರಲ್ಲಿ ಆಲಂ(25)ರನ್ನು ಎನ್ಐಎ ವಿಚಾರಣೆ ನಡೆಸುತ್ತಿತ್ತು. ಈ ಸಂದರ್ಭದಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಬುಧವಾರ ಬಿಹಾರದಲ್ಲಿ ಆಲಂರನ್ನು ಎನ್ಐಎ ವಶಕ್ಕೆ ಪಡೆದಿತ್ತು.

ಬುಧವಾರ ಆಲಂನನ್ನು ಬಂಧಿಸಿದ್ದ ಎನ್ಐಎ ತಂಡ ಸತತವಾಗಿ 10 ಗಂಟೆಗಳಿಂದ ಅವರ ವಿಚಾರಣೆ ನಡೆಸುತ್ತಿತ್ತು. ಗುರುವಾರ ಮಧ್ಯಾಹ್ನ ಸುಮಾರು 4 ಗಂಟೆ ಸುಮಾರಿಗೆ ಲಾಡ್ಜ್ ನಿಂದ ಆಲಂ ಪರಾರಿಯಾಗಿದ್ದಾನೆ. ನರೇಂದ್ರ ಮೋದಿ ಸಮಾವೇಶದ ಸಂದರ್ಭದಲ್ಲಿ ಪಾಟ್ನಾದ ಗಾಂಧಿ ಮೈದಾನ ಮತ್ತು ನಗರದ ಇತರ ಪ್ರದೇಶಗಳಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ತನಿಖೆಯನ್ನು ಬಿಹಾರ ಪೊಲೀಸರು ರಾಷ್ಟ್ರೀಯ ತನಿಖಾ ತಂಡ(ಎನ್ಐ)ಗೆ ವಹಿಸಿತ್ತು.
ಪಾಟ್ನಾದಿಂದ 130 ಕಿ.ಮೀ ದೂರವಿರುವ ಸಿಂಘುಲಿ ಪ್ರದೇಶದಿಂದ ಆಲಂ ಅವರನ್ನು ಬುಧವಾರ ಎನ್ಐಎ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಲೆ ಇಂಡಿಯಾನ್ ಮುಜಾಹಿದ್ದೀನ್ ಸಂಘಟನೆಯ ಹಸನ್ ಅಲಿ ಅವರ ಪರಿಚಯ ತನಗಿತ್ತು ಎಂದು ಒಪ್ಪಿಕೊಂಡಿದ್ದ.
ಪಾಟ್ನಾದಲ್ಲಿ ಬಾಂಬ್ ಸ್ಫೋಟ ಸಂಭವಿಸಿದಾಗ, ಆಲಂ ನಗರದ ಲಾಡ್ಜ್ ನಲ್ಲಿ ತಂಗಿದ್ದ ಎಂದು ಪೊಲೀಸರು ಹೇಳಿದ್ದರು. ವಿಚಾರಣೆ ವೇಳೆಯೇ ಆಲಂ ಎನ್ಐಎ ವಶದಿಂದ ತಪ್ಪಿಸಿಕೊಂಡಿದ್ದು, ತನಿಖೆಗೆ ಭಾರೀ ಮುಖಭಂಗ ಉಂಟು ಮಾಡಿದೆ.











Click it and Unblock the Notifications