ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್‌ ಕೋಟ್‌ ದಾಳಿ : ಪಾಕಿಸ್ತಾನದಲ್ಲಿ ಎಫ್‌ಐಆರ್ ದಾಖಲು

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 20 : ಪಂಜಾಬಿನ ಪಠಾಣ್‌ ಕೋಟ್‌ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಎಫ್‌ಐಆರ್‌ ದಾಖಲು ಮಾಡಿದೆ. ಆದರೆ, ಜೈಷ್‌ ಎ ಮೊಹಮ್ಮದ್ ಸಂಘಟನೆಯ ಉಗ್ರ ಮೌಲಾನ ಮಸೂದ್ ಅಜರ್‌ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಿಲ್ಲ.

ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ಆರು ಸದಸ್ಯರ ತನಿಖಾ ತಂಡ ಅನಾಮಿಕ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲು ಮಾಡಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರ ಜೊತೆ ಸಂಪರ್ಕದಲ್ಲಿರುವ ತನಿಖಾಧಿಕಾರಿಗಳು ಅಜರ್ ಅವರನ್ನು ವಿಚಾರಣೆ ನಡೆಸಿದ್ದೇವೆ ಎಂದು ಹೇಳಿದ್ದಾರೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

pathankot

'ದಾಳಿಯ ತನಿಖೆ ನಡೆಸುತ್ತಿರುವ ತಂಡ ಮಾರ್ಚ್‌ನಲ್ಲಿ ಭಾರತಕ್ಕೆ ಆಗಮಿಸಲಿದ್ದು, ಪಠಾಣ್ ಕೋಟ್‌ಗೆ ಭೇಟಿ ನೀಡಿ, ರಾಷ್ಟ್ರೀಯ ತನಿಖಾ ದಳದ (ಎಸ್‌ಐಎ) ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ' ಎಂದು ಅಜಿತ್ ಡೋವಲ್ ಹೇಳಿದ್ದಾರೆ. [ಪಾಕ್ ತನಿಖಾ ತಂಡ ಪಠಾಣ್ ಕೋಟ್ ಪ್ರವೇಶಿಸುವಂತಿಲ್ಲ]

ಪಠಾಣ್ ಕೋಟ್ ದಾಳಿಗೆ ಸಂಬಂಧಿಸಿದಂತೆ 20ಕ್ಕೂ ಅಧಿಕ ಜನರನ್ನು ಪಾಕಿಸ್ತಾನ ವಿಚಾರಣೆ ನಡೆಸಿದೆ. ಕೊಲೆ, ಕೊಲೆಯತ್ನ, ಭಯೋತ್ಪಾದಕ ಚಟುವಟಿಕೆ ನಡೆಸಿದ ಆರೋಪಗಳನ್ನು ಎಫ್ಐಆರ್‌ನಲ್ಲಿ ಮಾಡಲಾಗಿದೆ. ಪಾಕಿಸ್ತಾನದ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಡೋವಲ್ ತಿಳಿಸಿದ್ದಾರೆ. [ಪಠಾಣ್ ಕೋಟ್ ವಾಯುನೆಲೆ ವಿಶೇಷತೆಗಳೇನು?]

ಜೈಷ್‌ ಎ ಮೊಹಮ್ಮದ್ ಸಂಘಟನೆಯ ಉಗ್ರ ಮೌಲಾನ ಮಸೂದ್ ಅಜರ್‌ ಹೆಸರನ್ನು ಎಫ್‌ಐಆರ್‌ನಲ್ಲಿ ಸೇರಿಸಲು ಇನ್ನೂ ಸಾಕ್ಷಿ ಮತ್ತು ತನಿಖೆಯ ಅಗತ್ಯವಿದೆ ಎಂದು ಪಾಕ್ ಹೇಳಿದೆ. ವಾಯುನೆಲೆಗೆ ನುಗ್ಗಿದ ಉಗ್ರರು ಕರೆ ಮಾಡಿರುವ ನಂಬರ್‌ಗಳನ್ನು ಭಾರತ ಪಾಕ್‌ಗೆ ಕಳುಹಿಸಿತ್ತು. ಈ ನಂಬರ್‌ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

ಪಂಜಾಬ್‌ನ ಪಠಾಣ್ ಕೋಟ್ ವಾಯುನೆಲೆ ಭಾರತ ಮತ್ತು ಪಾಕಿಸ್ತಾನದ ಗಡಿಭಾಗದಿಂದ ಕೇವಲ 40 ಕಿ.ಮೀ.ದೂರದಲ್ಲಿದೆ. ಇದು ದೇಶದ ಮಹತ್ವದ ಸೇನಾ ನೆಲೆಯಾಗಿದೆ. ಜನವರಿ ಮೊದಲ ವಾರದಲ್ಲಿ ಈ ವಾಯುನೆಲೆಗೆ ನುಗ್ಗಿದ್ದ ಉಗ್ರರನ್ನು ಯೋಧರು ಹತ್ಯೆ ಮಾಡಿದ್ದರು.

English summary
Pakistan has been slow when it comes to the investigation into the Pathankot attack. An FIR was filed against unknown persons in Pakistan. However the name of Maulana Masood Azhar was not mentioned. Pakistan officials have been in touch with then National Security Advisor Ajit Doval.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X