ಪಠಾಣ್‌ ಕೋಟ್‌ಗೆ ಬಂದ ಉಗ್ರರು ಗಡಿ ದಾಟಿದ್ದು ಹೇಗೆ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಜನವರಿ 05 : ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಉಗ್ರರು ಗಡಿಯಿಂದ ನುಸುಳಿ ಬಂದಿದ್ದು ಹೇಗೆ? ಎಂಬ ತನಿಖೆ ಆರಂಭಿಸಿದೆ. ಗಡಿದಾಟಲು ಸ್ಥಳೀಯರು ಉಗ್ರರಿಗೆ ಸಹಾಯ ಮಾಡಿದ್ದರೆ ಎಂದು ತನಿಖೆ ನಡೆಸಲಾಗುತ್ತಿದೆ.

ವಾಯುನೆಲೆಗೆ ನುಗ್ಗಿದ ಉಗ್ರರು ಯಾವುದೇ ತೊಂದರೆ ಇಲ್ಲದಂತೆ ಭಾರೀ ಭದ್ರತೆಯ ಗಡಿ ನುಸುಳಿವೊಳ ಬಂದಿರುವುದು ಸಾಬೀತಾಗಿದೆ. ಡಿಸೆಂಬರ್ 25ರಂದೇ ಉಗ್ರರುವೊಳನುಸುಳುವ ಸಾಧ್ಯತೆ ಬಗ್ಗೆ ಬಿಎಸ್‌ಎಫ್ ಮಾಹಿತಿ ನೀಡಿತ್ತು, ಭದ್ರತೆ ಹೆಚ್ಚಿಸಲಾಗಿತ್ತು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

pathankot

ಎನ್‌ಐಎ ಅಧಿಕಾರಿಗಳು ಒನ್ ಇಂಡಿಯಾಕ್ಕೆ ನೀಡಿರುವ ಮಾಹಿತಿಯಂತೆ ವಾಯುನೆಲೆ ಮೇಲೆ ನಡೆದ ದಾಳಿಯ ಹಿಂದೆ ಸ್ಥಳೀಯರ ಸಹಕಾರವಿದೆ. ಉಗ್ರರು ಗಡಿದಾಟಿ ಬರಲು ಇವರೇ ಸಹಾಯ ಮಾಡಿದ್ದಾರೆ. ಎರಡು ತಂಡಗಳಲ್ಲಿ ಪಾಕಿಸ್ತಾನದಿಂದ ಬಂದ ಉಗ್ರರು ಇವರ ನೆರವಿನಿಂದಲೇ ಗಡಿದಾಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಪಠಾಣ್ ಕೋಟ್ ಕಾರ್ಯಾಚರಣೆ ಅಂತ್ಯ, 6 ಉಗ್ರರ ಹತ್ಯೆ]

ಎನ್‌ಐಎ ಅಧಿಕಾರಿಗಳು ಹೇಳುವ ಪ್ರಕಾರ ಗಡಿಯಲ್ಲಿ ಹಲವಾರು ಕಳ್ಳಸಾಗಣೆ ಚಟುವಟಿಕೆಗಳು ನಡೆಯುತ್ತವೆ. ಇವರ ಸಹಾಯ ಪಡೆದು ಉಗ್ರರು ಗಡಿದಾಟಿ ಬಂದಿರಬಹುದು ಎಂದು ಶಂಕಿಸಲಾಗಿದೆ. ದಾಳಿಯ ಬಗ್ಗೆ ಮೂರು ಪ್ರಕರಣ ದಾಖಲು ಮಾಡಿಕೊಂಡಿರುವ ಎನ್‌ಐಎ ತನಿಖೆಯನ್ನು ಮುಂದುವರೆಸಿದೆ. [ಎಷ್ಟು ಉಗ್ರರು ವಾಯುನೆಲೆಗೆ ನುಗ್ಗಿದ್ದರು?]

ನಿರಂಜನ್ ಅಂತ್ಯಕ್ರಿಯೆ : ಪಠಾಣ್‌ಕೋಟ್‌ ವಾಯುನೆಲೆಯನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕರ್ನಲ್ ನಿರಂಜನ್ ಕೆ.ಕುಮಾರ್ ಅವರ ಅಂತ್ಯಸಂಸ್ಕಾರ ಕೇರಳದಲ್ಲಿ ಮಂಗಳವಾರ ನಡೆಯಿತು. ಪಾಲಕ್ಕಾಡ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಯಿತು. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The National Investigating Agency which is probing the Pathankot terror attack is convinced that there were some elements along the Kathua-Gurdaspur border who helped the terrorists infiltrate.
Please Wait while comments are loading...