ಅಡ್ರೆಸ್ ಪ್ರೂಫ್ ಗೆ ಪಾಸ್ ಪೋರ್ಟ್ ಬಳಕೆ ಮಾಡುವಂತಿಲ್ಲ!

ನವದೆಹಲಿ, ಜನವರಿ 12: ಇನ್ಮುಂದೆ ವಿಳಾಸ ದೃಢೀಕರಣ ದಾಖಲೆಯಾಗಿ ಪಾಸ್ ಪೋರ್ಟ್ ಬಳಸಲು ಸಾಧ್ಯವಾಗುವುದಿಲ್ಲ. ಮುಂದಿನ ಸರಣಿಯ ಪಾಸ್ ಪೋರ್ಟ್ ಗಳಲ್ಲಿ ವಿಳಾಸವಿರುವ ಪುಟವೇ ಇರುವುದಿಲ್ಲ ಎಂಬ ಸುದ್ದಿ ಬಂದಿದೆ.

ಈ ಪ್ರಸ್ತಾವನೆಗೆ ವಿದೇಶಾಂಗ ಸಚಿವಾಲಯ ಸಮ್ಮತಿ ನೀಡಬೇಕಿದು, ಶೀಘ್ರದಲ್ಲೇ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಭಾರತದ ನಾಗರಿಕರಿಗೆ ವಿತರಿಸಲಾಗುವ ಮುಂದಿನ ಸರಣಿಯ ಪಾಸ್ಪೋರ್ಟ್ ಗಳಲ್ಲಿ ಹೊಸ ನಿಯಮ ಜಾರಿಗೆ ಬರುವ ಸಾಧ್ಯತೆ ಇದೆ. ಕೊನೆಯ ಪುಟ ಖಾಲಿ ಇರಲಿದೆ ಎಂದು ಪುಣೆಯ ರೀಜನಲ್ ಪಾಸ್ಪೋರ್ಟ್ ಕಚೇರಿಯ ಅಧಿಕಾರಿ ಜೆ.ಡಿ.ವೈಶಂಪಾಯನ್ ಹೇಳಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

Passports may no longer be valid proof of address

2012ರಿಂದ ವಿತರಣೆಯಾದ ಪಾಸ್ಪೋರ್ಟ್ ಗಳಲ್ಲಿ ಬಾರ್ ಕೋಡ್ ಅಳವಡಿಸಲಾಗಿದೆ. ಹೀಗಾಗಿ, ಮಾಹಿತಿ ಕಲೆ ಹಾಕುವುದು ಸುಲಭ. ಕೊನೆಯ ಪುಟದಲ್ಲಿರುವ ವಿವರಗಳು ಪಾಸ್ಪೋರ್ಟ್ ಕಚೇರಿಅಥವಾ ಇಮಿಗ್ರೇಶನ್ ಇಲಾಖೆಗೆ ಬೇಕಿಲ್ಲ. ಹೀಗಾಗಿ, ಕೊನೆಯ ಪುಟವನ್ನು ಖಾಲಿಯಾಗಿಡಲು ಚಿಂತನೆ ನಡೆದಿದೆ. ಹಾಲಿ ಬಳಕೆಯಲ್ಲಿರುವ ಎಲ್ಲಾ ಪಾಸ್ ಪೋರ್ಟ್ ಗಳು ಅವಧಿ ಮುಗಿಯುವ ತನಕ ಬಳಕೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+