ಸಂಸತ್ತಿನ ಭದ್ರತಾ ಲೋಪ: ಮತ್ತಿಬ್ಬರ ಬಂಧನ, ತನಿಖೆಗೆ ವಿಶೇಷ ಸೆಲ್‌ನ ಆರು ತಂಡ ರಚನೆ
ನವದೆಹಲಿ, ಡಿಸೆಂಬರ್ 15: ಸಂಸತ್ತಿನ ಭದ್ರತಾ ಉಲ್ಲಂಘನೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ದೆಹಲಿ ಪೊಲೀಸರ ವಿಶೇಷ ವಿಭಾಗವು ಪ್ರಕರಣದಲ್ಲಿ ಬಂಧಿತರಾದ ಐವರ ಜೊತೆಗಿನ ಸಂಬಂಧ ಹೊಂದಿದ್ದಾರೆ ಎಂದು ಇನ್ನೂ ಇಬ್ಬರನ್ನು ಬಂಧಿಸಿದೆ.
ಬಂಧಿತ ವ್ಯಕ್ತಿಗಳನ್ನು ಮಹೇಶ್ ಮತ್ತು ಕೈಲಾಶ್ ಎಂದು ಗುರುತಿಸಲಾಗಿದೆ. ಇಬ್ಬರೂ ರಾಜಸ್ಥಾನದ ನಿವಾಸಿಗಳಾಗಿದ್ದು 'ಜಸ್ಟೀಸ್ ಫಾರ್ ಆಜಾದ್ ಭಗತ್ ಸಿಂಗ್' ಎಂಬ ಸಾಮಾಜಿಕ ಮಾಧ್ಯಮ ಗುಂಪಿನೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎನ್ನಲಾಗಿದೆ. ವಿಶೇಷ ಸೆಲ್ ಕೌಂಟರ್ ಇಂಟೆಲಿಜೆನ್ಸ್ ಘಟಕದ ವಿಚಾರಣೆ ವೇಳೆ ಮಹೇಶ್ ಕೂಡ ದಾಳಿಯ ತಂಡದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದ್ದು, ಕಾರಣಾಂತರಗಳಿಂದ ಆತನನ್ನು ಕುಟುಂಬಸ್ಥರು ತಡೆದಿದ್ದರು ಎನ್ನಲಾಗಿದೆ.

ಇದಲ್ಲದೇ ಐದನೇ ಆರೋಪಿ ಮತ್ತು ಮಾಸ್ಟರ್ ಮೈಂಡ್ ಲಲಿತ್ ಝಾ ದೆಹಲಿಯಿಂದ ರಾಜಸ್ಥಾನದ ಕುಚಾಮನ್ ತಲುಪಿದ ನಂತರ ತನ್ನ ಸಹಚರರ ಮೊಬೈಲ್ ಫೋನ್ ಸುಟ್ಟು ಹಾಕಲು ಮಹೇಶ್ ಸಹಾಯ ಮಾಡಿದ್ದನು. ಕಳೆದ ರಾತ್ರಿ ಇಬ್ಬರು ಉಪ ಪೊಲೀಸ್ ಆಯುಕ್ತರು ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಲಲಿತ್ ಝಾ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು, ಈ ಸಮಯದಲ್ಲಿ ಅವರು ಇಡೀ ಘಟನೆಯನ್ನು ಅಧಿಕಾರಿಗಳಿಗೆ ವಿವರಿಸಿದರು ಎಂದು ತಿಳಿದು ಬಂದಿದೆ.
ಮೂಲಗಳ ಪ್ರಕಾರ, ವಿಚಾರಣೆ ವೇಳೆ ತಿಂಗಳ ಹಿಂದೆಯೇ ಸಂಸತ್ ಒಳಗೆ ದಾಳಿಗೆ ಸಿದ್ಧತೆ ನಡೆಸಿರುವುದು ತಿಳಿದು ಬಂದಿದೆ. ಸಂಸತ್ತಿಗೆ ಪ್ರವೇಶಿಸಲು ಪ್ರವೇಶ ಪಾಸ್ ಅಗತ್ಯವಾಗಿತ್ತು. ಅದು ಅವರ ಲಭ್ಯವಿರಲಿಲ್ಲ. ಲಲಿತ್ ಅವರು ಸಂಸತ್ತಿಗೆ ಸುಲಭವಾಗಿ ಪ್ರವೇಶಿಸಲು ಪಾಸ್ ವ್ಯವಸ್ಥೆ ಮಾಡುವ ಎಲ್ಲರಿಗೂ ಮನವಿ ಮಾಡಿದ್ದರು ಎನ್ನಲಾಗಿದೆ.
ರಾಜಸ್ಥಾನದ ಹೋಟೆಲ್‌ನಿಂದ ಲಲಿತ್ ನಡೆಯುತ್ತಿರುವ ಬೆಳವಣಿಗೆಗಳು ಮತ್ತು ಪೊಲೀಸ್ ಚಲನವಲನಗಳನ್ನು ಸುದ್ದಿ ವಾಹಿನಿಗಳ ಮೂಲಕ ನಿರಂತರವಾಗಿ ಗಮನಿಸುತ್ತಿದ್ದರು. ಪ್ರಕರಣದ ಹೆಚ್ಚಿನ ವಿವರಗಳನ್ನು ಪತ್ತೆಹಚ್ಚಲು ದೆಹಲಿ ಪೊಲೀಸರ ವಿಶೇಷ ಕೋಶವು ಆರು ತಂಡಗಳನ್ನು ರಚಿಸಿದ್ದು, ಅವರು ಲಕ್ನೋ, ಮೈಸೂರು, ಕರ್ನಾಟಕ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಆರೋಪಿಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ತನಿಖೆ ನಡೆಸಲಿದ್ದಾರೆ.
ಸಂಸತ್ತಿನಲ್ಲಿ ಶೂಗಳನ್ನು ಪರಿಶೀಲಿಸುವುದಿಲ್ಲ ಮತ್ತು ಸಂಸತ್ತಿನ ಒಳಗೆ ಹೊಗೆ ಡಬ್ಬಿ ಸಾಗಿಸಲು ಇದು ಸುಲಭವಾದ ಮಾರ್ಗವಾಗಿದೆ ಎಂದು ಆರೋಪಿಗಳು ಕಂಡುಕೊಂಡದ್ದರಿಂದ ಲಕ್ನೋದಲ್ಲಿ ಸ್ಪೆಷಲ್ ಆರ್ಡ್‌ರ್ ಕೊಟ್ಟು ಎರಡು ಜೋಡಿ ಶೂಗಳನ್ನು ತಯಾರಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ.
ದೆಹಲಿ ಪೊಲೀಸರ ವಿಶೇಷ ಕೋಶವು ಶನಿವಾರ ಅಥವಾ ಭಾನುವಾರದಂದು ಆರೋಪಿಗಳನ್ನು ಸಂಸತ್ತಿನ ಸಂಕೀರ್ಣಕ್ಕೆ ಕರೆದೊಯ್ಯುವ ಮೂಲಕ ಬುಧವಾರದ ಸಂಸತ್ತಿನ ಭದ್ರತಾ ಉಲ್ಲಂಘನೆಯ ದೃಶ್ಯವನ್ನು ಮರುಸೃಷ್ಟಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಅಪರಾಧದ ದೃಶ್ಯವನ್ನು ಮರುಸೃಷ್ಟಿಸಲು ಆರೋಪಿಗಳನ್ನು ಸಂಸತ್ತಿಗೆ ಕರೆದೊಯ್ಯಲಾಗುತ್ತದೆ. ಆರೋಪಿಗಳು ಕಲರ್ ಸ್ಪ್ರೇ ಮೂಲಕ ಸಂಸತ್ ಭವನವನ್ನು ಹೇಗೆ ಪ್ರವೇಶಿಸಿದರು ಮತ್ತು ಅವರು ತಮ್ಮ ಯೋಜನೆಯನ್ನು ಹೇಗೆ ಕಾರ್ಯಗತಗೊಳಿಸಿದರು ಎಂಬುದನ್ನು ಕಂಡುಹಿಡಿಯಲು ಇದು ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದು ವಿಶೇಷ ಕೋಶದ ಮೂಲಗಳು ತಿಳಿಸಿವೆ.












Click it and Unblock the Notifications