ಪೆನೇಶಿಯಾ ಬಯೋಟೆಕ್‌ಗೆ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಡಿಸಿಜಿಐ ಅನುಮತಿ

ನವದೆಹಲಿ, ಜುಲೈ 05: ದೇಶದಲ್ಲಿ ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಭಾರತೀಯ ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (DCGI) ಪೆನೇಶಿಯಾ ಬಯೋಟೆಕ್‌ಗೆ ಅನುಮತಿ ನೀಡಿದೆ.

ಪೆನೇಶಿಯಾ ಬಯೋಟೆಕ್ ಸೋಮವಾರ ಈ ವಿಷಯ ಘೋಷಣೆ ಮಾಡಿದೆ. ಸ್ಪುಟ್ನಿಕ್ ವಿ ಲಸಿಕೆಯನ್ನು ಭಾರತದಲ್ಲಿ ತುರ್ತು ಬಳಕೆಯ ಮಾನ್ಯತೆಗೆ 2021ರ ಏಪ್ರಿಲ್ 12ರಂದು ನೋಂದಣಿ ಮಾಡಲಾಗಿತ್ತು.

ಹಿಮಾಚಲ ಪ್ರದೇಶದ ಬದ್ದಿಯಲ್ಲಿ ಪೆನೇಷಿಯಾ ಬಯೋಟೆಕ್ ಕೇಂದ್ರದಲ್ಲಿ ತಯಾರಿಸಿದ ಲಸಿಕೆಯನ್ನು ಗುಣಮಟ್ಟದ ಪರೀಕ್ಷೆಗಾಗಿ ರಷ್ಯಾದ ಗಮಾಲೆಯಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಗುಣಮಟ್ಟಕ್ಕೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಪೂರೈಸಲಾಗಿದೆ ಎಂದು ಪೆನೇಶಿಯಾ ತಿಳಿಸಿದೆ.

Panacea Biotech Receives License From DCGI To Produce Sputnik V

"ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ತಯಾರಿಸಲು ಅನುಮತಿ ದೊರೆತಿದೆ. ಲಸಿಕೆ ತಯಾರಿಕೆಗೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆಗಳಿಗೆ ಅನುಮೋದನೆ ನೀಡಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಭಾರತ ಸರ್ಕಾರಕ್ಕೆ ಕೃತಜ್ಞತೆಗಳು" ಎಂದು ಪೆನೇಶಿಯಾ ಬಯೋಟೆಕ್ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಜೈನ್ ಹೇಳಿದ್ದಾರೆ.

ಸ್ಪುಟ್ನಿಕ್ ವಿ ಲಸಿಕೆಯು ಜಾಗತಿಕವಾಗಿ 54 ದೇಶಗಳಲ್ಲಿ ನೋಂದಣಿಯಾಗಿದೆ. ಲ್ಯಾನ್ಸೆಟ್ ನಿಯತಕಾಲಿಕೆಯು, ಸ್ಪುಟ್ನಿಕ್ ವಿ ಲಸಿಕೆಯು ಕೊರೊನಾ ವಿರುದ್ಧ 91.6% ದಕ್ಷತೆ ಹೊಂದಿದೆ ಎಂದು ಉಲ್ಲೇಖಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+