ಪ್ರಧಾನಿ ಮೋದಿ ಅಮೆರಿಕಾ ಪ್ರವಾಸ ವಿರೋಧಿಸಲು ಪಾಕಿಸ್ತಾನ ಪಿತೂರಿ, ಇಲ್ಲಿದೆ ಪೂರ್ಣ ಮಾಹಿತಿ
ನವದೆಹಲಿ, ಜೂನ್ 18: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇದೇ ವಾರಾಂತ್ಯಕ್ಕೆ ವಿಶ್ವದ ದೊಡ್ಡಣ್ಣ ರಾಷ್ಟ್ರ ಅಮೆರಿಕ (US) ದೇಶಕ್ಕೆ ಭೇಟಿ ಕೊಡಲಿದ್ದಾರೆ. ಈ ಸಂಬಂಧ ಈಗಾಗಲೇ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಯುಎಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಖಲಿಸ್ತಾನ್ ಪರ ಸಂಘಟನೆಗಳು ಮತ್ತು ಭಾರತದ ವಿರುದ್ಧ ಕೆಲಸ ತಂತ್ರ ಹೆಣೆಯಲು, ಹಲವಾರು ಗುಂಪುಗಳೊಂದಿಗೆ ಗೌಪ್ಯ ಸಭೆಗಳನ್ನು ಮಾಡಿದೆ ಎಂಬ ವರದಿ ಬಹಿರಂಗಗೊಂಡಿದೆ.
ಮೂಲಗಳ ಪ್ರಕಾರ, ಪ್ರಧಾನಮಂತ್ರಿ ಮೋದಿ ಅವರ ಅಮೆರಿಕ ಭೇಟಿಯನ್ನು ವಿರೋಧಿಸಲು ಪಾಕಿಸ್ತಾನದ ಐಎಸ್‌ಐ ಕಳೆದ ಹಲವು ದಿನಗಳಿಂದ ಅಮೆರಿಕದಲ್ಲಿ ಸಕ್ರಿಯವಾಗಿದೆ. ಕೆಲವು ಗುಂಪುಗಳೊಂದಿಗೆ ನಿರಂತರ ಸಂಪರ್ಕ ಸಾಧಿಸುವ ಜೊತೆಗೆ ಮೇಲಿಂದ ಮೇಲೆ ಸಭೆ ನಡೆಸಿದೆ. ಈ ಮೂಲಕ ಭಾರತದ ವಿರುದ್ಧದ ಪಿತೂರಿ ನಡೆಸಲು ಒಂದಷ್ಟು ಗುಂಪು/ಸಂಸ್ಥೆಗಳಿಗೆ ಹಣ ಸಹ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಭಾರತದ ಪ್ರಧಾನಿ ಮೋದಿ ಅವರ ಜೊತೆಗೆ ಅಮೆರಿಕಾ ದೇಶದ ಅಧ್ಯಕ್ಷರು ಯಾವ ವಿಚಾರ ಚರ್ಚಿಸಲಿದ್ದಾರೆ. ಭೇಟಿ ವೇಳೆ ಏನೆಲ್ಲ ಕಾರ್ಯಕ್ರಮ ನಡೆಯಲಿವೆ. ಜೊತೆಗೆ ಯುಸ್ ಮೋದಿ ಸ್ವಾಗತಿಸಲು ಯಾವ ರೀತಿಯ ಸಿದ್ಧತೆ ಮಾಡಿಕೊಂಡಿದೆ ಎಂಬ ಅಂಶಗಳ ಬಗ್ಗೆ ವಿರೋಧಿ ಪಾಕಿಸ್ತಾನ ಸಾಕಷ್ಟು ಚಿಂತೆ ಮಾಡುತ್ತಿದೆ. ಎರಡು ದೇಶಗಳ ಚಲನವನಗಳ ಮೇಲೆ ನಿಗಾ ಇಡುತ್ತಿದೆ ಎಂದು ವರದಿ ಯಾಗಿದೆ.
ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ
ಸದ್ಯ ಪ್ರಧಾನಿ ನರೇಂದ್ರ ಮೋದಿ ಅವರಿಂದ ವಿಶ್ವಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗುತ್ತಿದೆ. ಇದು ಪಾಪಿ ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ. ಈ ಕಾರಣಕ್ಕಾಗಿ ಭಾರತದ ಪ್ರಧಾನಿಯನ್ನು ವಿರೋಧಿಸಲು ಟೂಲ್‌ಕಿಟ್ ಅನ್ನು ಸಹ ಸಿದ್ಧಪಡಿಸಿಕೊಳ್ಳುತ್ತಿದೆ ಎಂದು ತಿಳಿದು ಬಂದಿದೆ.
ಪ್ರಧಾನಮಂತ್ರಿಗಳ ಅಮೆರಿಕಾ ಭೇಟಿ, ಸ್ವಾಗತದಂತಹ ಸಿದ್ಧತೆಗಳು ನಡೆದಿವೆ. ಅಲ್ಲಿನ ಕಾರ್ಯಕ್ರಮ, ಪ್ರದರ್ಶನದ ಸ್ಥಳಕ್ಕೆ ಉಸ್ತುವಾರಿಗಳನ್ನು ಸಾಗಿಸಲು ಬಸ್ ಸಹ ನಿಗದಿ ಮಾಡಲಾಗಿದೆ. ಇನ್ನೂ ಭಾರತದ ವಿರುದ್ಧ ಐಎಸ್‌ಐ ರೂಪಿಸಿರುವ ಷಡ್ಯಂತ್ರದ ಪ್ರಕಾರ, ಪ್ರಧಾನಿ ಮೋದಿ ಅಮೆರಿಕದಲ್ಲಿದ್ದಾಗ ಆ ದೇಶದಲ್ಲಿ ವಿವಿಧ ಸಂಚಾರ ಮಾರ್ಗಗಳಲ್ಲಿ ಮೋದಿ ವಿರುದ್ಧದ ಪೋಸ್ಟರ್‌ಗಳನ್ನು ಹಾಕಲು ಪಾಕಿಸ್ತಾನ್ ಐಎಸ್‌ಐ ಗುಂಪುಗಳು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನೂ ಪ್ರತಿಭಟನೆಗೆ ಉತ್ತೇಜನ ನೀಡಲು #ModiNotWelcome ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಸಹ ರಚಿಸಲಾಗಿದೆ. ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಲು ಯೋಜಿಸಲಾಗಿದೆ. ಇದರಲ್ಲಿ ಭಾರತೀಯ ಸೇನೆಯ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ನಕಲಿ ಪ್ರಚಾರದ ಪೋಸ್ಟರ್‌ಗಳು ಸೇರಿವೆ ಎಂದು ವರದಿಯಾಗಿದೆ.












Click it and Unblock the Notifications