OYO: ಓಯೋಗೆ ಕೋಟಿ... ಕೋಟಿ ರೂ. ಆದಾಯ: ಓಯೋ ಹೊಸ ಪ್ಲಾನ್ ಏನು...
ಓಯೋಗೆ ದೇಶದಲ್ಲಿ ದಿನದಿಂದ ದಿನಕ್ಕೆ ಡಿಮ್ಯಾಂಡ್ ಜಾಸ್ತಿ ಆಗುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಓಯೋಗೆ ಬರುವವರ ಸಂಖ್ಯೆ ಸಿಕ್ಕಾಪಟ್ಟೆ ಜಾಸ್ತಿಯಾಗುತ್ತಿದೆ. ಈ ಹೋಟೆಲ್ ಡಿಮ್ಯಾಂಡ್ ಜಾಸ್ತಿ ಆಗುತ್ತಿರುವುದರ ಜೊತೆ ಜೊತೆಗೆ ಓಯೋ ಸಂಸ್ಥೆಗೆ ಕೋಟಿ.. ಕೋಟಿ ...ಆದಾಯ ಹರಿದು ಬರುತ್ತಿದೆ. ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ರೆಡ್‌ಸ್ಪ್ರಿಗ್ ಇನ್ನೋವೇಶನ್ ಪಾರ್ಟ್‌ನರ್ಸ್‌ನಿಂದಲೇ ಬರೋಬ್ಬರಿ 550 ಕೋಟಿ ರೂಪಾಯಿ ಆದಾಯ ಬಂದಿದೆ. ಹೌದು ಈ ವರ್ಷ ಹೊಸ ವರ್ಷದಲ್ಲಿ ಯುವ ಸಮೂಹ ಓಯೋ ಹೋಟೆಲ್‌ಗಳಲ್ಲಿ ಮಿಂದೆದ್ದು ಸಂಭ್ರಮಿಸಿದೆ. ಇದರಿಂದ ಆದಾಯವೂ ಹೆಚ್ಚಾಗಿದೆ. ದುಡ್ಡಿನ ಮಳೆಯನ್ನೇ ಒಯೋ ಸಂಸ್ಥೆ ಈ ಬಾರಿ ನೋಡಿದೆ. ಹಾಗಾದರೆ ಓಯೋಗೆ ಎಷ್ಟು ಹಣ ಹರಿದು ಬಂದಿದೆ. ಏನೆಲ್ಲಾ ಬೆಳವಣಿಗೆ ನಡೆದಿದೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಭಾರತದಲ್ಲಿ ಮಾತ್ರ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಓಯೋ ಹೋಟೆಲ್‌ಗಳಿಗೆ ವಿವಿಧ ಕಾರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಓಯೋ ಇದೀಗ ಜಾಗತಿಕವಾಗಿ ಅಭಿವೃದ್ಧಿ ಆಗಿದೆ. ಓಯೋದ ಮೇಲೆ ಹೂಡಿಕೆ ಮಾಡುವವರ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಓಯೋ ಕಸ್ಟಮರ್ ರೇಟಿಂಗ್ ಉತ್ತಮವಾಗುತ್ತಿದ್ದು. ಜನರ ಬೇಡಿಕೆಗೆ ತಕ್ಕಂತೆ ತನ್ನ ಸೇವೆಯನ್ನ ಬದಲಾಯಿಸುತ್ತಿರುವುದಾಗಿ ಓಯೋ ಹೇಳಿಕೊಂಡಿದೆ. ಇನ್ನು ಓಯೋ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಹೊಸ ಹೋಟೆಲ್‌ಗಳನ್ನು ಪ್ರಾರಂಭಿಸುವ ಪ್ಲಾನ್ ಸಹ ಮಾಡಿಕೊಳ್ಳುತ್ತಿದೆ ಎಂದು ಹೇಳಲಾಗಿದೆ.

ಕಳೆದ ತಿಂಗಳು 100 ಕೋಟಿ ಮೌಲ್ಯದ OYO ಷೇರುಗಳ ಹಂಚಿಕೆಯಾಗಿದೆ ಅಂತ ಹೇಳಲಾಗಿದ್ದು. ಕಂಪನಿ ಲಾಭ ಗಳಿಸುತ್ತಿರುವುದು ಮಾರುಕಟ್ಟೆಯಲ್ಲಿ ಗಮನಾರ್ಹ ಬೆಳವಣಿಗೆಗೆ ಕಾರಣವಾಗಿದೆ. ಅಲ್ಲದೆ ಓಯೋ ತನ್ನ ರೇಟಿಂಗ್ ಅನ್ನು ಸಹ ಹೆಚ್ಚಿಸಿಕೊಂಡಿದೆ. ಉತ್ತಮ ಸೇವೆ ಹಾಗೂ ಕಸ್ಟಮರ್ ಫ್ರೆಂಡ್ಲಿ ಸೇರಿದಂತೆ ವಿವಿಧ ಕಾರಣಕ್ಕೆ ಒಯೋ ಸಂಸ್ಥೆಯ ರೇಟಿಂಗ್ B3 ಯಿಂದ B2ಗೆ ಅಪ್‌ಗ್ರೇಡ್ ಆಗಿದೆ.
ವಿದೇಶದಿಂದ ಭರ್ಜರಿ ಹೂಡಿಕೆ: ಓಯೋ ಸಂಸ್ಥೆಗೆ ಭಾರತದಿಂದ ಮಾತ್ರವಲ್ಲ ವಿದೇಶದಿಂದಲೂ ಭರ್ಜರಿ ಹೂಡಿಕೆ ಬರ್ತಿದೆ. ಭಾರತ, ಯುರೋಪ್ ಮತ್ತು ಆಗ್ನೇಯ ಏಷ್ಯಾ ಸೇರಿದಂತೆ 35ಕ್ಕೂ ಹೆಚ್ಚು ದೇಶಗಳಲ್ಲಿ ಸಾವಿರಾರು ಹೋಟೆಲ್‌ಗಳು ಇವೆ. ಇನ್ನು ಆರ್ಥಿಕವಾಗಿ OYO 2023-24ರಲ್ಲಿ ಭರ್ಜರಿ ಲಾಭ ಮಾಡಿಕೊಂಡಿದೆ. ಇದಕ್ಕೂ ಹಿಂದೆ ಬರೋಬ್ಬರಿ 229.5 ಕೋಟಿ ನಿವ್ವಳ ಲಾಭ ಮಾಡಿಕೊಂಡಿತ್ತು ಎನ್ನುತ್ತದೆ ವರದಿ.
ಒಯೋ ಡಿಮ್ಯಾಂಡ್ ಜೋರು: ಓಯೋಗೆ ಹೊಸ ವರ್ಷ ಹಾಗೂ ವ್ಯಾಲೆಂಟೀನ್ ದಿನಗಳಲ್ಲಿ ಭರ್ಜರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅಲ್ಲದೆ ಯುವ ಸಮೂಹವೇ ಓಯೋಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಓಯೋಗೆ ಯುವಕ ಹಾಗೂ ಯವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದಕ್ಕೂ ಸಂಪ್ರದಾಯಸ್ಥರಿಂದ ವಿರೋಧ ವ್ಯಕ್ತವಾಗುತ್ತಿದೆ. ಇದರ ನಡುವೆ ಉತ್ತರ ಪ್ರದೇಶದಲ್ಲಿ ವಿವಾಹಿತರಿಗೆ ಮಾತ್ರ ಓಯೋ ಪ್ರವೇಶ ಎನ್ನುವ ಹೊಸ ನಿಯಮವನ್ನು ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ನಿಯಮ ದೇಶದಾದ್ಯಂತ ಜಾರಿಯಾಗುವ ಸಾಧ್ಯತೆ ಇದೆ.












Click it and Unblock the Notifications