ಡಿಜಿಟಲ್ ಪೇಮೆಂಟ್: 8 ಲಕ್ಷ ಗ್ರಾಹಕರಿಗೆ 133 ಕೋಟಿ ರು. ಬಹುಮಾನ
ಅಪನಗದೀಕರಣದ ನಂತರ ನಗದು ರಹಿತ ವ್ಯವಹಾರಗಳನ್ನು ಉತ್ತೇಜನಗೊಳಿಸಲು ಕಳೆದ ವರ್ಷಾಂತ್ಯಕ್ಕೆ ಆರಂಭಿಸಲಾಗಿದ್ದ ಯೋಜನೆ.
ನವದೆಹಲಿ, ಫೆಬ್ರವರಿ 12: ಡಿಜಿಟಲ್ ಪೇಮೆಂಟ್ ಯೋಜನೆಯಡಿ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ 'ಲಕ್ಕಿ ಗ್ರಾಹಕ್ ಯೋಜನಾ' ಹಾಗೂ 'ಡಿಜಿ ಧನ್ ವ್ಯಾಪಾರ್ ಯೋಜನಾ'ದಡಿ ಈವರೆಗೆ ಸುಮಾರು 8 ಲಕ್ಷ ಅದೃಷ್ಟವಂತ ಗ್ರಾಹಕರಿಗೆ 133 ರು.ಗಳಷ್ಟು ಬಹುಮಾನ ವಿತರಿಸಲಾಗಿದೆ ಎಂದು ಕೇಂದ್ರ ನೀತಿ ಆಯೋಗ ತಿಳಿಸಿದೆ.
ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿರುವ ನೀತಿ ಆಯೋಗ, ಡಿಜಿ ಧನ್ ಮೇಳದ ಅಡಿಯಲ್ಲಿ ನೂರು ದಿನಗಳ ಕಾಲ ಲಕ್ಕಿ ಗ್ರಾಹಕರಿಗೆ ಬಹುಮಾನ ವಿತರಿಸುವ ಯೋಜನೆಯನ್ನು ಆರಂಭಿಸಿ 50 ದಿನಗಳಾಗಿವೆ. ಇಷ್ಟು ದಿನಗಳಲ್ಲಿ 8 ಲಕ್ಷ ಗ್ರಾಹಕರು ಆಯೋಗ ನೀಡುವ ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದು ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್ 25ರಂದು 'ಲಕ್ಕೀ ಗ್ರಾಹಕ್ ಯೋಜನಾ' ಹಾಗೂ 'ಡಿಜಿ ಧನ್ ವ್ಯಾಪಾರ್ ಯೋಜನಾ' ಸ್ಕೀಂ ಗಳಿಗೆ ಚಾಲನೆ ನೀಡಲಾಗಿತ್ತು. ಇದೇ ವರ್ಷ ಏಪ್ರಿಲ್ 14ರಂದು ಈ ಸ್ಕೀಂಗಳು ಅಂತ್ಯಗೊಳ್ಳಲಿವೆ.












Click it and Unblock the Notifications