NCRB Data: ಗುಜರಾತ್‌ನಲ್ಲಿ 5 ವರ್ಷದಲ್ಲಿ 40 ಸಾವಿರ ಮಹಿಳೆಯರ ಕಣ್ಮರೆ: ಆಘಾತಕಾರಿ ಮಾಹಿತಿ ಬಹಿರಂಗ

ಭಾರತದಲ್ಲಿ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಗುಜರಾತ್ ಮಾಡೆಲ್ ಎನ್ನುವ ಪರ ಮುಂಚೂಣಿಗೆ ಬರುತ್ತದೆ. ಆದರೆ, ಇದೇ ಗುಜರಾತ್‌ನಲ್ಲಿ ಕಳೆದ ಐದು ವರ್ಷಗಳಲ್ಲಿ 40,000 ಕ್ಕೂ ಹೆಚ್ಚಿನ ಮಹಿಳೆಯರು ನಾಪತ್ತೆಯಾಗಿದ್ದಾರೆ ಎನ್ನುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಅಂಕಿಅಂಶಗಳು ಈ ಮಾಹಿತಿಯನ್ನು ನೀಡಿದೆ. 2016 ರಲ್ಲಿ 7,105, 2017 ರಲ್ಲಿ 7,712, 2018 ರಲ್ಲಿ 9,246 ಮತ್ತು 2019 ರಲ್ಲಿ 9,268 ಮಹಿಳೆಯರು ಕಾಣೆಯಾಗಿದ್ದಾರೆ. 2020ರಲ್ಲಿ ರಾಜ್ಯದಲ್ಲಿ 8,290 ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ 41,621 ಮಹಿಳೆಯರು ಕಾಣೆಯಾಗಿದ್ದಾರೆ.

 Over 40,000 Women Missing in Gujarat in Five Years: NCRB Data Says

ಅಹಮದಾಬಾದ್ ಮತ್ತು ವಡೋದರಾದಲ್ಲಿ ಕೇವಲ ಒಂದು ವರ್ಷದಲ್ಲಿ (2019-20) 4,722 ಮಹಿಳೆಯರು ನಾಪತ್ತೆಯಾಗಿದ್ದಾರೆ ಎಂದು 2021ರಲ್ಲಿ ಗುಜರಾತ್ ಸರ್ಕಾರವೇ ವಿಧಾನಸಭೆಯಲ್ಲಿ ಹೇಳಿಕೆ ನೀಡಿದೆ.

ಮಾಜಿ ಐಪಿಎಸ್ ಅಧಿಕಾರಿ ಮತ್ತು ಗುಜರಾತ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸುಧೀರ್ ಸಿನ್ಹಾ, "ಕೆಲವು ನಾಪತ್ತೆ ಪ್ರಕರಣಗಳಲ್ಲಿ, ಹುಡುಗಿಯರು ಮತ್ತು ಮಹಿಳೆಯರನ್ನು ಸಾಂದರ್ಭಿಕವಾಗಿ ಗುಜರಾತ್ ಹೊರತುಪಡಿಸಿ ಇತರ ರಾಜ್ಯಗಳಿಗೆ ಕಳುಹಿಸಲಾಗುತ್ತದೆ ಮತ್ತು ವೇಶ್ಯಾವಾಟಿಕೆಗೆ ದೂಡುವುದು ನಮ್ಮ ಗಮನಕ್ಕೆ ಬಂದಿದೆ" ಎಂದು ಹೇಳಿದ್ದಾರೆ.

"ಪೊಲೀಸ್ ಇಲಾಖೆ ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಇಂತಹ ಕೊಲೆಗಿಂತ ಗಂಭೀರವಾಗಿದೆ. ಏಕೆಂದರೆ ಮಗು ನಾಪತ್ತೆಯಾದಾಗ, ಪೋಷಕರು ತಮ್ಮ ಮಗುವಿಗಾಗಿ ವರ್ಷಗಳ ಕಾಲ ಕಾಯುತ್ತಾರೆ ಮತ್ತು ನಾಪತ್ತೆ ಪ್ರಕರಣವನ್ನು ಕೊಲೆ ಪ್ರಕರಣದಂತೆಯೇ ಕಟ್ಟುನಿಟ್ಟಾಗಿ ತನಿಖೆ ಮಾಡಬೇಕು, "ಎಂದು ಅವರು ಒತ್ತಾಯ ಮಾಡಿದ್ದಾರೆ.

"ಕಾಣೆಯಾದ ವ್ಯಕ್ತಿಗಳ ಪ್ರಕರಣಗಳನ್ನು ಪೊಲೀಸರು ನಿರ್ಲಕ್ಷಿಸಲು ಕಾರಣ ಏಕೆಂದರೆ ಅಂತಹ ಪ್ರಕರಣಗಳನ್ನು ಬ್ರಿಟಿಷ್ ಕಾಲದ ರೀತಿಯಲ್ಲಿ ತನಿಖೆ ಮಾಡಲಾಗುತ್ತಿದೆ" ಎಂದು ಸಿನ್ಹಾ ಆರೋಪಿಸಿದ್ದಾರೆ.

ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಡಾ.ರಾಜನ್ ಪ್ರಿಯದರ್ಶಿ ಈ ವರದಿಗೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡಿದ್ದು, ಹೆಣ್ಣುಮಕ್ಕಳು ಕಾಣೆಯಾಗಲು ಮಾನವ ಕಳ್ಳಸಾಗಣೆಯೇ ಕಾರಣ. ನನ್ನ ಅಧಿಕಾರಾವಧಿಯಲ್ಲಿ, ಕಾಣೆಯಾದ ಮಹಿಳೆಯರಲ್ಲಿ ಹೆಚ್ಚಿನವರು ಅಕ್ರಮ ಮಾನವ ಕಳ್ಳಸಾಗಣೆ ಗುಂಪುಗಳಿಂದ ಅವರನ್ನು ಬೇರೆ ರಾಜ್ಯಕ್ಕೆ ಸಾಗಿಸಿ ಮಾರಾಟ ಮಾಡುತ್ತಾರೆ ಎಂದು ನಾನು ಗಮನಿಸಿದ್ದೇನೆ." ಎಂದು ಗಂಭೀರ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

"ನಾನು ಖೇಡಾ ಜಿಲ್ಲೆಯಲ್ಲಿ ಪೊಲೀಸ್ ಅಧೀಕ್ಷಕ (ಎಸ್‌ಪಿ) ಆಗಿದ್ದಾಗ, ಜಿಲ್ಲೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ಬಡ ಹುಡುಗಿಯನ್ನು ಎತ್ತಿಕೊಂಡು ತನ್ನ ತಾಯ್ನಾಡಿನಲ್ಲಿ ಮಾರಾಟ ಮಾಡಿದನು, ಅಲ್ಲಿ ಅವಳನ್ನು ಕೃಷಿ ಕಾರ್ಮಿಕ ಕೆಲಸಕ್ಕೆ ಸೇರಿಸಲಾಯಿತು. ನಾವು ಅವಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ, ಆದರೆ ಅನೇಕ ಸಂದರ್ಭಗಳಲ್ಲಿ ಇದು ಯಶಸ್ವಿಯಾಗಲು ಸಾಧ್ಯವಿಲ್ಲ" ಎಂದು ಹೇಳಿದರು.

ಗುಜರಾತ್ ಕಾಂಗ್ರೆಸ್‌ನ ವಕ್ತಾರ ಹಿರೇನ್ ಬ್ಯಾಂಕರ್ ಮಾತನಾಡಿ, "ಬಿಜೆಪಿ ನಾಯಕರು ಕೇರಳದಲ್ಲಿ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ ಆದರೆ ದೇಶದ ಪ್ರಧಾನಿ ಮತ್ತು ಗೃಹ ಸಚಿವರ ತವರು ರಾಜ್ಯವಾದ ಗುಜರಾತ್‌ನಲ್ಲಿ 40,000 ಕ್ಕೂ ಹೆಚ್ಚು ಮಹಿಳೆಯರು ಕಾಣೆಯಾಗಿದ್ದಾರೆ" ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+